ಕಾರವಾರ: ಕೇವಲ ಒಂದು ತಿಂಗಳ ಅವಧಿಯಲ್ಲಿ ಆಟೊ ಎಲ್ಪಿಜಿ (ದ್ರವೀಕೃತ ಇಂಧನ ಅನಿಲ) ದರ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ದುಪ್ಪಟ್ಟಾಗಿದೆ. ಇದು ಆಟೊ ಚಾಲಕರು ಆರ್ಥಿಕ ಮುಗ್ಗಟ್ಟಿನ ಚಿಂತೆ ಎದುರಿಸುವಂತೆ ಮಾಡಿದೆ.

ತಾಲ್ಲೂಕಿನ ಶೇಜವಾಡ, ಅಂಕೋಲಾ, ಕುಮಟಾ, ಭಟ್ಕಳ ಮತ್ತು ಶಿರಸಿಯಲ್ಲಿ ಆಟೊ ಎಲ್ಪಿಜಿ ಬಂಕ್ಗಳಿವೆ. ಅವುಗಳ ಪೈಕಿ ಶಿರಸಿಯಲ್ಲಿ ಡೆವಲಪ್ಮೆಂಟ್ ಸೊಸೈಟಿಯ ಬಂಕ್ನಲ್ಲಿ ಪ್ರತಿ ಲೀ. ಎಲ್ಪಿಜಿ ದರ ₹92ರ ಆಸುಪಾಸಿನಲ್ಲಿದೆ. ಉಳಿದೆಡೆ ಗೋ ಗ್ಯಾಸ್ ಕಂಪನಿ ಬಂಕ್ ನಡೆಸುತ್ತಿದೆ. ಈ ಬಂಕ್ಗಳಲ್ಲಿ ಪ್ರತಿ ಲೀಟರ್ ಎಲ್ಪಿಜಿ ದರ ₹120ಕ್ಕೆ ತಲುಪಿದೆ ಎಂಬುದಾಗಿ ಆಟೊ ಚಾಲಕರು ದೂರಿದ್ದಾರೆ.

ವಾರದ ಹಿಂದೆ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಕಾರವಾರದ ಬಂಕ್ ನಾಲ್ಕೈದು ದಿನಗಳ ಕಾಲ ಮುಚ್ಚಲ್ಪಟ್ಟಿತ್ತು. ವ್ಯತ್ಯಯ ಸರಿಪಡಿಸಲು ಒತ್ತಾಯಿಸಿ ಆಟೊ ಚಾಲಕ, ಮಾಲಕರು ಪ್ರತಿಭಟನೆಯನ್ನೂ ನಡೆಸಿದ್ದರು. ಬಳಿಕ ದಾಸ್ತಾನು ಪೂರೈಕೆ ಆಯಿತಾದರೂ, ದರ ಹೆಚ್ಚಳವಾಗಿದೆ ಎಂಬುದಾಗಿ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭಗೊಳ್ಳುವುದಕ್ಕೆ ಮುನ್ನ ಪ್ರತಿ ಲೀಟರ್ ಆಟೊ ಎಲ್ಪಿಜಿ ದರ ₹62ರಿಂದ 67ರ ಆಸುಪಾಸಿನಲ್ಲಿತ್ತು. ಬಳಿಕ ಹಂತ ಹಂತವಾಗಿ ದರ ಏರಿಕೆ ಮಾಡಲಾಯಿತು. ಕೇವಲ ಒಂದು ತಿಂಗಳ ಅವಧಿಯಲ್ಲಿ ದರ ದುಪ್ಪಟ್ಟಾಗಿದೆ’ ಎಂದು ಆಟೊ ಚಾಲಕ, ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಹೇಳಿದರು.

‘ಆಟೊಗಳ ಎಲ್ಪಿಜಿ ದರ ಏರಿಕೆಯಾಗಿರುವುದು ಒಂದೆಡೆಯಾದರೆ, ಬೇಡಿಕೆಯಷ್ಟು ಪ್ರಮಾಣದ ಪೂರೈಕೆಯೂ ಇಲ್ಲ. ಕರಾವಳಿ ಭಾಗದಲ್ಲಿ, ಶಿರಸಿ ಮತ್ತಿತರ ಕಡೆಗಳಲ್ಲಿ ಎಲ್ಪಿಜಿ ಆಧರಿಸಿ ನಿರ್ವಹಿಸುವ ಆಟೊಗಳ ಸಂಖ್ಯೆ ಹೆಚ್ಚಿದೆ. ಎಲ್ಪಿಜಿಗಿಂತ ಪೆಟ್ರೋಲ್ ದರ ಕಡಿಮೆ ಇದ್ದರೂ ಆಟೊಗಳಿಗೆ ಗರಿಷ್ಠ 2 ಲೀ. ಮಾತ್ರ ಪೆಟ್ರೋಲ್ ತುಂಬಿಸಬಹುದು. ಹೀಗಾಗಿ, ಎಲ್ಪಿಜಿ ಬಳಸಿಯೇ ಚಲಾಯಿಸಬೇಕಾಗುತ್ತದೆ. ದರ ದುಪ್ಪಟ್ಟಾಗಿರುವದರಿಂದ ಬರುವ ಆದಾಯದಲ್ಲಿ ಇಂಧನಕ್ಕೆ ಹೆಚ್ಚು ವೆಚ್ಚ ವ್ಯಯಿಸಬೇಕಾಗಿದೆ’ ಎಂದರು.

‘ಯುದ್ಧದ ಪರಿಣಾಮದಿಂದ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಆಟೊಗಳ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ದುಬಾರಿ ದರ ಪಾವತಿಸಿ ಎಲ್ಪಿಜಿ ತರಿಸಿಕೊಳ್ಳಬೇಕು. ಇದರಿಂದ ದರ ಹೆಚ್ಚಳವಾಗಿದೆ’ ಎಂಬುದಾಗಿ ಖಾಸಗಿ ಎಲ್ಪಿಜಿ ಬಂಕ್ಗಳ ಪ್ರತಿನಿಧಿಯೊಬ್ಬರು ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-20-950047648

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.