ಕಾರವಾರ: ಇಲ್ಲಿನ ಕಾರವಾರ–ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಮಿತಿಗಿಂತ ಹೆಚ್ಚು ತೂಕದ ಸಾಮಗ್ರಿ ಹೊತ್ತು ಕೈಗಾಕ್ಕೆ ವಾಹನ ಸಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸುವ ಕೆಲಸ ಆರಂಭಗೊಂಡಿದೆ.

ಇಲ್ಲಿನ ಬಿಲ್ಟ್ ವೃತ್ತ, ಕರೂರು ಮೈದಾನ ಸಮೀಪ, ಹಬ್ಬುವಾಡ ಸೇರಿದಂತೆ ರಾಜ್ಯ ಹೆದ್ದಾರಿ ಸಂಪರ್ಕಿಸುವ ರಸ್ತೆ, ಪ್ರಮುಖ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಲೋಕೋಪಯೋಗಿ ಇಲಾಖೆ ಅಳವಡಿಸುತ್ತಿದೆ.

ಕೈಗಾದಲ್ಲಿ ನಡೆಯುತ್ತಿರುವ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸಕ್ಕೆ ಅಗತ್ಯ ಸಾಮಗ್ರಿಗಳನ್ನು ಹೊತ್ತು ಹಲವು ತಿಂಗಳುಗಳಿಂದ ಈ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತಿವೆ. ಅವುಗಳಿಂದ ರಾಜ್ಯ ಹೆದ್ದಾರಿ ದುಸ್ಥಿತಿಗೆ ತಲುಪಿದೆ ಎಂಬುದು ಜನರ ಆರೋಪ.

‘ಕೈಗಾಕ್ಕೆ ಸಾಮಗ್ರಿಗಳನ್ನು ಪೂರೈಸುವ ವಾಹನಗಳ ನಿರಂತರ ಸಂಚಾರದಿಂದ ಕೆರವಡಿ, ಮಲ್ಲಾಪುರ ಭಾಗದಲ್ಲಿ ರಸ್ತೆ ಹದಗೆಟ್ಟಿದೆ. ಕಿರು ಸೇತುವೆಗಳು ಶಿಥಿಲಗೊಂಡಿವೆ. ಭಾರಿ ಗಾತ್ರದ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹೆಸ್ಕಾಂ ಪದೇ ಪದೇ ಗ್ರಾಮೀಣ ಭಾಗದಲ್ಲಿ ವಿದ್ಯುತ್ ನಿಲುಗಡೆ ಮಾಡುತ್ತಿದೆ’ ಎಂದು ಆ ಭಾಗದ ಜನರು ಈಚೆಗೆ ಶಾಸಕ ಸತೀಶ ಸೈಲ್ ಅವರಿಗೆ ದೂರು ಸಲ್ಲಿಸಿದರು.

‘ಕಾರವಾರ–ಇಳಕಲ್ ರಾಜ್ಯ ಹೆದ್ದಾರಿ ಮೂಲಕ ಕೈಗಾಕ್ಕೆ ಸಾಮಗ್ರಿಗಳನ್ನು ಪೂರೈಸುವ ವಾಹನಗಳು 40ರಿಂದ 60 ಟನ್ ತೂಕ ಹೊತ್ತು ಸಂಚರಿಸುತ್ತಿರುವ ದೂರುಗಳು ಬಂದಿವೆ. ಶಾಸಕರ ಸೂಚನೆ ಆಧರಿಸಿ 35 ಟನ್ಗಿಂತ ಹೆಚ್ಚು ಭಾರದ ವಾಹನ ಸಂಚಾರ ನಿಷೇಧಿಸಿ, ಎಚ್ಚರಿಸಲು ಫಲಕ ಅಳವಡಿಸಿದ್ದೇವೆ’ ಎಂದು ಲೋಕಪಯೋಗಿ ಇಲಾಖೆ ಎಇಇ ರಾಮು ಅರ್ಗೇಕರ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-1381060981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.