ಜೊಯಿಡಾ: ಜಲ ಕ್ರೀಡೆಗಳಿಗೆ ಸಂಬಂಧಿಸಿದಂತೆ ದರ ಏರಿಕೆಯ ವಿಚಾರದಲ್ಲಿ ತಾಲ್ಲೂಕಿನ ಗಣೇಶಗುಡಿಯಲ್ಲಿ (ಇಳವಾ) ಜಲಕ್ರೀಡೆ ಆಯೋಜನೆ ಅಸೋಸಿಯೇಷನ್ ಮತ್ತು ಪ್ರವಾಸಿಗರನ್ನು ಕರೆತರುವ ದಲ್ಲಾಳಿಗಳ ನಡುವೆ ನಡೆದ ಮಾತಿನ ಚಕಮಕಿ ಗಲಾಟೆಯ ಸ್ವರೂಪವನ್ನು ಪಡೆದುಕೊಂಡಿದ್ದು, ಮಂಗಳವಾರ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ 8ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಲಕ್ರೀಡೆಗಳನ್ನು ನಡೆಸುವ ಜಟ್ಟಿದಾರರು ಮತ್ತು ಏಜೆಂಟರ ನಡುವೆ ಗಲಾಟೆ ನಡೆದಿದ್ದು ಎರಡು ತಂಡದ ತಲಾ ನಾಲ್ಕು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದಾಂಡೇಲಿಯವರಾದ ಶ್ಯಾಮಲ, ಕರೀಮ ಖತೀಬ, ಸಂಜು ನಂದ್ಯಾಳಕರ, ಪವನ ಕೊನ್ನರ, ಉದಯ, ಜೋಸೆಫ್ ಬೈಲಾ, ಸಚಿನ ಕಾಳೋಜಿ, ಗಣೇಶಗುಡಿಯ ಚಾಂದ್ ಕುಟ್ಟಿ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಗಣೇಶಗುಡಿಯಲ್ಲಿ ಕಾಳಿ ನದಿಯಲ್ಲಿ ಸುಮಾರು 9 ಕಿ.ಮೀ ನಡೆಯುವ ರ್ಯಾಫ್ಟಿಂಗ್ ಸೇರಿದಂತೆ ಇನ್ನಿತರ ಐದು ಜಲಸಾಹಸ ಕ್ರೀಡೆಗಳಿಗೆ ಜಟ್ಟಿ ಮಾಲಿಕರು ಹಾಗೂ ಅಸೋಸಿಯೇಷನ್ನವರು ಏಕರೂಪದ ಪೋರ್ಟಲ್ ವ್ಯವಸ್ಥೆ ಜಾರಿಗೆ ತಂದಿದ್ದರು. ಯಾವುದೇ ಜಟ್ಟಿಯವರಿಗೆ ನಷ್ಟ ಆಗದಂತೆ ಜಲ ಸಾಹಸ ಕ್ರೀಡೆಗಳ ದರವನ್ನು ಹೆಚ್ಚಿಸಿ, ₹750 ರೂಪಾಯಿ ದರದಲ್ಲಿ ಒಂದೇ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದನ್ನು ವಿರೋಧಿಸಿ ಕೆಲ ದಲ್ಲಾಳಿಗಳು ಗಲಾಟೆ ನಡೆಸಿದ್ದಾರೆ’ ಎಂಬುದು ಅಸೋಸಿಯೇಶನ್ ಆರೋಪ.

‘ಕೆಲವರು ಅಧಿಕ ದರ, ಕೆಲವರು ಕಡಿಮೆ ದರ ನಿಗದಿಪಡಿಸಿ ಪ್ರವಾಸಿಗರನ್ನು ಸೆಳೆಯಲು ಯತ್ನಿಸಿದ್ದರು. ಅದರ ಬದಲು ಏಕರೂಪದ ದರ ನಿಗದಿಪಡಿಸಿದ್ದರಿಂದ ತಮಗೆ ಕಮೀಷನ್ ಪ್ರಮಾಣ ಕಡಿಮೆ ಆಗಬಹುದು ಎಂಬ ಕಾರಣಕ್ಕೆ ಕೆಲವರು ತಗಾದೆ ತೆಗೆದಿದ್ದಾರೆ’ ಎಂಬುದು ಅವರ ದೂರು.

‘ಜಲಕ್ರೀಡೆಗಳ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ದರಗಳನ್ನು ಕಡಿಮೆ ಮಾಡುವಂತೆ ಸುಪಾ ಅಸೋಸಿಯೇಷನ್ನವರು ಮನವಿ ನೀಡಿದ್ದಾರೆ. ಪ್ರತ್ಯೇಕ ಜಲಕ್ರೀಡೆಗಳಿಗೆ ಪ್ರತ್ಯೇಕ ದರಗಳನ್ನು ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದರೆ ಅದನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.