ಜೊಯಿಡಾ: ತಾಲ್ಲೂಕು ಕೇಂದ್ರ ಸೇರಿದಂತೆ ವಿವಿಧ ಭಾಗಗಳಲ್ಲಿ ಗುರುವಾರ ಮಧ್ಯಾಹ್ನ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ಸೆಖೆಯಿಂದ ಬಸವಳಿದಿದ್ದ ಜನರಿಗೆ ತುಸು ನಿರಾಳವಾಗಿದೆ.

ಹನುಮ ಜಯಂತಿ ಅಂಗವಾಗಿ ಜೊಯಿಡಾ, ಕುಂಬಾರ ವಾಡಾ, ಗುಂದ, ರಾಮನಗರ ಬೈಲಪಾರ ಸೇರಿದಂತೆ ಹಲವು ಕಡೆಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಅಡ್ಡಿಯೂ ಉಂಟಾಯಿತು.

ಜೊಯಿಡಾ ಹನುಮಾನ್ ಮಂದಿರದಲ್ಲಿ ಅನ್ನ ದಾಸೋಹಕ್ಕೆ ಹಾಕಿದ್ದ ಪೆಂಡಾಲ್ ಗಾಳಿ ಮಳೆಗೆ ಹಾರಿ ಬಿದ್ದ ಪರಿಣಾಮ ಕೆಲ ಕಾಲ ಸಾರ್ವಜನಿಕರು ಊಟ ಮಾಡಲು ತೊಂದರೆ ಉಂಟಾಯಿತು.

ತಾಲ್ಲೂಕಿನ ಅಣಶಿ, ಉಳವಿ, ನುಜ್ಜಿ ರಾಮನಗರ ಭಾಗದಲ್ಲಿ ಗೇರು ಬೆಳೆಗೆ ಮತ್ತು ಜೊಯಿಡಾ ಭಾಗದಲ್ಲಿ ಮಾವು ಬೆಳೆಗೆ ಮಳೆಯಿಂದ ಹಾನಿ ಸಂಭವಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-20-1040755892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.