ಕಾರವಾರ: ಕರಾವಳಿ ಭಾಗದಲ್ಲಿ ಬೇಸಿಗೆಯಲ್ಲಿ ಸಮುದ್ರದ ಉಪ್ಪು ನೀರು ನುಗ್ಗದಂತೆ ತಡೆಯುವ ಖಾರ್ಲ್ಯಾಂಡ್ ಒಡ್ಡು, ಮಲೆನಾಡು ಭಾಗದಲ್ಲಿ ಬೇಸಿಗೆಗೆ ನೀರು ಸಂಗ್ರಹಿಸಿಡಲು ಕಿಂಡಿ ಅಣೆಕಟ್ಟು ನಿರ್ವಹಿಸಲು ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷಿಸಿದೆ ಎಂಬ ಆರೋಪ ಹೆಚ್ಚಿದೆ. ಕರಾವಳಿಯಲ್ಲಿ ಉಪ್ಪು ನೀರು ನೀರು ನುಗ್ಗಿ ಜಲಮೂಲಗಳು ಸವುಳಾಗುತ್ತಿದ್ದರೆ, ಮಲೆನಾಡು ಭಾಗದಲ್ಲಿ ನೀರೆಲ್ಲ ಇಂಗಿದ್ದರಿಂದ ರೈತರು ಪರಿತಪಿಸುವಂತಾಗಿದೆ.

‘ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ಪೂರಕವಾಗಿ ಕಿಂಡಿ ಅಣೆಕಟ್ಟುಗಳಿಂದ ನೀರು ಸಿಗುತ್ತಿತ್ತು. ಅವುಗಳ ಅಕ್ಕಪಕ್ಕದ ಬಾವಿ, ಕೆರೆಗಳಲ್ಲಿ ನೀರು ಸಂಗ್ರಹಕ್ಕೆ ಪೂರಕವಾಗಿತ್ತು. ಆದರೆ, ಈಚಿನ ವರ್ಷದಲ್ಲಿ ಅಣೆಕಟ್ಟೆಗಳ ಗೇಟ್ಗಳನ್ನೇ ಮುಚ್ಚುತ್ತಿಲ್ಲ. ಮುಚ್ಚಿದ್ದರೂ ತುಕ್ಕು ಹಿಡಿದ ಅವುಗಳಿಂದ ನೀರು ಸೋರಿಕೆಯಾಗಿ ಬೇಸಿಗೆಗೆ ನೀರು ಸಿಗುತ್ತಿಲ್ಲ’ ಎಂಬುದು ಘಟ್ಟದ ಮೇಲಿನ ತಾಲ್ಲೂಕಿನ ರೈತರ ದೂರು.

‘ಕಾರವಾರ ಸೇರಿದಂತೆ ಕರಾವಳಿ ತಾಲ್ಲೂಕಿನ ಗಜನಿ ಪ್ರದೇಶಗಳಿಗೆ, ಅವುಗಳಿಗೆ ಹೊಂದಿಕೊಂಡಿರುವ ಕೃಷಿ ಭೂಮಿಗೆ ವ್ಯಾಪಕ ಪ್ರಮಾಣದ ಉಪ್ಪು ನೀರು ನುಗ್ಗುವುದು ನಿಂತಿಲ್ಲ. ಒಡ್ಡು ನಿರ್ಮಿಸಿದ್ದರೂ ಅವುಗಳಿಗೆ ವ್ಯವಸ್ಥಿತವಾಗಿ ಗೇಟ್ಗಳನ್ನೂ ಅಳವಡಿಸುತ್ತಿಲ್ಲ’ ಎಂಬುದು ಕರಾವಳಿ ರೈತರ ಅಳಲು.

‘ಹಳೆಯ ಖಾರ್ಲ್ಯಾಂಡ್ ಒಡ್ಡು, ಕಿಂಡಿ ಅಣೆಕಟ್ಟೆಗಳ ನಿರ್ವಹಣೆಗೆ ಅನುದಾನ ಬರುತ್ತಿಲ್ಲ. ಹೊಸದಾಗಿ ಮಂಜೂರಾದ ಕಾಮಗಾರಿಗಳು ಮಾತ್ರವೇ ನಡೆಯುತ್ತಿದೆ. ಅನುದಾನವಿಲ್ಲದೆ ಲಕ್ಷಾಂತರ ಮೊತ್ತದ ಗೇಟ್ಗಳನ್ನು ಅಳವಡಿಸುವುದು ಕಷ್ಟ’ ಎಂಬುದಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಕೃಷಿ ಸಂಪೂರ್ಣವಾಗಿ ನದಿ ಮತ್ತು ಬಾಂದಾರಗಳನ್ನು ಅವಲಂಬಿಸಿದ್ದು, ಕಡು ಬೇಸಿಗೆಯ ಉಷ್ಣಾಂಶದಿಂದಾಗಿ ವರದಾ ನದಿಯ ಹರಿವು ಸಂಪೂರ್ಣ ಸ್ಥಗಿತಗೊಂಡಿದೆ. ಮೊಗವಳ್ಳಿ ಕಿಂಡಿ ಅಣೆಕಟ್ಟೆ ಬಹುತೇಕ ಬತ್ತಿ ಹೋಗಿದ್ದು, ಕೃಷಿಕರಲ್ಲಿ ಆತಂಕ ಮೂಡಿಸಿದೆ.

‘ಬನವಾಸಿ ಭಾಗದ ಭಾಶಿ, ಉಂಚಳ್ಳಿ ಸೇರಿದಂತೆ ವಿವಿಧೆಡೆ ಇರುವ ಕಿಂಡಿ ಅಣೆಕಟ್ಟೆ ಹಾಗೂ ಬಾಂದಾರಗಳಲ್ಲಿ ನೀರಿ ಕೊರತೆ ಆಗಿರುವುದು ಕೇವಲ ಕೃಷಿಯ ಮೇಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ಕೆರೆ ಹಾಗೂ ಬಾವಿಗಳ ಅಂತರ್ಜಲ ಮಟ್ಟದ ಮೇಲೂ ಗಂಭೀರ ಪರಿಣಾಮ ಬೀರಿದೆ’ ಎಂಬುದಾಗಿ ಸ್ಥಳೀಯರು ದೂರುತ್ತಾರೆ.

ಮುಂಡಗೋಡ ತಾಲ್ಲೂಕಿನಲ್ಲಿ ಹೆಚ್ಚು ಕೆರೆ,ಕಟ್ಟೆ ಹಾಗೂ ಜಲಾಶಯಗಳಿದ್ದರೂ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ರೈತರಿಗೆ ಬೇಸಿಗೆಯಲ್ಲಿ ಅನುಕೂಲವಾಗಲು ಹಾಗೂ ಅಂತರ್ಜಲ ಹೆಚ್ಚಳಕ್ಕೆ ಸಹಾಯವಾಗುವ ಉದ್ದೇಶದಿಂದ, ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಬಾಂದಾರ, ಕಿಂಡಿ ಆಣೆಕಟ್ಟು, ಬ್ಯಾರೇಜ್ಗಳು ನಿರ್ವಹಣೆ ಕೊರತೆಯಿಂದ ರೈತರಿಗೆ ಬೇಸಿಗೆಯಲ್ಲಿ ನೀರುಣಿಸುವಲ್ಲಿ ವಿಫಲವಾಗುತ್ತಿವೆ ಎಂಬ ಆರೋಪವಿದೆ.

‘ಕೆಂದಲಗೇರಿ ಸನಿಹ ಉಗ್ಗಿನಕೇರಿ ಹಳ್ಳಕ್ಕೆ ಕಳೆದ ಒಂದು ವರ್ಷದ ಹಿಂದೆ ಬಾಂದಾರ ನಿರ್ಮಿಸಿದರೂ, ಗೇಟ್ ಅಳವಡಿಸಿಲ್ಲ. ಇದರಿಂದ ಮಳೆಗಾಲದ ನೀರನ್ನು ಸಂಗ್ರಹಿಸಿ, ಬೇಸಿಗೆಯಲ್ಲಿ ರೈತರಿಗೆ ಉಪಯೋಗವಾಗುವ ಉದ್ದೇಶ ಇಲ್ಲಿ ಸಂಪೂರ್ಣ ವಿಫಲವಾಗಿದೆ. ಗುತ್ತಿಗೆದಾರ ಅರೆಬರೆ ಕೆಲಸ ಮಾಡಿದ್ದಾರೆ. ಮುಂಗಾರು ಪೂರ್ವ ಮಳೆ ಆರಂಭವಾಗಲಿದ್ದು, ಈ ವರ್ಷವೂ ಗೇಟ್ ಅಳವಡಿಸುವ ಲಕ್ಷಣ ಕಾಣಿಸುತ್ತಿಲ್ಲ’ ಎಂದು ರೈತ ಮುಖಂಡ ನಿಂಗಪ್ಪ ಹೇಳಿದರು.

‘ತಾಲ್ಲೂಕಿನಲ್ಲಿ ಒಟ್ಟು 51 ಬಾಂದಾರಗಳಿದ್ದು, ಕೆಲವೆಡೆ ಗೇಟ್ಗಳನ್ನು ಕಳ್ಳತನ ಮಾಡಿ ದ್ದಾರೆ. ರೈತರು ದೂರು ನೀಡಿ ದರೆ, ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು. ನಿರ್ವಹಣೆಗೆ ಯಾವುದೇ ಅನುದಾನ ಬಿಡುಗಡೆಯಾ ಗಿಲ್ಲ’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಆರ್.ಎಂ.ದಫೇದಾರ ಹೇಳಿದರು.

ಭಟ್ಕಳ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆ ಸಣ್ಣ ನೀರಾವರಿ ಇಲಾಖೆಯಿಂದ ಈ ಹಿಂದೆ ನಿರ್ಮಾಣ ಮಾಡಿದ್ದ ಖಾರ್ಲ್ಯಾಂಡ್ ಒಡ್ಡುಗಳು ಕುಸಿದು ಹೋಗಿದೆ. ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಹೊಲ ತೋಟಗಳಿಗೆ ನೀರು ಸಂಗ್ರಹಕ್ಕಾಗಿ ಮರಳುಚೀಲದ ಒಡ್ಡನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುತ್ತಾರೆ. ಈಚಿನ ವರ್ಷಗಳಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಸುಸ್ಥಿತಿಯಲ್ಲಿದ್ದು, ಮಳೆಗಾಲದ ನಂತರ ಅದರ ಕಿಂಡಿಯನ್ನು ಮುಚ್ಚಿ ನೀರು ಸಂಗ್ರಹ ಮಾಡಲಗುತ್ತಿದೆ. ತಾಲ್ಲೂಕಿನ ಬಂದರ, ಮುರುಡೇಶ್ವರ ತೂದಳ್ಳಿ ಹಾಗೂ ಬೈಲೂರಿನಲ್ಲಿ ಸಮುದ್ರದ ಉಪ್ಪುನೀರು ಮೇಲೆರದಂತೆ ಖಾರ್ಲ್ಯಾಂಡ್ ನಿರ್ಮಿಸಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದು ಸುಸ್ಥಿತಿಯಲ್ಲಿದೆ.

ಅಂಕೋಲಾ ಕಳೆದ ವರ್ಷ ಶಿರೂರು ಗುಡ್ಡ ದುರಂತ ಸಂದರ್ಭದಲ್ಲಿ ಉಳುವರೆ ಗ್ರಾಮದ ಗಂಗಾವಳಿ ನದಿ ತೀರದಲ್ಲಿ ಖಾರ್ಲ್ಯಾಂಡ್ ಒಡ್ದು ಸಂಪೂರ್ಣವಾಗಿ ಕಿತ್ತು ಹೋಗಿದೆ. ಆದರೆ ದುರಂತ ಸಂಭವಿಸಿ ಒಂದೂವರೆ ವರ್ಷದವರೆಗೆ ಮುರು ನಿರ್ಮಾಣ ಮಾಡುವ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಮಳೆಗಾಲಕ್ಕೆ ಒಂದು ತಿಂಗಳು ಅಂತರವಿರುವ ಸಂದರ್ಭದಲ್ಲಿ ಕಾಮಗಾರಿ ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಕುಮಟಾ ತಾಲ್ಲೂಕಿನ ಅಳ್ವೆದಂಡೆ, ಐಗಳಕುರ್ವೆಯಲ್ಲಿ ತಲಾ ₹2 ಕೋಟಿ, ಬಾಡ, ಊರಕೇರಿ, ಹೆಗಡೆ ಮುಂತಾದೆಡೆ ತಲಾ ₹40 ಲಕ್ಷ ಮೊತ್ತದ ಉಪ್ಪು ನೀರು ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

‘45 ರ್ಷಗಳ ಹಿಂದೆ ತಾಲ್ಲೂಕಿನ ಇಡೀ ಹಿನ್ನೀರು ಪ್ರದೇಶಕ್ಕೆ ಉಪ್ಪು ನೀರು ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಅದನ್ನು ಮುಂದೆ ನಿರ್ವಹಣೆ ಮಾಡದೇ ಜನವಸತಿ, ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಕುಡಿಯುವ ನೀರು ಸಮಸ್ಯೆ ಉಂಟಾಗುತ್ತಿದೆ. ಶಾಶ್ವತ ತಡೆಗೋಡೆ, ನಿರಂತರ ನಿರ್ವಹಣೆ ಇದ್ದರೆ ಮಾತ್ರ ಕುಡಿಯುವ ನೀರು ಹಾಗೂ ಕೃಷಿ ರಕ್ಷಣೆ ಸಾಧ್ಯ’ ಎಂದು ಕೊಡಕಣಿ ಗ್ರಾಮಸ್ಥ ನಾಗರಾಜ ನಾಯ್ಕ ಹೇಳಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ್,

ಈಚಿನ ವರ್ಷದಲ್ಲಿ ಅಣೆಕಟ್ಟೆಗಳ ಗೇಟ್ಗಳನ್ನೇ ಮುಚ್ಚದ ಅಧಿಕಾರಿಗಳು

ಕೃಷಿ ಭೂಮಿಗೆ ವ್ಯಾಪಕ ಪ್ರಮಾಣದ ಉಪ್ಪು ನೀರು ನುಗ್ಗುವುದು ನಿಂತಿಲ್ಲ

ಕ್ರಮಕ್ಕೆ ರೈತರ ಆಗ್ರಹ

ಮಾಜಾಳಿ ಕೊಠಾರ ಭಾಗದಲ್ಲಿ ಉಪ್ಪುನೀರು ನುಗ್ಗುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಬೇಸಿಗೆಯಲ್ಲಿ ಜಲಮೂಲಗಳು ಸವುಳಾಗುತ್ತಿವೆ ಮಂಗಲಾ ಕೊಠಾರಕರ
ಕೊಠಾರ ಗ್ರಾಮಸ್ಥೆ

ಹುನಗುಂದ ಸಮೀಪ ತಾಯವ್ವನ ಹಳ್ಳಕ್ಕೆ ನಿರ್ಮಿಸಿರುವ ಬಾಂದಾರ ಗೇಟ್ ಮುರಿದು ವರ್ಷ ಕಳೆದಿದೆ. ನೀರು ನಿಲ್ಲಿಸಲು ಗೇಟ್ ಅಳವಡಿಸುವಂತೆ ಹೋದ ವರ್ಷದಿಂದ ಮನವಿ ನೀಡಿದರೂ, ಅನುದಾನ ನೀಡಿಲ್ಲ
ರಾಮಣ್ಣ ಹುನಗುಂದ ಗ್ರಾಮದ ರೈತ

ಕೃಷಿ ಭೂಮಿಗೆ ಉಪ್ಪು ನೀರು

ಗೋಕರ್ಣ ಸಮೀಪದ ತೊರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಖಾರ್ಲ್ಯಾಂಡ್ ಪ್ರದೇಶದಲ್ಲಿ ಅಸಮರ್ಪಕ ನಿರ್ವಹಣೆಯಿಂದ ಕೆಲವು ಸಂದರ್ಭದಲ್ಲಿ ಕೃಷಿ ಭೂಮಿಗೂ ನೀರು ನುಗ್ಗುತ್ತಿದೆ ಎಂಬುದು ಸ್ಥಳೀಯ ರೈತರ ದೂರು.

‘ಇಲ್ಲಿನ ಗಜನಿ ಭೂಮಿಗೆ ಒಟ್ಟು 5 ಗೇಟುಗಳನ್ನು ಅಳವಡಿಸಲಾಗಿದೆ. ಅದರಲ್ಲಿ 2 ಗೇಟುಗಳ ನಿರ್ವಹಣೆ ಮಾತ್ರ ತೊರ್ಕೆ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. 3 ಗೇಟುಗಳ ನಿರ್ವಹಣೆ ಸಣ್ಣ ನೀರಾವರಿ ಇಲಾಖೆ ಮಾಡುತ್ತಿದೆ. ಇದರಿಂದಲೇ ಸಮಸ್ಯೆ ಉಂಟಾಗುತ್ತಿದೆ. ಕೆಲವು ಸಲ ಮೀನು ಹಿಡಿಯಲು ಹೋದವರು ಆ ಗೇಟುಗಳನ್ನು ತೆರೆದಿಟ್ಟೇ ಬರುತ್ತಾರೆ. ಇದರಿಂದ ಉಪ್ಪು ನೀರು ಸಮೀಪದ ಕೃಷಿ ಭೂಮಿಗೂ ನುಗ್ಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ

ಕಿರು ಅಣೆಕಟ್ಟೆಯಿಂದ ಅಂತರ್ಜಲ ವೃದ್ಧಿ

‘ಯಲ್ಲಾಪುರ ತಾಲ್ಲೂಕಿನ ಬೀಗಾರ ಹಳ್ಳಕ್ಕೆ ನಾಲ್ಕು ಕಡೆ ಕಿರು ಅಣೆಕಟ್ಟು ಕಟ್ಟಿ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ತುಡುಗುಣಿ ಹಾಗೂ ಕೆರೆಹೊಸಳ್ಳಿಯಲ್ಲೂ ಕಿರು ಅಣೆಕಟ್ಟು ಕಟ್ಟಲಾಗಿದ್ದು ರೈತರಿಗೆ ಉಪಯುಕ್ತವಾಗಿವೆ. ಹುಲಗೋಡ ಗ್ರಾಮದಲ್ಲಿ ಕಿರು ಅಣೆಕಟ್ಟು ಕಟ್ಟಿದ ನಂತರ ಹಳ್ಳದಲ್ಲಿ ನೀರು ನಿಂತು ಭೂಮಿಯಲ್ಲಿ ಇಂಗುವುದರಿಂದ ಅಂತರ್ಜಲ ಹೆಚ್ಚಿದೆ. ಇಲ್ಲಿನ ಬಾವಿಗಳಲ್ಲಿ ಮೊದಲಿಗಿಂತ ಹೆಚ್ಚಿನ ಪ್ರಮಾಣದ ನೀರು ನಿಲ್ಲುತ್ತಿದೆ’ ಎನ್ನುತ್ತಾರೆ ಹುಲಗೋಡ ನಿವಾಸಿ ನರಸಿಂಹ ಭಾಗ್ವತ.

‘ಕಿಂಡಿ ಅಣೆಕಟ್ಟು ಕಟ್ಟಲು ಗ್ರಾಮಸ್ಥರ ಬೇಡಿಕೆ ಇದೆ. ಮೂರು ವರ್ಷಗಳಿಂದ ಕಿರು ಅಣೆಕಟ್ಟು ಕಟ್ಟಲು ಅನುದಾನ ಬಂದಿಲ್ಲ’ ಎಂದು ಸಣ್ಣ ನೀರಾವರಿ ಇಲಾಖೆ ಎಇ ಆರ್.ಐ.ನಾಯ್ಕ ಪ್ರತಿಕ್ರಿಯಿಸಿದರು.

‘ಇಲ್ಲಿನ ಗಜನಿ ಭೂಮಿಗೆ ಒಟ್ಟು 5 ಗೇಟುಗಳನ್ನು ಅಳವಡಿಸಲಾಗಿದೆ. ಅದರಲ್ಲಿ 2 ಗೇಟುಗಳ ನಿರ್ವಹಣೆ ಮಾತ್ರ ತೊರ್ಕೆ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. 3 ಗೇಟುಗಳ ನಿರ್ವಹಣೆ ಸಣ್ಣ ನೀರಾವರಿ ಇಲಾಖೆ ಮಾಡುತ್ತಿದೆ. ಇದರಿಂದಲೇ ಸಮಸ್ಯೆ ಉಂಟಾಗುತ್ತಿದೆ. ಕೆಲವು ಸಲ ಮೀನು ಹಿಡಿಯಲು ಹೋದವರು ಆ ಗೇಟುಗಳನ್ನು ತೆರೆದಿಟ್ಟೇ ಬರುತ್ತಾರೆ. ಇದರಿಂದ ಉಪ್ಪು ನೀರು ಸಮೀಪದ ಕೃಷಿ ಭೂಮಿಗೂ ನುಗ್ಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-20-648964123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.