ಕಾರವಾರ: ಜಿಲ್ಲಾ ಕೇಂದ್ರವಾದರೂ ಜಿಲ್ಲಾ ಕ್ರೀಡಾಂಗಣ ಇಲ್ಲದ ಕೊರಗು ಎದುರಿಸುತ್ತಿರುವ ಕಾರವಾರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಗುರುತಿಸಿದ್ದ ಅರಣ್ಯ ಭೂಮಿ ಪಡೆಯಲು ಮರುಪ್ರಯತ್ನ ಸಾಗಿದೆ.

ಶಿರವಾಡ ಗ್ರಾಮದ ಸರ್ವೆ ನಂ.17ಅ ದಲ್ಲಿರುವ, ರೈಲು ನಿಲ್ದಾಣಕ್ಕೆ ಸಮೀಪದ 5 ಹೆಕ್ಟೇರ್ ಭೂಮಿ ಪಡೆಯುವ ಸಲುವಾಗಿ ₹1.31 ಕೋಟಿಯಷ್ಟು ಪರಿಹಾರ ಮೊತ್ತ ಪಾವತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಪ್ಪದ ಕಾರಣಕ್ಕೆ ಯೋಜನೆ ನನೆಗುದಿಗೆ ಬಿದ್ದಿತ್ತು.

‘ಕ್ರೀಡಾಂಗಣ ನಿರ್ಮಾಣಕ್ಕೆ ಗುರುತಿಸಿದ ಜಾಗಕ್ಕೆ ಪರ್ಯಾಯವಾಗಿ ಕದ್ರಾ ಗ್ರಾಮದಲ್ಲಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಗುರುತು ಮಾಡಿದ್ದರು. ಆ ಭೂಮಿಯಲ್ಲಿ ವನೀಕರಣ ಕಾರ್ಯಕ್ರಮಕ್ಕೆ ಪರಿಹಾರ ರೂಪದಲ್ಲಿ ಮೊತ್ತವನ್ನು ಅರಣ್ಯ ಇಲಾಖೆ ಕೇಳಿದೆ. ಈ ಹಿಂದೆ ಅನುದಾನದ ಕೊರತೆ ಕಾರಣಕ್ಕೆ ಪ್ರಸ್ತಾವ ತಿರಸ್ಕೃತಗೊಂಡಿತ್ತು. ಈಗ ಕೇಂದ್ರ ಕಚೇರಿಯಿಂದ ಜಾಗ ಹಸ್ತಾಂತರಕ್ಕೆ ಪಡೆಯುವ ಪುನರ್ ಪ್ರಸ್ತಾವ ಸಲ್ಲಿಸಲು ಸೂಚನೆ ಬಂದಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರಣ್ಯ ಭೂಮಿಯನ್ನು ಸರ್ಕಾರಿ ಯೋಜನೆ ಉದ್ದೇಶಕ್ಕೆ ಬಳಸಲು ಅನುಮತಿ ಪಡೆಯುವ ಸಲುವಾಗಿ ‘ಪರಿವೇಶ್’ ತಂತ್ರಾಂಶದಲ್ಲಿ ದಾಖಲೆಗಳನ್ನು ಸಲ್ಲಿಸಿ, ಅನುಮತಿ ಪಡೆದುಕೊಳ್ಳಬೇಕಿದೆ. ಈ ಪ್ರಕ್ರಿಯೆ ನಡೆಸಲು ಖಾಸಗಿ ಏಜೆನ್ಸಿಗೆ ಹೊಣೆ ನೀಡಲು ಒಪ್ಪಿಗೆ ಕೇಳಲಾಗಿದೆ. ಅನುಮತಿ ಸಿಕ್ಕ ಬಳಿಕ ಅನುಮತಿ ಪಡೆಯಲು ಬೇಕಾದ ಪ್ರಕ್ರಿಯೆಗಳು ನಡೆಯಲಿವೆ. ಆ ಬಳಿಕ ಕೇಂದ್ರ ಕಚೇರಿಗೆ ಜಾಗ ಹಸ್ತಾಂತರಕ್ಕೆ ಪಡೆಯುವ ಪ್ರಸ್ತಾವಗಳನ್ನು ಸಲ್ಲಿಸಲಾಗುತ್ತದೆ’ ಎಂದರು.

‘ಅಥ್ಲೆಟಿಕ್ಸ್ ಸ್ಪರ್ಧೆಗಳ ಆಯೋಜನೆ, ಕ್ರೀಡಾಪಟುಗಳ ತರಬೇತಿಗೆ ಸುಸಜ್ಜಿತ ಕ್ರೀಡಾಂಗಣ ಇಲ್ಲ. ಸಿಂಥೆಟಿಕ್ ಟ್ರ್ಯಾಕ್ ಒಳಗೊಂಡಿರುವ ಒಂದೂ ಮೈದಾನ ಇಲ್ಲೆಯಲ್ಲಿಲ್ಲ. ಇದರಿಂದ ಕ್ರೀಡಾಪಟುಗಳ ತರಬೇತಿಗೆ ಹಿನ್ನಡೆಯಾಗಿದೆ. ಜಿಲ್ಲಾಕೇಂದ್ರವಾದರೂ ಸುಸಜ್ಜಿತ ಕ್ರೀಡಾಂಗಣ ಇಲ್ಲದ ಕಾರಣಕ್ಕೆ 5 ವರ್ಷಗಳ ಹಿಂದೆ ಗುರುತಿಸಿದ್ದ ಜಾಗದಲ್ಲೇ ಕ್ರೀಡಾಂಗಣ ನಿರ್ಮಿಸಬೇಕು ಎಂದು ಅಸೋಸಿಯೇಶನ್ನಿಂದ ಈಚೆಗೆ ಯುವ ಸಬಲೀಕರಣ ಇಲಾಖೆಯ ಕೇಂದ್ರ ಕಚೇರಿಗೆ ಒತ್ತಾಯಿಸಿದ್ದೆವು’ ಎಂದು ಅಥ್ಲೆಟಿಕ್ಸ್ ಅಸೋಸಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ ನಾಯ್ಕ ಹೇಳಿದರು.

ಅಥ್ಲೆಟಿಕ್ಸ್ಗೆ ಯೋಗ್ಯವಲ್ಲದ ಮೈದಾನ

ಮಾಲಾದೇವಿ ಮೈದಾನದಲ್ಲಿ ಅಥ್ಲೆಟಿಕ್ಸ್ ಚಟುವಟಿಕೆಗಿಂತ ಕ್ರಿಕೆಟ್ ಪಂದ್ಯಾವಳಿ, ಫುಟ್ಬಾಲ್ ಪಂದ್ಯಗಳ ಆಯೋಜನೆ ಹೆಚ್ಚಿದೆ. ಅಲ್ಲದೇ ಮೈದಾನದಲ್ಲಿ ಚಾಲನೆ ತರಬೇತಿಗೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದೆ ಎಂಬುದು ಜನರ ದೂರು.

‘ಜಿಲ್ಲಾ ಕ್ರೀಡಾಂಗಣದಲ್ಲಿ 400 ಮೀಟರ್ ಓಟದ ಟ್ರ್ಯಾಕ್ ನಿರ್ಮಿಸಬೇಕಾಗುತ್ತದೆ. ಆದರೆ, ಈಗಿರುವ ರಂಗಮಂದಿರ ತೆರವುಗೊಳಿಸಿದರೂ ಮಾಲಾದೇವಿ ಮೈದಾನದಲ್ಲಿ ಅಷ್ಟು ಉದ್ದದ ಟ್ರ್ಯಾಕ್ ನಿರ್ಮಿಸಲು ಸಾಧ್ಯವಾಗದು. ನಗರ ಮಧ್ಯದಲ್ಲಿರುವ ಮೈದಾನದಲ್ಲಿ ಉಳಿದ ಕ್ರೀಡಾ ಚಟುವಟಿಕೆ, ಸಮೀಪದಲ್ಲಿ ದೇವಸ್ಥಾನವೂ ಇರುವುದರಿಂದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ಶಿರವಾಡದಲ್ಲಿ ಕ್ರೀಡಾಂಗಣಕ್ಕೆ ಜಾಗ ಪಡೆಯುವುದು ಸೂಕ್ತ’ ಎಂದು ಅಥ್ಲೆಟಿಕ್ಸ್ ಅಸೋಸಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ ನಾಯ್ಕ ಹೇಳಿದರು.

ಶಿರವಾಡದಲ್ಲಿನ ಜಾಗ ಕ್ರೀಡಾಂಗಣಕ್ಕೆ ಸೂಕ್ತವಿದೆ ಎಂಬ ಕಾರಣಕ್ಕೆ ಕೇಂದ್ರ ಕಚೇರಿಯಿಂದ ಜಾಗ ಹಸ್ತಾಂತರಕ್ಕೆ ಬೇಕಾದ ಪ್ರಕ್ರಿಯೆ ಕೈಗೊಳ್ಳುವ ಪ್ರಸ್ತಾವ ಸಲ್ಲಿಸಲು ಸೂಚನೆ ಬಂದಿದೆ
ರವಿ ನಾಯ್ಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.