ಕಾರವಾರ: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ನಗರದ ಆಭರಣ ಮಳಿಗೆಗಳಲ್ಲಿ ವಹಿವಾಟು ಜಿಗಿತ ಕಂಡಿತು. ದುಬಾರಿ ದರವಿದ್ದರೂ ಜನರು ಬಂಗಾರದ ಆಭರಣ ಖರೀದಿಸಿದರು.

ಭಾನುವಾರ ಹಾಗೂ ಸೋಮವಾರ ಎರಡೂ ದಿನ ಹಬ್ಬದ ಆಚರಣೆ ಇತ್ತು. ಎರಡು ದಿನವೂ ಆಭರಣ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಕಂಡುಬಂದವು. ಪ್ರತಿ 10 ಗ್ರಾಂ ಬಂಗಾರಕ್ಕೆ ₹1,42,500 ದರ ಇತ್ತು.

ಇಲ್ಲಿನ ಕುಟ್ಹಿನೋ ರಸ್ತೆ, ಪಿಕಳೆ ರಸ್ತೆ, ಗ್ರೀನ್ ಸ್ಟ್ರೀಟ್, ನಂದನಗದ್ದಾ ಸೇರಿದಂತೆ ವಿವಿಧೆಡೆ ಇರುವ ಆಭರಣಗಳ ಮಳಿಗೆಗಳಲ್ಲಿ ಖರೀದಿ ಸಮಾಧಾನಕರವಾಗಿತ್ತು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರತಿ 10 ಗ್ರಾಂಗೆ ಬಂಗಾರದ ದರ ₹30 ರಿಂದ ₹40 ಸಾವಿರದಷ್ಟು ಏರಿಕೆ ಕಂಡಿತ್ತು. ಆದರೂ, ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಗ್ರಾಹಕರು ಖರೀದಿಸಿದರು ಎಂದು ಆಭರಣ ವರ್ತಕರು ಹೇಳಿದರು.

‘ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಅಂಗಡಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ದರ ಹೆಚ್ಚಿರುವ ಕಾರಣಕ್ಕೆ ಖರೀದಿ ಪ್ರಮಾಣ ಕಡಿಮೆ ಇತ್ತು. ಕೆಲವರು ಬೆಳ್ಳಿ ಆಭರಣವನ್ನೂ ಖರೀದಿಸಿದರು. ನಾಣ್ಯ, ಚಿಕ್ಕ ಆಭರಣಗಳಿಗೆ ಬೇಡಿಕೆ ಹೆಚ್ಚಿದ್ದವು’ ಎಂದು ಆಭರಣ ವರ್ತಕ ಶ್ರೀಧರ ವೆರ್ಣೇಕರ ತಿಳಿಸಿದರು.

‘ಪ್ರತಿ ವರ್ಷ ಅಕ್ಷಯ ತೃತೀಯ ದಿನ ಒಂದಾದರೂ ಬಂಗಾರದ ಆಭರಣ ಖರೀದಿಸುವ ಸಂಪ್ರದಾಯ ಇಟ್ಟುಕೊಂಡಿದ್ದೇವೆ. ಸದ್ಯ ಬಂಗಾರದ ದರ ಗಗನಮುಖಿಯಾಗಿದ್ದು ಈ ಬಾರಿ ಚಿಕ್ಕ ನಾಣ್ಯವೊಂದನ್ನು ಖರೀದಿಸಿದೆವು’ ಎಂದು ನಂದನಗದ್ದಾದ ಅಕ್ಷತಾ ಠಾಕರಕರ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-20-1590321771

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.