ಹೊನ್ನಾವರ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ 72 ನೇ ವಾರ್ಷಿಕ ಸಂಗೀತ ಸೇವೆ ಅಂಗವಾಗಿ ವಿವಿಧ ಕಲಾವಿದರಿಂದ ನಿರಂತರವಾಗಿ 12ಗಂಟೆ ಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಸಂಘಟಕ ಎಸ್.ಶಂಭು ಭಟ್ಟ ಕಡತೋಕಾ ಮಾತನಾಡಿ, ’ಇಡಗುಂಜಿಯಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಂಗೀತ ಸೇವೆಯಲ್ಲಿ ಇದುವರೆಗೂ ಸಾವಿರಾರು ಕಲಾವಿದರು ಭಾಗಿಯಾಗಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ, ಸಿಬ್ಬಂದಿ ಸೇರಿದಂತೆ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ’ ಎಂದು ಹೇಳಿದರು.
ಅನನ್ಯಾ, ಸಹನಾ, ಭಾಗ್ಯಲಕ್ಷ್ಮಿ ಭಟ್ಟ, ವಿನಾಯಕ ಭಂಡಾರಿ, ಶ್ರೀಲತಾ ಹೆಗಡೆ, ವಿನಾಯಕ ಮುತಮುರಡು, ತೇಜಾ ಹೆಗಡೆ, ವಿನಾಯಕ ಹುಗ್ಗಣ್ಣವರ, ಗೋಪಾಲಕೃಷ್ಣ ಹೆಗಡೆ ಶಿರಸಿ, ಪಂ.ಪರಮೇಶ್ವರ ಹೆಗಡೆ, ಕೃಷ್ಣಮೂರ್ತಿ ಅಂಕೋಲಾ, ಗಣೇಶ ಹೆಗಡೆ ಯಲ್ಲಾಪುರ, ಅಶೋಕ ಹುಗ್ಗಣ್ಣವರ, ಪ್ರಕಾಶ ಹೆಗಡೆ ಕಲ್ಲಾರೆ, ಗಣಪತಿ ಹೆಗಡೆ ಯಲ್ಲಾಪುರ, ಪ್ರಸನ್ನ ಭಟ್ಟ ಉಡುಪಿ, ಎಂ.ಎಸ್.ಭಟ್ಟ ಅಲೇಖ, ವಿಭಾ ಹೆಗಡೆ, ಪಂ.ಗಣಪತಿ ಭಟ್ಟ ಹಾಸಣಗಿ, ವಿಶ್ವೇಶ್ವರ ಭಟ್ಟ ಹಾಗೂ ಶಿವಾನಂದ ಭಟ್ಟ ವಿವಿಧ ರಾಗಗಳನ್ನು ಹಾಗೂ ಡಾ.ಸಂತೋಷ ಚಂದಾವರ ತಬಲಾ ಸೋಲೊವನ್ನು ಪ್ರಸ್ತುತಪಡಿಸಿದರು.
ಗೋಪಾಲಕೃಷ್ಣ ಹೆಗಡೆ, ಶೇಷಾದ್ರಿ ಅಯ್ಯಂಗಾರ, ಎನ್.ಜಿ.ಹೆಗಡೆ, ಗಣೇಶ ಗುಂಡಕಲ್, ಗುರುರಾಜ ಹೆಗಡೆ, ಅಕ್ಷಯ ಭಟ್ಟ, ವಿನಾಯಕ ಭಟ್ಟ,ಶಶಿಧರ ಭಟ್ಟ, ಭರತ ಹೆಗಡೆ, ಸರಸ್ವತಿ ಅಯ್ಯಂಗಾರ ತಬಲಾದಲ್ಲಿ ಹಾಗೂ ಪ್ರಕಾಶ ಹೆಗಡೆ, ಗೌರೀಶ ಯಾಜಿ, ಭರತ ಹೆಗಡೆ, ಹರಿಶ್ಚಂದ್ರ ನಾಯ್ಕ, ಮಾರುತಿ ನಾಯ್ಕ, ಅಂಜನಾ ಹೆಗಡೆ, ಮನೋಜ ಭಟ್ಟ ಹಾಗೂ ಗುರುಪ್ರಸಾದ ಹೆಗಡೆ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.