ಹೊನ್ನಾವರ:ಕಸದ ಕೊಂಪೆಯಾಗಿ ದುರ್ನಾತ ಹರಡುವ ಜೊತೆಗೆ ಸಮೀಪದ ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟುಮಾಡಿದ್ದ ಪಟ್ಟಣದ ಬಾಜಾರದಲ್ಲಿನ ಸಾರ್ವಜನಿಕ ಶೌಚಾಲಯ ಸಮೀಪದ ಜಾಗ ಈಗ ಹೊಸ ರೂಪ ಪಡೆದಿದೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಏಸು ಬೆಂಗಳೂರು ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರ ತಂಡ ಸ್ಥಳದಲ್ಲಿ ಶುಚಿ ಕಾರ್ಯ ಕೈಗೊಂಡಿದೆ. ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಅಲ್ಲಿ ಗಿಡ ನೆಟ್ಟು ಅವುಗಳಿಗೆ ಬೇಲಿ ನಿರ್ಮಿಸಿರುವ ಜೊತೆಗೆ ಶೌಚಾಲಯದ ಗೊಡೆಗೆ ಬಣ್ಣ ಹಚ್ಚಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಚಿತ್ರಗಳ ಆಕರ್ಷಣೆ ಒದಗಿಸಲಾಗಿದೆ.

‘ಬಾಜಾರ ರಸ್ತೆಯ ಸಾರ್ವಜನಿಕ ಶೌಚಾಲಯದ ಸಮೀಪ ಸರ್ಕಾರಿ ಶಾಲೆ ಇದೆ. ಪಟ್ಟಣ ಪಂಚಾಯಿತಿ ವಾಹನಕ್ಕೆ ಕಸ ನೀಡುವ ಬದಲು ಕೆಲವರು ಈ ಜಾಗದಲ್ಲೇ ಕಸ ಸುರಿದು ಇಡೀ ವಾತಾವರಣವನ್ನು ಮಲಿನಗೊಳಿಸಿದ್ದರು. ದೀರ್ಘ ಕಾಲದ ಪ್ರಸ್ತುತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಟ್ಟಣ ಪಂಚಾಯಿತಿಯ ಕಮ್ಯುನಿಟಿ ಮೊಬಲೀಸರ್, ವಿವಿಧ ಸಂಘ-ಸಂಸ್ಥೆಗಳು ಹಾಗೂ ಪೌರ ಕಾರ್ಮಿಕರು ಜಂಟಿ ಕಾರ್ಯಾಚರಣೆ ನಡೆಸಿ ಜಾಗವನ್ನು ಸ್ವಚ್ಛಗೊಳಿಸಿದರು’ ಎಂದು ಪ್ರಭಾರ ಕಿರಿಯ ಆರೋಗ್ಯ ನಿರೀಕ್ಷಕಿ ಸ್ವಾತಿ ರಸಾಳೆ ತಿಳಿಸಿದರು.

‘ಪ್ರಸ್ತುತ ಜಾಗದಲ್ಲಿ ಮಾಲಿನ್ಯ ತಡೆಗಟ್ಟುವ ಜೊತೆಗೆ ಸ್ವಚ್ಛತೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಉದ್ದೇಶವಾಗಿತ್ತು. ಪಟ್ಟಣದ ನೈರ್ಮಲ್ಯ ಕಾಪಾಡಿ ಇದನ್ನು ಸುಂದರವಾಗಿಡುವ ಪ್ರಯತ್ನಕ್ಕೆ ಜನರ ಸಹಕಾರ ಅಗತ್ಯ’ ಎಂದು ಮುಖ್ಯಾಧಿಕಾರಿ ಏಸು ಬೆಂಗಳೂರ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-20-1326377089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.