ಕಾರವಾರ: ತ್ಯಾಗ, ಬಲಿದಾನದ ಸಂಕೇತವಾಗಿ ಮುಸ್ಲಿಮರು ಆಚರಿಸುವ ಬಕ್ರೀದ್ಗೆ ಸಿದ್ಧತೆ ಆರಂಭಗೊಂಡಿದ್ದು, ಕುರಿಗಳ ವಹಿವಾಟು ಜೋರಾಗಿದೆ.

ಮೇ 28ರಂದು ಬಕ್ರಿದ್ ಆಚರಣೆ ನಡೆಯಲಿದೆ. ಹಬ್ಬಕ್ಕೆ ವಾರ ಮುನ್ನವೇ ಕುರಿಗಳನ್ನು ಖರೀದಿಸಿ, ಸಲಹುವ ಪದ್ಧತಿಯನ್ನು ಕೆಲವರು ಪಾಲಿಸುತ್ತಾರೆ. ಹೀಗಾಗಿ ಹಬ್ಬಕ್ಕೆ ಕೆಲ ದಿನ ಇರುವಾಗಲೇ ಕುರಿಗಳ ಮಾರಾಟ ತುರುಸು ಪಡೆದುಕೊಳ್ಳುತ್ತದೆ.

ಕಾಜುಬಾಗದ ಪೊಲೀಸ್ ಪರೇಡ್ ಮೈದಾನದ ಸಮೀಪ, ಕೋಡಿಬಾಗ, ಗಾಂಧಿನಗರ, ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸೇರಿದಂತೆ ಹಲವೆಡೆಗಳಲ್ಲಿ ಕುರಿಗಳ ಮಾರಾಟ ನಡೆಯುತ್ತಿದೆ. ವಿವಿಧ ಬಗೆಯ, ಗಾತ್ರಗಳ ಕುರಿಗಳನ್ನು ಮಾರಾಟಕ್ಕೆ ಇರಿಸಲಾಗಿದೆ.

‘ದೇವದುರ್ಗ, ಅಮೀನಗಡ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ನಾನಾ ಭಾಗದಿಂದ ಕುರಿಗಳನ್ನು ತರಲಾಗಿದೆ. ಅವುಗಳ ಗಾತ್ರ, ತಳಿ ಆಧರಿಸಿ ದರ ನಿರ್ಧರಿಸಲಾಗುತ್ತದೆ. ಕನಿಷ್ಠ ₹30 ಸಾವಿರದಿಂದ ₹50 ಸಾವಿರ ಬೆಲೆಯ ಕುರಿಗಳು ಲಭ್ಯ ಇವೆ’ ಎಂದು ಕಾಜುಬಾಗದಲ್ಲಿ ಕುರಿ ಮಾರಾಟಕ್ಕೆ ಇಟ್ಟುಕೊಂಡಿರುವ ಸಮೀರ್ ಖಾನ್ ಹೇಳಿದರು.

‘ಪ್ರವಾದಿಯವರ ಆಣತಿಯಂತೆ ಸ್ಥಿತಿವಂತರು ಮನೆಯಲ್ಲಿ ಕುರಿಯ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ಬಂಧುಗಳ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ. ದುಬಾರಿ ದರ ಹೇಳಿದರೂ ಕೆಲ ವ್ಯಾಪಾರಿಗಳು ಚೌಕಾಸಿ ಬಳಿಕ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹಬ್ಬ ಸಮೀಪಿಸುತ್ತಿದ್ದಂತೆ ಬೆಲೆಯಲ್ಲಿ ಏರಿಳಿತ ಕಂಡುಬರುತ್ತದೆ’ ಎಂದು ಸುಂಕೇರಿ ನಿವಾಸಿ ಜಾಫರ್ ಹೇಳಿದರು.

‘ಖರೀದಿಸಿದ ಕುರಿಗಳನ್ನು ಕೆಲ ದಿನ ಮನೆಯಲ್ಲೇ ಸಾಕಲಾಗುತ್ತದೆ. ಬಳಿಕ ಕುರ್ಬಾನಿ ಮಾಡಲಾಗುತ್ತದೆ. ಮನೆಯಲ್ಲಿನ ಮಕ್ಕಳಿಗೆ ಕುರಿಗಳನ್ನು ಸಲಹುವುದೂ ಖುಷಿ ನೀಡುತ್ತದೆ’ ಎಂದು ಮನ್ಸೂರ್ ಮಾಂಡ್ಲಿಕ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-20-1482488455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.