ಶಿರಸಿ: ‘ರಾಜ್ಯದಲ್ಲಿ 20 ವರ್ಷಗಳಿಂದ ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ಅದರ ಅನುಷ್ಠಾನದಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ’ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಅಶೀಸರ ಕಳವಳ ವ್ಯಕ್ತಪಡಿಸಿದ್ದಾರೆ.

ಮೇ 22ರ ಅಂತರರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ 13 ಅಂಶಗಳ ಪತ್ರ ಬರೆದಿರುವ ಅವರು,‘ವಿನಾಶದ ಅಂಚಿನಲ್ಲಿರುವ ಪ್ರಕೃತಿಯನ್ನು ರಕ್ಷಿಸಲು ಕಾಯ್ದೆಗೆ ತಕ್ಷಣ ಜೀವ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಬೆಂಗಳೂರಿನ ಜೀವವೈವಿಧ್ಯ ಮಂಡಳಿ ಹೊರತುಪಡಿಸಿದರೆ, ರಾಜ್ಯದ 30 ಜಿಲ್ಲೆಗಳ ನ್ಯಾಯಾಲಯದಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಕುರಿತು ಒಂದು ಮೊಕದ್ದಮೆಯೂ ದಾಖಲಾಗಿಲ್ಲ. ಪಶ್ಚಿಮ ಘಟ್ಟಗಳ ಅಳಿವೆಗಳು, ಗೋಮಾಳ, ಕಾನು, ದೇವರಕಾಡುಗಳು ಜೆಸಿಬಿ ಕಾರ್ಯಾಚರಣೆ ಹಾಗೂ ಅಕ್ರಮ ಗಣಿಗಾರಿಕೆಗೆ ಬಲಿಯಾಗುತ್ತಿವೆ’ ಎಂದು ಅವರು ತಿಳಿಸಿದ್ದಾರೆ.

‘ಅರಣ್ಯ ಇಲಾಖೆಯು ತನ್ನ ಕಾಮಗಾರಿ ನೀಲನಕ್ಷೆಯಲ್ಲಿ ಜೀವ ವೈವಿಧ್ಯಕ್ಕೆ ಆದ್ಯತೆ ನೀಡದೆ ಏಕಜಾತಿ ನೆಡುತೋಪುಗಳಿಗೆ ಒತ್ತು ನೀಡುತ್ತಿದೆ. ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಭೂಮಿ ನೀಡುವಾಗ ಕೇವಲ ದೊಡ್ಡ ಮರಗಳನ್ನು ಮಾತ್ರ ಲೆಕ್ಕ ಹಾಕಲಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ 1 ಲಕ್ಷ ಮರಗಳ ಬದಲು ಕೇವಲ 16 ಸಾವಿರ ಮರಗಳ ಹನನದ ಲೆಕ್ಕ ತೋರಿಸಿ ಅರಣ್ಯನಾಶವನ್ನು ಗೌಣ ಮಾಡಲಾಗುತ್ತಿದೆ’ ಎಂದು ಅವರು ದೂರಿದ್ದಾರೆ.

‘ಕೋಲಾರದ ಅಂತರಗಂಗೆ ಬೆಟ್ಟ, ಬೆಂಗಳೂರಿನ ರೋರಿಕ್ ಎಸ್ಟೇಟ್, ಸೊರಬದ ದೇವರಕಾಡು ಸೇರಿ 12 ಅಪರೂಪದ ನೈಸರ್ಗಿಕ ತಾಣಗಳು ಮತ್ತು 11 ಮತ್ಸ್ಯಧಾಮಗಳನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕೆಂದು ನಿರ್ಣಯ ಕೈಗೊಂಡು ನಾಲ್ಕು ವರ್ಷಗಳಾ ಗಿವೆ. ಆ ಘೋಷಣೆ ಇನ್ನೂ ಹಾಗೇ ಉಳಿದಿದೆ’ ಎಂದು ದೂರಿದ ಅವರು, ‘ಮಂಡಳಿಗೆ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳನ್ನು ನೇಮಿಸುವ ಪದ್ಧತಿ ನಿಲ್ಲಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.