ಕಾರವಾರ: ತಾಲ್ಲೂಕಿನ ಕೈಗಾದಲ್ಲಿ ನಿರ್ಮಾಣ ಹಂತದಲ್ಲಿರುವ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಕ್ಕೆ ಅಳವಡಿಸಲು ಸಾಗಿಸಲಾಗುತ್ತಿದ್ದ ಅಣು ವಿಕಿರಣ ರಕ್ಷಾಕವಚ (ರೇಡಿಯೇಶನ್ ಎಂಡ್ಶೀಲ್ಡ್) ಉಪಕರಣವು ಹರ್ಟುಗಾ ಬಳಿ ಗುರುವಾರ ಪಲ್ಟಿಯಾಗಿದೆ.

ಗುಜರಾತ್ನ ಸೂರತ್ನಿಂದ ಮೂರು ತಿಂಗಳು ನಿರಂತರ ಪ್ರಯಾಣ ದೊಂದಿಗೆ 120 ಟನ್ಗೂ ಹೆಚ್ಚು ತೂಕದ ಮತ್ತು 30 ಅಡಿಗೂ ಹೆಚ್ಚು ಅಗಲವಿರುವ ಈ ಉಪಕರಣವನ್ನು ತರಲಾಗಿತ್ತು. ಕೈಗಾ ತಲುಪಲು ಕೇವಲ 4 ಕಿ.ಮೀ ದೂರದಲ್ಲಿರುವಾಗ ಉಪಕರಣವು ಬಿದ್ದಿದೆ.

‘ತಿರುವುಗಳಿಂದ ಕೂಡಿರುವ ಕೈಗಾ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಉಪಕರಣ ಹೊತ್ತಿದ್ದ ಮಲ್ಟಿಆಕ್ಸೆಲ್ ವಾಹನದ ಟೈರ್ ಸ್ಫೋಟಗೊಂಡ ಕಾರಣ ನಿಯಂತ್ರಣ ತಪ್ಪಿ ವಾಹನ ವಾಲಿತು. ಇದರಿಂದ ಭಾರಿ ಗಾತ್ರದ ಉಪಕರಣ ಮಗುಚಿದೆ’ ಎಂದು ಯಂತ್ರ ಸಾಗಣೆಯ ಜವಾಬ್ದಾರಿ ಹೊತ್ತ ಗುಜರಾತ್ನ ನ್ಯಾಬ್ರೊಸ್ ಟ್ರಾನ್ಸ್ಪೋರ್ಟ್ ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳಿದರು.

‘ಮಲ್ಲಾಪುರ ಗ್ರಾಮದಿಂದ ಕೈಗಾಕ್ಕೆ ಸಂಪರ್ಕಿಸುವ ರಸ್ತೆ ಕಿರಿದಾಗಿದೆ. ಅದೇ ರಸ್ತೆಯ ತಿರುವಿನಲ್ಲಿ ಭಾರಿ ಗಾತ್ರದ ವಾಹನದ ಜೊತೆಗೆ ಉಪಕರಣ ಮಗುಚಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೈಗಾ ಅಣು ಸ್ಥಾವರದಲ್ಲಿ ಬೃಹತ್ ಗಾತ್ರದ ಕ್ರೇನ್ಗಳು ಲಭ್ಯ ಇವೆ. ಅವುಗಳನ್ನು ಬಳಸಿ ಉಪಕರಣವನ್ನು ಸುರಕ್ಷಿತವಾಗಿ ಎತ್ತಿ, ಸಾಗಿಸಲಾಗುವುದು. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗಬಹುದು’ ಎಂದು ಮಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಣು ಸ್ಥಾವರದಲ್ಲಿ ವಿಕಿರಣ ಸೋರಿಕೆ ಆಗದಂತೆ ಸುರಕ್ಷತೆ ಒದಗಿಸಲು ಅನುಕೂಲವಾಗುವ ಈ ಉಪಕರಣವನ್ನು ಲಾರ್ಸನ್ ಆ್ಯಂಡ್ ಟೂಬ್ರೊ ಲಿಮಿಟೆಡ್ ಕಂಪನಿ (ಎಲ್ ಆ್ಯಂಡ್ ಟಿ) ತಯಾರಿಸಿದೆ. ಫೆಬ್ರುವರಿ 9ರಂದು ಸೂರತ್ನಿಂದ ಇದು ರವಾನೆಯಾಗಿತ್ತು. ಇದನ್ನು ಸಾಗಣೆ ಮಾಡಲೆಂದೇ ವಿಶೇಷ ಸ್ವಯಂಚಾಲಿತ ಯಂತ್ರವುಳ್ಳ ವಾಹನವನ್ನು ರೂಪಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1886420495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.