ಜೊಯಿಡಾ: ಕೇಂದ್ರ ಪುರಸ್ಕೃತ ಜಲಜೀವನ್ ಮಿಷನ್ ಯೋಜನೆ ತಾಲ್ಲೂಕಿನಲ್ಲಿ ಕುಂಟುತ್ತ ಸಾಗಿದೆ. ಜೊಯಿಡಾ ತಾಲ್ಲೂಕು ಕೇಂದ್ರದಲ್ಲೇ ನಾಲ್ಕೈದು ದಿನಕ್ಕೊಮ್ಮೆ ಅರ್ಧ ಗಂಟೆ, ಒಂದು ತಾಸು ಮಾತ್ರ ನೀರು ಪೂರೈಕೆ ಆಗುತ್ತಿದೆ.

2021-22ನೇ ಸಾಲಿನಲ್ಲಿ ಜೊಯಿಡಾ ಪಟ್ಟಣದ ದೇಸಾಯಿವಾಡಾ ಮತ್ತು ಗಾವಡೆವಾಡಾ ವಾರ್ಡ್ನ ಸುಮಾರು 350 ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ₹72.80 ಲಕ್ಷ ಅನುದಾನದಲ್ಲಿ, ಜೊಯಿಡಾ, ಅಮೃತಪಾಲಿ, ಪಿರನವಾಡಿ, ಸೋನಾರವಾಡಾ, ತಾಲಾವಾಡ ಮತ್ತು ನಗರಿ ವಾರ್ಡಿನ ಸುಮಾರು 475 ಕುಟುಂಬಗಳಿಗೆ ನೀರಿನ ಸಂಪರ್ಕ ನೀಡಲು ಅಂದಾಜು ₹2.50 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಮಂಜೂರು ಮಾಡಲಾಗಿತ್ತು.

‘ಹೊಸ ಪೈಪ್ಲೈನ್, ನಲ್ಲಿ ಅಳವಡಿಸಿ, ಶೇ 90ರಷ್ಟು ಮನೆಗಳಿಗೆ ಮೀಟರ್ ಅಳವಡಿಕೆಯೂ ಮುಗಿದಿದೆ. ಆದರೆ, ನೀರು ಪೂರೈಕೆ ಮಾತ್ರ ಆಗುತ್ತಿಲ್ಲ’ ಎಂಬುದು ಜನರ ದೂರು.

ಸೋನಾರವಾಡದಲ್ಲಿ 20 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣವಾಗಿ ಸಹ ಮೂರು ವರ್ಷ ಕಳೆದಿದ್ದು, ಅಲ್ಲಿಗೂ ನೀರು ಪೂರೈಕೆ ಆರಂಭಗೊಂಡಿಲ್ಲ.

‘ಮನೆ ಮನೆಗೆ ಪ್ರತಿ ದಿನ ನೀರು ಬರುತ್ತದೆ ಎಂದು ಹೇಳುತ್ತಿದ್ದರು. ಈಗಲಾದರೂ ನೀರಿನ ಬವಣೆ ತಪ್ಪಲಿದೆ ಎಂಬ ವಿಶ್ವಾಸವಿತ್ತು. ನಾಲ್ಕು ವರ್ಷ ಕಳೆದರೂ ನಲ್ಲಿಗೆ ನೀರು ಬರುತ್ತಿಲ್ಲ. ಇದ್ದ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದೆ’ ಎಂದು ಸೋನಾರವಾಡಾದ ಮಹಾದೇವ ದೇಸಾಯಿ ಮತ್ತು ಗಾವಡೆವಾಡಾದ ಮಹೇಶ ಗಾವಡಾ ದೂರಿದರು.

‘ಟೌನ್ಶಿಪ್ ಭಾಗದಲ್ಲಿ ಕೆಲವು ಮನೆಗಳಿಗೆ ಮಾತ್ರ ಮೀಟರ್ ಅಳವಡಿಸಿ, ನಲ್ಲಿ ಹಾಕಲಾಗಿದೆ. ಬಹುತೇಕ ಮನೆಗಳಿಗೆ ಪೈಪ್ಲೈನ್ ಮಾತ್ರ ಹಾಕಲಾಗಿದೆ. ಕೆಲವು ಕಡೆ ಮನೆಗಳಿಗೆ ಸಂಪರ್ಕ ನೀಡಲು ಹಾಕಿದ ಪೈಪ್ಗಳು ಮುಚ್ಚದಿರುವುದರಿಂದ ಒಡೆದು ಹೋಗಿದೆ’ ಎಂದು ಸ್ಥಳೀಯರಾದ ಪ್ರಭಾಕರ ನಾಯ್ಕ, ಮಾರುತಿ ನಾಯ್ಕ, ಗಜಾನನ ದೇಸಾಯಿ ಸಮಸ್ಯೆ ಹೇಳಿಕೊಂಡರು.

ತಕರಾರಿನಿಂದ ನನೆಗುದಿಗೆ

'ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆಗೆ ನಗರಿಯಿಂದ ನೀರು ತರಲು ಈಗಾಗಲೇ ಕುಡಿಯುವ ನೀರು ಇಲಾಖೆ ವತಿಯಿಂದ ವಿದ್ಯುತ್ ಸಂಪರ್ಕಕ್ಕೆ ಸುಮಾರು ₹9.8 ಲಕ್ಷ ಪಾವತಿಸಲಾಗಿದೆ. ಕಂಬಗಳು ಸೇರಿದಂತೆ ಸಾಮಗ್ರಿಗಳ ದಾಸ್ತಾನು ಸಹ ಮಾಡಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಹೋಗುವ ಮಾರ್ಗದಲ್ಲಿ ಕೆಲವರು ತಕರಾರು ಎತ್ತಿದ್ದರಿಂ ಸಾಧ್ಯವಾಗಿಲ್ಲ. 20ಕ್ಕೂ ಹೆಚ್ಚು ಬಾರಿ ಕುಟುಂಬದವರ ಮನವೊಲಿಸುವ ಪ್ರಯತ್ನಗಳು ನಡೆದಿದೆ' ಎಂದು ಜೊಯಿಡಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ ಡೊಂಬರ ಪ್ರತಿಕ್ರಿಯಿಸಿದರು.

ಜಲಮೂಲಗಳ ಕೊರತೆಯಿಂದ ನೀರಿನ ಸಂಪರ್ಕ ಕಲ್ಪಿಸಲು ಅಡಚಣೆಯಾಗುತ್ತಿದೆ. ಸದ್ಯವೇ ಅಧಿಕಾರ ವಹಿಸಿಕೊಂಡಿದ್ದು ಹೆಚ್ಚಿನ ಅಧ್ಯಯನ ಇನ್ನಷ್ಟೆ ನಡೆಸಬೇಕಿದೆ
ವಿಶ್ವಾಸ ಎಸ್., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.