ಕಾರವಾರ: ‘ನಿರಂತರ ಪ್ರಯತ್ನ, ತಾಳ್ಮೆಗೆ ಭಗೀರಥ ಮಹರ್ಷಿ ಅನ್ವರ್ಥರಾಗಿದ್ದಾರೆ. ಅವರ ಜೀವನಗಾಥೆ ಪ್ರತಿಯೊಬ್ಬರಿಗೂ ಬದುಕಿಗೆ ಪಾಠವಾಗಬೇಕು’ ಎಂದು ಜಿಲ್ಲಾ ಚುನಾವಣೆ ಶಾಖೆ ತಹಶೀಲ್ದಾರ್ ಪ್ರಮೋದ ನಾಯ್ಕ ಹೇಳಿದರು.

ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಗೀರಥ ಮಹರ್ಷಿ ಅವರ ಕಠಿಣ ತಪಸ್ಸಿನ ಫಲವಾಗಿ ಗಂಗೆ ಒಲಿದು ಭೂಮಿಗೆ ಹರಿದು ಬಂದಳು ಎಂಬ ಪ್ರತೀತಿ ಇದೆ. ಮಾಡುವ ಯಾವುದೇ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸದೆ ಪರಿಪೂರ್ಣತೆ ಕಾಣುವಂತಾಗಬೇಕು ಎಂಬುದೇ ಮಹರ್ಷಿಗಳ ಬದುಕಿನ ಪಾಠವಾಗಿದೆ’ ಎಂದರು.

ಉಪನ್ಯಾಸ ನೀಡಿದ ಅಂಕೋಲಾದ ಉಪನ್ಯಾಸಕ ಮಹೇಶ ನಾಯಕ, ‘ಭಗೀರಥ ಮಹರ್ಷಿ ದೃಢ ಸಂಕಲ್ಪ ಮತ್ತು ಸತತ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ ಎಂದು ತೋರಿಸಿಕೊಟ್ಟರು. ಅವಂರತೆ ಸಮಾಜದ ಹಿತಚಿಂತನೆ, ಧೈರ್ಯ, ನಂಬಿಕೆಯ ಹಾದಿಯಲ್ಲಿ ಪ್ರತಿಯೊಬ್ಬರು ನಡೆದಾಗ ಯಶಸ್ಸು ಪಡೆಯಬಹುದು’ ಎಂದರು.

ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಕುಮಾರ ನಾಯ್ಕ ಮಾತನಾಡಿ, ‘ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದು ಎಂಬುದಕ್ಕೆ ಮುನ್ನಡೇ ಬರೆದವರು ಭಗೀರಥರು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಸ್ವಾಗತಿಸಿದರು, ಭಗೀರಥ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರಪ್ಪ, ಫಕೀರಪ್ಪ, ಶಿಕ್ಷಕಿ ವನಿತಾ ಶೇಟ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-20-1429089089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.