ಕಾರವಾರ: ‘ಸುಳ್ಳುಗಳ ಮೂಲಕವೇ ತನ್ನ ಅಧಿಕಾರಾವಧಿಯನ್ನು ಮುಗಿಸುವ ಬಿಜೆಪಿ ಮಹಿಳಾ ಮೀಸಲಾತಿಯ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೆ ತರಲು ಕಸರತ್ತು ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತಂಡದ ಕುತಂತ್ರದ ಸಂಚಿಗೆ ಸೋಲಾಗಿದೆ’ ಎಂದು ಸಿಪಿಐ (ಎಂ) ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ್ ಟೀಕಿಸಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳಾ ಮೀಸಲಾತಿಯು 2023ರ ಸೆ.29ರಂದೇ ಕಾನೂನಾಗಿದೆ. ಹಲವು ಕಾರಣ ಮುಂದಿಟ್ಟು ಇದರ ಜಾರಿಯನ್ನು ಮಾಡಿಲ್ಲದ ಬಿಜೆಪಿ ತನ್ನ ಚರಿತ್ರೆಯನ್ನು ತಾನೇ ಮರೆತಂತಿದೆ. ಅಂದು ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕೃತ ಪ್ರಕಟಣೆಯನ್ನು ತಡೆ ಹಿಡಿದಿತ್ತು. ಜನಗಣತಿಯ ನಂತರ ಅದನ್ನು ಜಾರಿಗೆ ತರಲಾಗುವುದು ಎಂದು ಹೇಳಿತ್ತು’ ಎಂದು ಅವರು ಹೇಳಿದರು.

‘ಸರ್ಕಾರಿ ಮಾಧ್ಯಮಗಳನ್ನು ಬಳಸಿ ರಾಜಕೀಯ ಸಂದೇಶ ನೀಡಿದ ಪ್ರಧಾನಿ ಮೋದಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ’ ಎಂದರು.

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಾಂತಾರಾಮ ನಾಯಕ ಮಾತನಾಡಿ, ‘ಬಿಜೆಪಿಗರಿಗೆ ಮಹಿಳೆಯರನ್ನು ಗೌರವಿಸಲು ಮನಸ್ಸಿಲ್ಲ. ಅವರು ಮೂಲತಃ ಮನುಸ್ಕೃತಿಯ ಆರಾಧಕರು’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ತಿಲಕ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗೀತಾ ನಾಯ್ಕ, ಡಿ.ಸ್ಯಾಮ್ಸನ್, ರತ್ನದೀಪಾ, ಮುತ್ತಾ ಪೂಜಾರಿ, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-20-1718650641

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.