ಕಾರವಾರ: ಕೇಂದ್ರ ಸರ್ಕಾರದ ಅನುದಾನದಲ್ಲಿ ಜಿಲ್ಲೆಗೊಂದು ಕ್ರಿಟಿಕಲ್ ಕೇರ್ ಯುನಿಟ್ (ಸಿಸಿಯು) ಆಸ್ಪತ್ರೆ ನಿರ್ಮಿಸುವ ಯೋಜನೆ ಜಿಲ್ಲೆಯಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಆವರಣದಲ್ಲಿ ಕಟ್ಟಡವಷ್ಟೇ ತಲೆ ಎತ್ತಿದ್ದು, ಸೌಲಭ್ಯಗಳನ್ನು ಒದಗಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿದೆ.

ಕೇಂದ್ರದ ₹16 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣ ಕೆಲಸ ಮೂರು ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು. ಸದ್ಯ ಕಟ್ಟಡ ನಿರ್ಮಾಣ ಕೆಲಸ ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆ. ವಿದ್ಯುತ್ ಸಂಪರ್ಕ, ಒಳಚಾವಣಿ ಅಳವಡಿಕೆ ಸೇರಿದಂತೆ ಕೆಲ ಕೆಲಸಗಳು ಈವರೆಗೆ ಪೂರ್ಣಗೊಂಡಿಲ್ಲ ಎಂಬ ದೂರುಗಳಿವೆ.

‘ಸಿಸಿಯು ಆಸ್ಪತ್ರೆ ಕಟ್ಟಡ ನಿರ್ಮಾಣ ಗುತ್ತಿಗೆ ಒಪ್ಪಂದದ ಪ್ರಕಾರ 2024ರ ಅ.17ರಂದು ಪೂರ್ಣಗೊಳ್ಳಬೇಕಿತ್ತು. ಅವಧಿ ಮೀರಿ ಎರಡು ವರ್ಷ ಕಳೆದಿದೆ. ವೈದ್ಯಕೀಯ ಸೇವೆಗೆ ಸಜ್ಜುಗೊಳ್ಳಲು ಇನ್ನಷ್ಟು ಸಮಯಾವಕಾಶ ತಗುಲಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸಿಸಿಯು ಆಸ್ಪತ್ರೆ ಸ್ಥಾಪನೆಗೆ ಜಾಗ ನಿರ್ಧರಿಸಿಕೊಡಲು ಸಮಯಾವಕಾಶ ತಗುಲಿತು. ಈ ಮೊದಲು ಅಂಕೋಲಾ ಸಮೀಪದ ಹಟ್ಟಿಕೇರಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಆ ಬಳಿಕ ಜಾಗ ಬದಲಿಸಲಾಯಿತು. ಕ್ರಿಮ್ಸ್ ಆವರಣದಲ್ಲೇ ನಿರ್ಮಾಣಕ್ಕೆ ಅಂತಿಮ ನಿರ್ಣಯ ಆಗಿದ್ದರಿಂದ ಆಸ್ಪತ್ರೆ ನಿರ್ಮಾಣ ಕೆಲಸಕ್ಕೆ ವಿಳಂಬವಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಕ್ರಿಟಿಕಲ್ ಕೇರ್ ಯುನಿಟ್ ಆಸ್ಪತ್ರೆಯಲ್ಲಿ ಸ್ತ್ರೀರೋಗ, ಮೂಳೆರೋಗ, ಅನಸ್ತೇಶಿಯಾ ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ಲಭ್ಯರಿರಲಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವವರಿಗೆ ಇಲ್ಲಿ ಚಿಕಿತ್ಸೆ ಒದಗಿಸಲು ಸೌಲಭ್ಯಗಳು ಇರಲಿವೆ. ಈ ಆಸ್ಪತ್ರೆ ಆರಂಭದೊಂದಿಗೆ ಹೆಚ್ಚುವರಿ ತುರ್ತು ಚಿಕಿತ್ಸಾ ಘಟಕ ಲಭ್ಯವಾಗುವುದರಿಂದ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲವಾಗಲಿದೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ ತಿಳಿಸಿದರು.

ಸಿಸಿಯು ಆಸ್ಪತ್ರೆಯ ಕಟ್ಟಡ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಯಂತ್ರೋಪಕರಣಗಳನ್ನು ಪೂರೈಸಿ, ತಜ್ಞ ವೈದ್ಯರರನ್ನು ನೇವ ಕೆಲವೇ ತಿಂಗಳಲ್ಲಿ ಸೇವೆಗೆ ಲಭ್ಯವಾಗಲಿದೆ
ಡಾ.ಪೂರ್ಣಿಮಾ ಆರ್.ಟಿ ಕ್ರಿಮ್ಸ್ ನಿರ್ದೇಶಕಿ

ಸಂಪರ್ಕ ರಸ್ತೆಗೆ ಹೆಚ್ಚಿದ ಒತ್ತಡ

'ಕ್ರಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಯುನಿಟ್ ಆಸ್ಪತ್ರೆ ಆರಂಭಗೊಳ್ಳುವ ಜೊತೆಗೆ, ಪಕ್ಕದಲ್ಲಿನ ಹಳೆಯ ಜಿಲ್ಲಾಸ್ಪತ್ರೆ ಕಟ್ಟಡದ ಜಾಗದಲ್ಲಿ ಸೂಪರ್ ಒಪ್ಪಿಗೆ ಸಿಕ್ಕಿದೆ. ಸಮೀಪದ ರಾಷ್ಟ್ರೀಯ ಹೆದ್ದಾರಿಯಿಂದ ಇಲ್ಲಿಗೆ ನೇರ ಸಂಪರ್ಕ ಒದಗಿಸಲು ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಒತ್ತಡ ಹೆಚ್ಚುತ್ತಿದ

ಆರ್ಟಿಒ ಕಚೇರಿ ಸ್ಥಳಾಂತರಿಸಿ, ಅಲ್ಲಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದ ಜಾಗ ಬಳಸಿಕೊಂಡು ಆಸ್ಪತ್ರೆಗೆ ರಸ್ತೆ ನಿರ್ಮಿಸಲು ನೀಲನಕ್ಷೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.