ಕಾರವಾರ: ಹವಾಮಾನ ವೈಪರಿತ್ಯದ ಪರಿಣಾಮ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಅಬ್ಬರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ನಡುವೆಯೂ ಪ್ರವಾಸಿಗರು ಅಪಾಯ ಲೆಕ್ಕಿಸದೇ ನೀರಿನಲ್ಲಿ ಆಟವಾಡಲು ಮುನ್ನುಗ್ಗುತ್ತಿದ್ದಾರೆ.

ಬೇಸಿಗೆ ರಜೆ ಅವಧಿಯಾಗಿರುವುದರಿಂದ ಇಲ್ಲಿನ ಟ್ಯಾಗೋರ್ ಕಡಲತೀರಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಬಿಸಿಲ ಝಳದಿಂದ ಪಾರಾಗಲು ನೀರಿಗೆ ಇಳಿಯಲು ಪ್ರವಾಸಿಗರ ಗುಂಪು ಹಾತೊರೆಯುತ್ತಿದೆ. ಆದರೆ, ಕೆಲ ದಿನಗಳಿಂದ ಬಿರುಗಾಳಿ ಬೀಸುತ್ತಿರುವ ಪರಿಣಾಮ ಅಲೆಗಳ ಅಬ್ಬರ ಹೆಚ್ಚಿದೆ. ಇದರಿಂದ ನೀರಿಗೆ ಇಳಿಯದಂತೆ ಎಚ್ಚರಿಸಲು ಕಡಲತೀರದಲ್ಲಿ ಅಲ್ಲಲ್ಲಿ ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ.

ಎಚ್ಚರಿಕೆ ಸೂಚನೆ ಲೆಕ್ಕಿಸದೆ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಪ್ರವಾಸಿಗರು ಭಾನುವಾರ ನೀರಿಗೆ ಇಳಿದು ಆಡವಾಡುತ್ತಿದ್ದರು. ಅವರ ನಿಯಂತ್ರಣಕ್ಕೆ ಕಡಲತೀರದಲ್ಲಿ ಸಿಬ್ಬಂದಿಯೂ ಇರಲಿಲ್ಲ. ಒಬ್ಬರೇ ಪ್ರವಾಸಿ ಮಿತ್ರ, ಒಬ್ಬ ಜೀವರಕ್ಷಕರ ಹೊರತಾಗಿ ಬೇರೆ ಸಿಬ್ಬಂದಿ ಇರಲಿಲ್ಲ. ಪ್ರವಾಸಿ ಮಿತ್ರ ಪ್ರವಾಸಿಗರನ್ನು ತೀರದಿಂದ ದೂರ ನಿಲ್ಲುವಂತೆ ಎಚ್ಚರಿಸುವ ಕೆಲಸ ಮಾಡುತ್ತಿದ್ದರೂ ಪ್ರವಾಸಿಗರು ನೀರು ಬಿಟ್ಟು ಕದಲುತ್ತಿರಲಿಲ್ಲ.

‘ಹವಾಮಾನ ವೈಪರಿತ್ಯದ ಸಮಯದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಾಗ ಅಪಾಯ ಹೆಚ್ಚುತ್ತದೆ. ಈಚೆಗಷ್ಟೆ ಇಬ್ಬರು ಮಕ್ಕಳು ನೀರಿನಲ್ಲಿ ಈಜುವಾಗ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಸ್ಥಳೀಯರು ಸಹಾಯಕ್ಕೆ ಧಾವಿಸದಿದ್ದರೆ ನೀರು ಪಾಲಾಗುತ್ತಿದ್ದರು. ವಾರಾಂತ್ಯದ ದಿನ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಅಪಾಯದ ಸೂಚನೆ ಬಗ್ಗೆ ತಿಳಿಸಿದರೂ ಅವರು ಲೆಕ್ಕಿಸುತ್ತಿಲ್ಲ. ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸದೆ ಜಿಲ್ಲಾಡಳಿತ ನಿರ್ಲಕ್ಷಿಸುತ್ತಿದೆ’ ಎಂದು ಸ್ಥಳಿಯ ಮೀನುಗಾರ ಉದಯ ಬಾನಾವಳಿ ದೂರಿದರು.

‘ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ನೀರಿಗೆ ಇಳಿಯದಂತೆ ಕಡಲತೀರದಲ್ಲಿ ಮುನ್ನೆಚ್ಚರಿಕೆ ಫಲಕ ಅಳವಡಿಕೆಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-20-1859492992

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.