ಕಾರವಾರ: ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ನಗರದ ಹಬ್ಬುವಾಡ ಬಳಿ ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರೀಕರಣ ಮಾಡಿ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣೆ ವಿಭಾಗ (ಕೆಶಿಪ್) ಬುಧವಾರ ಡಾಂಬರು ಕೀಳುವ ಕೆಲಸ ಮಾಡಿದೆ.

ಜನರಿಂದ ವ್ಯಾಪಕ ಟೀಕೆ ಎದುರಾದ ಬಳಿಕ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆ ಕಂಪನಿಗೆ ಎಚ್ಚರಿಕೆ ನೀಡಿ ಡಾಂಬರು ತೆರವುಗೊಳಿಸಲು ಸೂಚಿಸಿದ್ದರು. ಇದ ರಿಂದ ಒಂದು ದಿನ ಮುಂಚೆಯಷ್ಟೆ ರಸ್ತೆಯ ಕೆಲವೆಡೆ ಮಾಡಿದ್ದ ಡಾಂಬರೀಕರಣ ಹಾಸನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ಗೀತಾಂಜಲಿ ವೃತ್ತದ ಸಮೀಪ ಸುಮಾರು 80 ಮೀಟರ್, ಇಸ್ಕಾನ್ ಕ್ರಾಸ್ ಸಮೀಪ ಸುಮಾರು 100 ಮೀಟರ್ ದೂರದವರೆಗೆ ಕಾಂಕ್ರೀಟ್ ರಸ್ತೆಯ ಮೇಲೆಯೇ ಮಂಗಳವಾರ ಡಾಂಬರೀಕರಣ ಮಾಡಲಾಗಿತ್ತು. ಈ ಕೆಲಸಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜನವಿರೋಧದಿಂದ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಕಾರ್ಮಿಕರು ತೆರಳಿದ್ದರು.

ಜೆಸಿಬಿ ಬಳಸಿ ಡಾಂಬರು ತೆಗೆಯುತ್ತಿರುವುದರಿಂದ ಈ ಮುಂಚೆ ಇದ್ದ ಸುಸಜ್ಜಿತ ರಸ್ತೆ ಹಾಳಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

‘ರಾಜ್ಯ ಹೆದ್ದಾರಿಯಲ್ಲಿನ ಬ್ಲ್ಯಾಕ್ ಸ್ಪಾಟ್ಗಳಲ್ಲಿ ರಸ್ತೆ ಸುಧಾರಣೆ ಯೋಜನೆ ಭಾಗವಾಗಿ ಈ ಕಾಮಗಾರಿ ನಡೆಸಲು ಮುಂದಾಗಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಡಾಂಬರೀಕರಣ ಕೆಲಸ ಕೈಬಿಟ್ಟು, ರಸ್ತೆಗೆ ಹಾಕಿದ್ದ ಡಾಂಬರು ಹಾಸು ತೆರವು ಮಾಡುತ್ತಿದ್ದೇವೆ’ ಎಂದು ಗುತ್ತಿಗೆ ಕಂಪನಿಯ ಮೇಲ್ವಿಚಾರಕ ರೋಹಿತ್ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-20-152726588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.