ಪ್ರತಿ ವರ್ಷ 5 ಸಾವಿರಕ್ಕೂ ಮಿಕ್ಕಿ ಕದಂಬ ಸಸಿ ಬೆಳೆಸಿ ನಾಟಿ ಮಾಡಲಾಗುತ್ತದೆ. ಇದರಿಂದ ಕದಂಬ ಸಸಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಅವಕಾಶ ಆಗಿದೆ
ಭವ್ಯಾ ನಾಯ್ಕ ಆರ್.ಎಫ್.ಒ ಬನವಾಸಿ
ಪಾಳು ಬಿದ್ದ ಕದಂಬ ವನ
ಬನವಾಸಿಯಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಕದಂಬ ತಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕದಂಬ ವನ ನಿರ್ಮಿಸಿ ನೂರಾರು ಕದಂಬ ಗಿಡಗಳ ನಾಟಿ ಮಾಡಲಾಗಿತ್ತು. ಪ್ರಸ್ತುತ ಈ ವನ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಮಧುಕೇಶ್ವರ ದೇವಾಲಯದ ಆಡಳಿತ ಮಂಡಳಿ ವನವನ್ನು ಸರಿಯಾಗಿ ನಿರ್ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹ.