ಕಾರವಾರ: ಜಿಲ್ಲೆಯ ವಿವಿಧ ವಲಯ ವ್ಯಾಪ್ತಿಗಳಲ್ಲಿ ವಶಕ್ಕೆ ಪಡೆಯಲಾಗಿದ್ದ ₹3 ಲಕ್ಷ ಮೌಲ್ಯದ 11.26 ಕೆ.ಜಿ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ಈಚೆಗೆ ನಾಶಪಡಿಸಿದರು.

ಅಂಕೋಲಾ ತಾಲ್ಲೂಕಿನ ಅಗಸೂರು ಸಮೀಪದಲ್ಲಿರುವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇನ್ಸಿನರೇಟರ್ ಯಂತ್ರದ ಮೂಲಕ ಗಾಂಜಾ ದಾಸ್ತಾನನ್ನು ಸುಟ್ಟು, ನಾಶಪಡಿಸಲಾಯಿತು.

‘ಶಿರಸಿ ವಲಯ ವ್ಯಾಪ್ತಿಯಲ್ಲಿ 4, ದಾಂಡೇಲಿ ಹಾಗೂ ಕುಮಟಾ ವಲಯ ವ್ಯಾಪ್ತಿಯ ತಲಾ 1 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ಒಣಗಾಂಜಾವನ್ನು ಮಾದಕ ವಸ್ತು ವಿಲೇವಾರಿ ಸಮಿತಿ ಹಸ್ತಾಂತರಿಸಲಾಯಿತು. ಕೋರ್ಟ್ ಆದೇಶದಂತೆ ಅವುಗಳನ್ನು ವೈಜ್ಞಾನಿಕ ವಿಧಾನದಿಂದ ನಾಶಪಡಿಸಲಾಯಿತು’ ಎಂದು ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ತಿಳಿಸಿದರು.

ವಿಲೇವಾರಿ ಪ್ರಕ್ರಿಯೆ ವೇಳೆ ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ ಎ.ಎಲ್.ನಾಗೇಶ, ಉಡುಪಿ ಅಬಕಾರಿ ಉಪ ಆಯುಕ್ತ ಟಿ.ಎಂ.ಶ್ರೀನಿವಾಸ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-20-1153051287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.