ಕಾರವಾರ: ತಾಲ್ಲೂಕಿನ ದೇವಬಾಗ, ಅಂಕೋಲಾದ ಮಂಜಗುಣಿ ಕಡಲತೀರದಲ್ಲಿ ಮಂಗಳವಾರ ಏಕಕಾಲಕ್ಕೆ 163 ಆಲಿವ್ ರಿಡ್ಲೆ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.

ದೇವಬಾಗ ಕಡಲತೀರದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಮೂಲಕ ಚಾಲನೆ ನೀಡಿದರು. ಇಲ್ಲಿ 76 ಮರಿಗಳು ಸಮುದ್ರ ಸೇರಿದವು. ಬುಟ್ಟಿಯಿಂದ ಹೊರಕ್ಕೆ ಬಿಡುತ್ತಿದ್ದಂತೆ ಪಟ ಪಟ ರೆಕ್ಕೆ ಬಡಿಯುತ್ತ ಸಮುದ್ರದತ್ತ ಮರಿಗಳು ಹೆಜ್ಜೆ ಹಾಕಿದವು.

ಮಂಜಗುಣಿ ಕಡಲತೀರದಲ್ಲಿ 87 ಕಡಲಾಮೆ ಮರಿಗಳು ಸಮುದ್ರ ಸೇರಿದವು. ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗವು ಈ ಪ್ರಕ್ರಿಯೆ ಕೈಗೊಂಡಿತ್ತು.

ಕಾರವಾರ ಡಿಸಿಎಫ್ ಸಿ.ರವಿಶಂಕರ, ಎಸಿಎಫ್ಗಳಾದ ಮೋಹಿಲ ವೆಂಕಟ, ಕೆ.ಡಿ.ನಾಯ್ಕ, ಕೋಸ್ಟಲ್ ಮರೈನ್ ವಿಭಾಗದ ಆರ್ಎಫ್ಒ ಕಿರಣ ಮನವಾಚಾರಿ, ಕಾರವಾರ ಆರ್ಎಫ್ಒ ಗಜಾನನ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.