ಕಾರವಾರ: ತಾಲ್ಲೂಕಿನ ಚಿತ್ತಾಕುಲಾದ ಸೀಬರ್ಡ್ ಕಾಲೊನಿಯ ಸಮೀಪದ 18 ಎಕರೆ ಜಾಗದಲ್ಲಿ 245 ನಿವೇಶನಗಳನ್ನು ಬಂದರು ಜಲಸಾರಿಗೆ ಮಂಡಳಿ ಸಜ್ಜುಗೊಳಿಸುತ್ತಿದೆ. ಈ ಜಾಗಕ್ಕೆ ಇಲ್ಲಿನ ಬೈತಕೋಲದಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ.

ಬಂದರು ಜಲಸಾರಿಗೆ ಮಂಡಳಿಯು ತನಗೆ ಸೇರಿದ್ದ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ರಸ್ತೆ, ಚರಂಡಿ, ಇತರ ಮೂಲಸೌಕರ್ಯಗಳನ್ನು ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ.

‘ಚಿತ್ತಾಕುಲಾದಲ್ಲಿ ಲೇಔಟ್ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಅಲ್ಲಿ ಇಲಾಖೆಗೆ ಸೇರಿದ್ದ 20 ಎಕರೆಯಷ್ಟು ಭೂಮಿ ಇತ್ತು. ಅವುಗಳ ಪೈಕಿ 2 ಎಕರೆಯಷ್ಟು ಜಾಗ ಒತ್ತುವರಿಯಾಗಿದೆ. ಉಳಿದ 18 ಎಕರೆಯಲ್ಲಿ ನಿವೇಶನಗಳನ್ನು ರಚಿಸಿ, ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೆ, ಈ ಸ್ಥಳಕ್ಕೆ ಬೈತಕೋಲದಲ್ಲಿನ ಜನರನ್ನು ಸ್ಥಳಾಂತರಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಣಯ ಆಗಿಲ್ಲ’ ಎಂಬುದಾಗಿ ಬಂದರು ಜಲಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಾಗರಮಾಲಾ ಯೋಜನೆಯ ಅಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಿಸಲು ಸರ್ಕಾರ ಸಿದ್ಧವಾಗಿದೆ. ಬಂದರು ವಿಸ್ತರಣೆಯಾದರೆ ಬೈತಕೋಲ ಭಾಗದ ಜನರನ್ನು ಸ್ಥಳಾಂತರಿಸಲು ಈಗಿಂದಲೇ ಲೇಔಟ್ ನಿರ್ಮಿಸುತ್ತಿರುವ ಶಂಕೆ ಇದೆ’ ಎಂದು ಬೈತಕೋಲ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಕಾರವಾರ ವಾಣಿಜ್ಯ ಬಂದರು ಪ್ರದೇಶದ ಸುತ್ತಮುತ್ತಲಿರುವ ಬೈತಕೋಲ, ಅಲಿಗದ್ದಾದಲ್ಲಿ ಬಿಟುಮಿನ್, ಖಾದ್ಯತೈಲ ಸಂಗ್ರಹಿಸುವ ಟ್ಯಾಂಕರ್ಗಳನ್ನು ಸ್ಥಾಪಿಸಲಾಗಿದೆ. ಇದೇ ಪ್ರದೇಶದ ಸುತ್ತಮುತ್ತ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ತಲತಲಾಂತರದಿಂದಲೂ ಆಶ್ರಯ ಪಡೆದುಕೊಂಡಿವೆ. ಬಂದರು ಅಭಿವೃದ್ಧಿಗೆ ಬೈತಕೋಲ ಸುತ್ತಮುತ್ತಲಿನ ಪ್ರದೇಶವನ್ನು 1971ರ ಅವಧಿಯಲ್ಲೇ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು.

ಸ್ವಾಧೀನ ಪ್ರಕ್ರಿಯೆ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಪ್ರಕ್ರಿಯೆ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ಕಾರಣಕ್ಕೆ ಬೈತಕೋಲ ಪ್ರದೇಶದ ಮೂಲ ನಿವಾಸಿಗರು ಅದೇ ಪ್ರದೇಶದಲ್ಲಿ ವಾಸ ಮಾಡಿಕೊಂಡಿವೆ.

‘ಜನವಸತಿ ಪ್ರದೇಶದ ನಡುವೆ ಅಪಾಯಕಾರಿಯಾದ ಬಿಟುಮಿನ್, ತೈಲ ಮುಂತಾದ ಟ್ಯಾಂಕರ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಕುಟುಂಬಗಳಿಗೆ ಪುನರ್ವಸತಿ ಸಿದ್ಧತೆ ಮಾಡಿಕೊಂಡು ಭವಿಷ್ಯದಲ್ಲಿ ಸ್ಥಳಾಂತರಕ್ಕೆ ಯೋಜನೆ ಹಮ್ಮಿಕೊಳ್ಳಲೂ ಬಹುದು. ಆದರೆ, ಸದ್ಯಕ್ಕೆ ಅಂತಹ ನಿರ್ಧಾರವಂತೂ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-20-1580831343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.