ಕಾರವಾರ: ತಾಲ್ಲೂಕಿನ ಅಸ್ನೋಟಿಯಲ್ಲಿ ಕಟ್ಟಡ ಕಾರ್ಮಿಕರೊಬ್ಬರನ್ನು ಶನಿವಾರ ತಡರಾತ್ರಿ ಹತ್ಯೆ ಮಾಡಲಾಗಿದೆ.

ಗುಜರಾತ್ ಮೂಲದ ಕಾರ್ಮಿಕ ದೆವೇಶ ರಾಥೋಡ (28) ಹತ್ಯೆಯಾದವ. ಆತನೊಂದಿಗೆ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.

'ಬಾಗಲಕೋಟೆ ಜಿಲ್ಲೆ ಶಿರೂರು ಹಳ್ಳಿಯ ಶಿವಾನಂದ ನಾಯ್ಕರ (45) ಮತ್ತು ಹಾವೇರಿ ಜಿಲ್ಲೆ ಸವಣೂರಿನ ಮರಿಯಪ್ಪಾ ಹರಿಜನ (43) ಎಂಬುವವರನ್ನು ಬಂಧಿಸಲಾಗಿದೆ. ಮದ್ಯದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಹತ್ಯೆ ನಡೆದಿರುವ ಶಂಕೆ ಇದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರು ಅಸ್ನೋಟಿಯಲ್ಲಿ ನಿವೃತ್ತ ನೌಕರ ಕಮಲಕಾರ ಗಡಕರ ಎಂಬುವವರು ಕಟ್ಟಿಸುತ್ತಿದ್ದ ಮನೆ ನಿರ್ಮಾಣಕ್ಕೆ ಗಾರೆ ಕೆಲಸ ಮಾಡಲು ಬಂದವರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.