ಘಟಪ್ರಭಾ (ಗೋಕಾಕ): ‘ನಮ್ಮ ದೇಶ ವಿದ್ಯಾವಂತರು ಮತ್ತು ಬುದ್ಧಿವಂತರಿಂದ ತುಂಬಿದೆ. ಆದರೆ ಪ್ರಜ್ಞಾವಂತರ ಕೊರತೆ ತುಂಬಾ ಇದೆ. ಸತೀಶ ಜಾರಕಿಹೊಳಿಯಂತ ದೂರದೃಷ್ಟಿ ಹೊಂದಿರುವ ಪ್ರಜ್ಞಾವಂತರು ನಮ್ಮ ರಾಜ್ಯಕ್ಕೆ ದೇಶಕ್ಕೆ ಅವಶ್ಯಕತೆ ಇದೆ’ ಎಂದು ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ ಹೇಳಿದರು.

ಇಲ್ಲಿನ ಡಾ. ಹರ್ಡೀಕರ ಸೇವಾದಳ ನ್ಯಾಷನಲ್ ಅಕಾಡೆಮಿಯಲ್ಲಿ ಭಾನುವಾರ ಜರುಗಿದ 2026ನೇ ಸಾಲಿನ ಕರ್ನಾಟಕ ರಾಜ್ಯ ವೈಜ್ಞಾನಿಕ ರಾಜ್ಯ ಸಮ್ಮೇಳನ ಬೆಳಗಾವಿ ಜಿಲ್ಲೆಯಲ್ಲಿ ನಡೆಸುವ ಸಲುವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಇಲ್ಲಿ ತನಕ ನಾವು ರಾಜ್ಯದಲ್ಲಿ 5 ಸಮ್ಮೇಳಗಳನ್ನು ಮಾಡಿದ್ದೇವೆ. 6ನೇ ಸಮ್ಮೇಳನ ಇದೇ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ₹5.5ಕೋಟಿ ಹಣ ಬಿಡುಗಡೆಗೆ ಸಚಿವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ’ ಎಂದು ವಿವರಿಸಿದರು.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಉದ್ದೇಶಿತ ಸಮ್ಮೇಳನದ ಪ್ರಯೋಜನ ಪಡೆದುಕೊಳ್ಳಲು ಮುಂದಾಗುವಂತೆ ಕರೆ ನೀಡಿದ ಅವರು, ಎಲ್ಲ ಶಾಲೆಗಳ ಅಧಿಕಾರಿ ವರ್ಗದವರಿಗೂ ಮುಂದಿನ ದಿನಗಳಲ್ಲಿ ಮೂಢನಂಬಿಕೆ ನಿರ್ಮೂಲನೆ ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ‘ಸಾವಿರ ವರ್ಷಗಳ ಹಿಂದೆ ಬಸವಣ್ಣನವರು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದರು. ಆದರೆ ಇಂದು ತಮ್ಮ ಕೈಯನ್ನು ಬೇರೆಯವರಿಗೆ ತೋರಿಸಿ ಭವಿಷ್ಯ ಕೇಳಿಕೊಂಡು ಜೀವನ ನಡೆಸುವವರು ತುಂಬಾ ಜನ ಇದ್ದಾರೆ’ ಎಂದರು.

‘ನಾವು ಬುದ್ಧ-ಬಸವ-ಅಂಬೇಡ್ಕರ್ ತತ್ವ ಆದರ್ಶಗಳನ್ನು ಕಲಿಸಬೇಕಾಗಿದೆ. ಒಬ್ಬ ಸತ್ತ ವ್ಯಕ್ತಿಯ ಶವವನ್ನು ಮಣ್ಣಿನಲ್ಲಿ ಹೂತು ಅದು ಕೊಳೆತು ಹೋಗುವ ಬದಲು ಆ ಶವದಲ್ಲಿರುವ ಕೆಲವು ಅಂಗಾಂಗಗಳನ್ನು ದಾನ ಮಾಡಿದರೆ ಇಂದು ಎಷ್ಟೋ ಜನರ ಜೀವನಕ್ಕೆ ದಾರಿ ಆಗುತಿತ್ತು. ಜನರಲ್ಲಿ ನಂಬಿಕೆ ಇರಬೇಕೆ ವಿನಾ ಮೂಢನಂಬಿಕೆ ಇರಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಹುಲಿಕಲ್ ನಟರಾಜರಂತಹ ಮನೋಭಾವವುಳ್ಳ ವ್ಯಕ್ತಿ ಪ್ರತಿಯೊಂದು ಮನೆಯಲ್ಲಿ ಇರಬೇಕು’ ಎಂದ ಆಶಿಸಿದರು.

ಇದೇ ಡಿಸೆಂಬರ್ನಲ್ಲಿ ನಡೆಯುವ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಎಲ್ಲರು ಸೇರಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಕರ್ನಾಟಕ ಆರೋಗ್ಯಧಾಮದ ಮುಖ್ಯ ಆಡಳಿತಾಧಿಕಾರಿ ಡಾ. ಸ್ವಾತಿ ವೈದ್ಯ ಹಾಗೂ ಸಂಶೋಧನಾ ಪರಿಷತ್ ಅಖಂಡ ಬೆಳಗಾವಿ ಜಿಲ್ಲೆಯ ಅಧ್ಯಕ್ಷ ಮಾರುತಿ ವಿಜಯನಗರ ಮಾತನಾಡಿದರು.

ವೈಜ್ಞಾನಿಕ ಸಂಶೋಧನಾ ಪರಿಷತ್ನ ರಾಜ್ಯ ನಿರ್ದೇಶಕ ಬಸವರಾಜ ಹಟ್ಟಿಗೌಡರ ಪ್ರಾಸ್ಥಾವಿಕ ಮಾತನಾಡಿದರು.

ರಾಜ್ಯದ ಹಲವಾರು ಜಿಲ್ಲೆಯ ವೈಜ್ಞಾನಿಕ ಸಂಶೋಧನಾ ಪರಿಷತ್ನ ಮುಖಂಡರು ಹಾಗೂ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ವಿಜ್ಞಾನ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-21-51575948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.