ಕಾರವಾರ: ಕೈಗಾ–ಇಳಕಲ್ ರಾಜ್ಯ ಹೆದ್ದಾರಿಗೆ ಇಲ್ಲಿನ ಗೀತಾಂಜಲಿ ವೃತ್ತದಿಂದ ಹಬ್ಬುವಾಡಾವರೆಗೆ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರೀಕರಣ ಮಾಡಲು ಮುಂದಾದ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣೆ ವಿಭಾಗದ (ಕೆಶಿಪ್) ನಡೆ ಚರ್ಚೆಗೆ ಗ್ರಾಸವಾಗಿದೆ.

ಕೆಲವೇ ವರ್ಷದ ಹಿಂದೆ ನಿರ್ಮಾಣಗೊಂಡಿರುವ, ಸದ್ಯ ಸುಸಜ್ಜಿತ ಸ್ಥಿತಿಯಲ್ಲಿರುವ ಕಾಂಕ್ರೀಟ್ ರಸ್ತೆ ಮೇಲೆ ಮಂಗಳವಾರ ಕೆಶಿಪ್ನಿಂದ ಗುತ್ತಿಗೆ ಪಡೆದ ವಿಜಯಪುರ ಜಿಲ್ಲೆಯ ಮೂಲದ ಗುತ್ತಿಗೆ ಸಂಸ್ಥೆಯ ಕಾರ್ಮಿಕರು ಡಾಂಬರೀಕರಣ ನಡೆಸುವ ಕೆಲಸ ಕೈಗೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಡಾಂಬರೀಕರಣ ಕೆಲಸಕ್ಕೆ ಆಕ್ಷೇಪಿಸಿದರು.

ಜನರ ವಿರೋಧದ ನಡುವೆಯೂ ಕಾರ್ಮಿಕರು ಬೃಹತ್ ಯಂತ್ರ, ರೋಲರ್ ಬಳಸಿ ಡಾಂಬರೀಕರಣ ನಡೆಸುತ್ತಿದ್ದರು. ಇದರಿಂದ ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯೂ ಉಂಟಾಯಿತು. ಹಬ್ಬುವಾಡಾದ ಇಸ್ಕಾನ್ ದೇವಾಲಯ ಕ್ರಾಸ್ ಸಮೀಪ ಕಾಮಗಾರಿ ನಡೆಸುವ ವೇಳೆ ಜನರು ಪ್ರಬಲ ಪ್ರತಿರೋಧ ಒಡ್ಡಿದರು. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕೆಲಸ ತಾತ್ಕಾಲಿಕ ಸ್ಥಗಿತಗೊಳಿಸಲು ಸೂಚಿಸಿದರು.

ಕಾಮಗಾರಿ ಕೈಗೊಳ್ಳಲು ನೀಡಿದ ಕಾರ್ಯಾದೇಶ ಪತ್ರದ ದಾಖಲೆ ತೋರಿಸುವಂತೆ ಕಂಪನಿಯ ಸಿಬ್ಬಂದಿಗೆ ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ಹೇಳಿದರು. ಆದರೆ, ದಾಖಲೆ ಪತ್ರ ತೋರಿಸಲ ಅವರು ಹಿಂದೇಟು ಹಾಕಿದರು. ಈ ವೇಳೆ ಕಾಮಗಾರಿ ಮೇಲ್ವಿಚಾರಕರನ್ನು ತರಾಟೆಗೆ ಪಡೆದ ಜನರು ಸುಸಜ್ಜಿತ ರಸ್ತೆಯ ಮೇಲೆ ಡಾಂಬರು ಸುರಿಯುತ್ತಿರುವುದಕ್ಕೆ ಆಕ್ಷೇಪಿಸಿದರು. ಕೆಲಸ ಸ್ಥಗಿತಗೊಳಿಸಲು ಒತ್ತಾಯಿಸಿದರು. ಜನರ ವಿರೋಧ ಹೆಚ್ಚಿದ್ದರಿಂದ ಕಾಮಗಾರಿ ಕೈಬಿಟ್ಟು ಕಾರ್ಮಿಕರು ತೆರಳಿದರು.

‘ರಸ್ತೆ ಸುಸಜ್ಜಿತ ಇದ್ದಾಗಲೂ ಡಾಂಬರೀಕರಣ ಮಾಡುತ್ತಿರುವುದು ಶಂಕೆ ಮೂಡಿಸುತ್ತಿದೆ. ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರೀಕರಣ ಮಾಡಿರುವುದಕ್ಕೆ ಕಾರ್ಮಿಕರ ಬಳಿ ಸಮರ್ಪಕ ಉತ್ತರ ಇಲ್ಲ. ಅಧಿಕಾರಿಗಳನ್ನು ವಿಚಾರಿಸಿದರೂ ಅವರಿಗೆ ಮಾಹಿತಿ ಇಲ್ಲ. ಹಲವೆಡೆ ಹದಗೆಟ್ಟ ಸ್ಥಿತಿಯಲ್ಲಿರುವ ರಸ್ತೆಗಳಿದ್ದು, ಅಂತಹ ರಸ್ತೆಗಳನ್ನು ಸರಿಪಡಿಸಲಿ’ ಎಂದು ಸಾಮಾಜಿಕ ಕಾರ್ಯಕರ್ತ ಅರುಣ ಹಬ್ಬು ಹೇಳಿದರು.

‘ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಕೆಶಿಪ್ನಿಂದ ಕಾರವಾರ–ಇಳಕಲ್ ರಾಜ್ಯ ಹೆದ್ದಾರಿಗೆ ನಗರ ವ್ಯಾಪ್ತಿಯಲ್ಲಿ 1.4 ಕಿ.ಮೀ ಡಾಂಬರೀಕರಣ ನಡೆಸಲು ಕಾರ್ಯಾದೇಶ ನೀಡಿದ್ದಾರೆ. ರಸ್ತೆಯ ಮಧ್ಯೆ ವಿಭಜಕ ಅಳವಡಿಕೆಗೂ ಸೂಚನೆ ಇದೆ’ ಎಂದು ಗುತ್ತಿಗೆ ಸಂಸ್ಥೆಯ ಮೇಲ್ವಿಚಾರಕ ರೋಹಿತ್ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-20-1751553155

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.