ಕುಮಟಾ: ಹುಬ್ಬಳ್ಳಿಯ ವಿಮಾನ ನಿಲ್ದಾಣ ರಸ್ತೆಯ ರಾಯಲ್ ರಿಟೀಜ್ ಹೊಟೆಲ್ನಲ್ಲಿ ಏ.26ರಂದು ನಡೆಯುವ ’ಅಹಿಂದ 25 ಹೋರಾಟ ಸಾಧನೆ-ಸಂಕಲ್ಪ’ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಅಹಿಂದ ಮುಖಂಡ, ವಕೀಲ ಆರ್.ಜಿ.ನಾಯ್ಕ ಮನವಿ ಮಾಡಿದ್ದಾರೆ.

ಶುಕ್ರವಾರ ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,` ಬುದ್ಧ, ಜ್ಯೋತಿರಾವ್ ಪುಲೆ, ನಾರಾಯಣ ಗುರು, ಪೆರಿಯಾರ್ ಅಂಥವರು ಆಗ ರೂಪಿಸಿದ ಅಹಿಂದ ಪರಿಕಲ್ಪನೆ ಮುಖ್ಯ ಮಂತ್ರಿಗಳಾದಿದ್ದ.ದೇವರಾಜ ಅರಸು, ಎಸ್. ಬಂಗಾರಪ್ಪ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುನ್ನೆಲೆಗೆ ತಂದು ಅನುಷ್ಠಾನಗೊಳಿಸುತ್ತಿದ್ದಾರೆ. ಅವಕಾಶ ವಂಚಿತರಿಗೆ ಸಂವಿಧಾನ ದತ್ತ ಸಮಾನ ಅವಕಾಶ ನೀಡುವ ಮೂಲಕ ಸಹಬಾಳ್ವೆಯ ಸಮಾಜ ಕಟ್ಟುವುದೇ ಅಹಿಂದ ಪರಿಕಲ್ಪನೆಯ ಆಶಯ. ಈ ಬಗ್ಗೆ ತಾಲ್ಲೂಕಿನ ಪ್ರಜ್ಞಾವಂತರು ಹೆಚ್ಚು ಮಾಹಿತಿ ಪಡೆದು ಜಾಗೃತರಾಗಲು ಹುಬ್ಬಳ್ಳಿ ವಿಚಾರ ಸಂಕಿರರ್ಣದ ಪ್ರಯೋಜ ಪಡೆದುಕೊಳ್ಳಲು ಮುಂದೆ ಬರಬೇಕು' ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ನಾಯ್ಕ, ಜಯಂತ ನಾಯ್ಕ, ಹರೀಶ ಶೇಟ್, ಗಜು ನಾಯ್ಕ, ಮುಜಾಫರ್ ಶೇಖ್, ಸುಕೂರ್ ಸಾಬ್, ಶ್ರೀಧರ ಅಂಬಿಗ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-20-1538880198

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.