ಜೊಯಿಡಾ: ತಾಲ್ಲೂಕಿನ ಗಣೇಶಗುಡಿಯ ಇಳವಾದಲ್ಲಿ ಮನೆಯ ಹಿತ್ತಲಲ್ಲಿ ಶುಕ್ರವಾರ ವಧೆ ಮಾಡಲಾದ ದನದ ಮಾಂಸ ಮತ್ತು ತಲೆ ಪತ್ತೆಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ರಾಮನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ತಾಲ್ಲೂಕಿನ ಗಣೇಶಗುಡಿಯ ಇಳವಾದಲ್ಲಿ ದನಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಜೊಯಿಡಾ ಹಿಂದೂ ಕಾರ್ಯಕರ್ತರು ಮತ್ತು ಗೋರಕ್ಷಕರು ಇಳವಾಗೆ ಭೇಟಿ ನೀಡಿದಾಗ ಒಂದು ಮನೆಯ ಹಿತ್ತಲಲ್ಲಿ ವಧೆ ಮಾಡಿದ ದನದ ಮಾಂಸ ಮತ್ತು ತಲೆ ಪತ್ತೆಯಾಗಿದ್ದು ಜೊತೆಗೆ ವಧೆ ಮಾಡುವ ಉದ್ದೇಶದಿಂದ ಕಟ್ಟಿಟ್ಟ ಕರು ಪತ್ತೆಯಾಗಿದೆ.

ಜೊಯಿಡಾದ ಅರುಣ ಕಾಮ್ರೇಕರ, ಕಮಲಾಕರ ದೇಸಾಯಿ, ದಿವಾಕರ ಕುಂಡಲ್ಕರ ಅಭಿಷೇಕ ನಾಯ್ಕ,ನಗರಿಯ ವಿಶ್ವನಾಥ ನಾಯ್ಕ,ಕುಂಬಾರವಾಡಾದ ಶಾಂತಾರಾಮ ಕಾಮತ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ರಾಮನಗರ ಪಿಎಸ್ಐ ಮಹಾಂತೇಶ ನಾಯ್ಕ ಮತ್ತು ಸಿಬ್ಬಂದಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳದಲ್ಲಿ ಮಹೇಶ ಗಾವಡಾ, ದೀಪಕ ಗಾವಡಾ, ಆಕಾಶ ಅನಸ್ಕರ, ಬಂಟಿ ಪೂಜಾರಿ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-20-1314015823

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.