ಕಾರವಾರ: ಹಲವು ಗ್ರಾಮಗಳಿಗೆ ಒಂದೆಡೆಯಿಂದ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಿಲ್ಲೆಯ 6 ಕಡೆಗಳಲ್ಲಿ ಜಾರಿಯಲ್ಲಿದೆ. ಬೇಸಿಗೆಯ ಆರಂಭದಲ್ಲೇ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ದೂರುಗಳಿವೆ.

ಕಾರವಾರ ತಾಲ್ಲೂಕಿನ ಕೆರವಡಿ, ಗೋಟೆಗಾಳಿ, ಶಿರಸಿ ತಾಲ್ಲೂಕಿ ಬನವಾಸಿ ಮತ್ತು ಬದನಗೋಡ, ಮುಂಡಗೋಡ ತಾಲ್ಲೂಕಿನ ಮಳಗಿ ಹಾಗೂ ಕುಮಟಾ ತಾಲ್ಲೂಕಿನ ಮಾದನಗೇರಿಯಲ್ಲಿ ಯೋಜನೆ ಜಾರಿಯಲ್ಲಿದೆ. 8 ಕಡೆಗಳಲ್ಲಿ ಯೋಜನೆಯ ಕಾಮಗಾರಿ ವರ್ಷಗಳಿಂದಲೂ ಪ್ರಗತಿಯಲ್ಲಿದೆ.

‘ಗೋಟೆಗಾಳಿ ಮತ್ತು ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕಾಳಿ ನದಿ ನೀರು ಅವಲಂಬಿಸಿವೆ. ಬೇಸಿಗೆ ಆರಂಭದಲ್ಲೇ ಕದ್ರಾವರೆಗೂ ಉಪ್ಪು ನೀರು ನುಗ್ಗುವುದರಿಂದ ಎರಡೂ ಯೋಜನೆಗಳಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆ ಕಷ್ಟವಾಗುತ್ತಿದೆ. ಗ್ರಾಮಗಳಿಗೆ ಈಗಲೇ ಪ್ರತಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮೇ ವೇಳೆಗೆ ಸಮಸ್ಯೆ ಗಂಭೀರವಾಗಬಹುದು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸೂರಜ ದೇಸಾಯಿ.

‘ಉಪ್ಪು ನೀರಿನ ಸಮಸ್ಯೆ ಇದ್ದರೂ ಸಮುದ್ರ ಇಳಿತದ ಸಮಯ ಗಮನಿಸಿ ನದಿಯಿಂದ ನೀರನ್ನು ಪಂಪ್ ಮಾಡಲಾಗುತ್ತದೆ. ನೀರು ಶುದ್ಧೀಕರಿಸಿ ಬಿಡಲಾಗುತ್ತದೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು.

ಶಿರಸಿ ತಾಲ್ಲೂಕಿನ ದಾಸನಕೊಪ್ಪದಲ್ಲಿ ರಾಜೀವಗಾಂಧಿ ಸಬ್ಮಿಷನ್ ಯೋಜನೆಯಡಿ ₹3.45 ಕೋಟಿ ವೆಚ್ಚದಲ್ಲಿ ಸುಮಾರು 14 ಸಾವಿರ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 2014ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿತ್ತು. ಆದರೆ ಉದ್ದೇಶ ಪೂರ್ಣ ಈಡೇರಿಲ್ಲ ಎಂಬ ದೂರು ಜನರದ್ದು.

‘ಧರ್ಮಾ ಜಲಾಶಯದಿಂದ ಪ್ರತಿದಿನ 5.8 ಲಕ್ಷ ಲೀಟರ್ ನೀರನ್ನು ಎತ್ತಿ, ಪೂರೈಕೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು. ಆದರೆ, ಈಚಿನ ವರ್ಷದಲ್ಲಿ ಜನವರಿ ಆರಂಭದೊಂದಿಗೆ ನೀರಿನ ಕೊರತೆ ಎದುರಾಗುತ್ತಿದೆ. ದಾಸನಕೊಪ್ಪದ ಜನರಿಗೆ ಮಾತ್ರ ನಿತ್ಯ ನೀರು ಪೂರೈಕೆ ಆಗುತ್ತಿದೆ. ಬೆಳ್ಳನಕೇರಿ, ಕುಪ್ಪಗಡ್ಡೆ, ದನಗನಹಳ್ಳಿ ಭಾಗದ ಜನರು ಮರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ’ ಎನ್ನುತ್ತಾರೆ ಸ್ಥಳೀಯ ಮಂಜುನಾಥ ಗೌಡ.

ಮುಂಡಗೋಡ ತಾಲ್ಲೂಕಿನ ಮಳಗಿ, ಪಾಳಾ, ಕೋಡಂಬಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಕುಡಿಯುವ ನೀರಿಗೆ ಜನರ ಪರದಾಟ ಕೆಲವು ಗ್ರಾಮಗಳಲ್ಲಿ ಇನ್ನೂ ಮುಂದುವರಿದಿದೆ. ಬಾಚಣಕಿ ಜಲಾಶಯದಿಂದ ಕೊಪ್ಪ ಹಾಗೂ ಇಂದೂರ ಗ್ರಾಮಗಳಿಗೆ ಯೋಜನೆಗೆ ಚಾಲನೆ ನೀಡಿ, ಮೂರು ವರ್ಷಗಳು ಕಳೆದರೂ, ಕಾಮಗಾರಿ ಕುಂಠಿತವಾಗಿದೆ ಎಂಬ ಆರೋಪವಿದೆ. ಕೋಡಂಬಿ, ಹಳ್ಳದಮನೆ, ಪಾಳಾ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪೂರ್ಣವಾಗಿ ಬಗೆಹರಿದಿಲ್ಲ.

‘ವಿದ್ಯುತ್ ಸಮಸ್ಯೆ, ಪೈಪ್ಲೈನ್ ಸೋರಿಕೆ ಇನ್ನಿತರ ಸಮಸ್ಯೆಗಳಾದಾಗ ಮಾತ್ರ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗುತ್ತದೆ. ಉಳಿದ ಸಮಯದಲ್ಲಿ ನಿರಂತರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರಾಜೇಶ್ವರಿ ಕದಂ ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಕುಂದರಗಿ, ಹಿತ್ಲಳ್ಳಿ, ಕಂಪ್ಲಿ , ಉಮ್ಮಚಗಿ ಹಾಗೂ ಹಾಸಣಗಿ ಗ್ರಾಮ ಪಂಚಾಯಿತಿಯ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ವಿಸ್ತ್ರತ ಯೋಜನಾ ವರದಿ ಸಲ್ಲಿಸಲಾಗಿದ್ದು ಸರ್ವೇ ಕೆಲಸ ಮುಗಿದಿದೆ.

ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಗಂಗಾವಳಿ ನದಿಯಿಂದ ₹34 ಕೋಟಿ ವೆಚ್ಚದ ವಾಸರ ಕುದ್ರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. 44 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿ ಮೂಲಕ ಗಂಗಾವಳಿ ನದಿಯಿಂದ ವಾಸರ ಕುದ್ರಿಗೆ, ಬೆಳಸೆ ಸೇರಿ 23 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಶಿರಗುಂಜಿ ಗ್ರಾಮದಲ್ಲಿ ನಿರ್ಮಾಣವಾಗಬೇಕಿದ್ದ ಶುದ್ಧೀಕರಣ ಘಟಕಕ್ಕೆ ಸೂಕ್ತ ಸ್ಥಳವೇ ಸಿಕ್ಕಿಲ್ಲ.

ಹೊನ್ನಾವರ ಶರಾವತಿನದಿ ಕುಡಿಯುವ ನೀರಿನ ಯೋಜನೆ ಜಾರಿಯ ನಂತರದಲ್ಲಿ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಇನ್ನೂ ಮುಗಿದಿಲ್ಲ.

‘ದಾಂಡೇಲಿ ತಾಲ್ಲೂಕಿನ ಅಂಬೇವಾಡಿ, ವಿಟ್ನಾಳ, ಗೌವಟನ್ ,ನವ ಗ್ರಾಮ,ಹಾಗೂ ಕೋಗಿಲಬನ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದ್ದು ದಿನ ಬಿಟ್ಟು ದಿನ ನೀರು ಪೂರೈಕೆ ಮಾಡುತ್ತಿದ್ದು, ನೀರು ಸಂಗ್ರಹಕ್ಕೆ ಟ್ಯಾಂಕ್ ಕೊರತೆ ಇದ್ದು ಇದಕ್ಕಾಗಿ ಶಾಸಕರಿಗೆ ಪತ್ರ ಬರೆಯಲಾಗಿದೆ’ ಎಂದು ಅಂಬೆವಾಡಿಯ ಗ್ರಾಮ ಪಂಚಾಯಿತಿ ಪಿಡಿಓ ಸಂತೋಷ್ ಹೆಳವರ ಹೇಳಿದರು.

‘ನಿರಂತರ ನೀರು ಪೂರೈಕೆ ಮಾಡಬೇಕು ಎನ್ನುವುದು ಗ್ರಾಮ ನಿವಾಸಗಳ ಬೇಡಿಕೆಯಾಗಿದ್ದು, ಮಳೆಗಾಲದ ಕಾಳಿ ನದಿಯ ಕೆಸರು ಮಿಶ್ರಿತ ನೀರು ಪೂರೈಕೆ ಮಾಡುತ್ತಾರೆ. ಇದ್ದಕ್ಕಾಗಿ ಶುದ್ದಿಕರಣ ಘಟಕ ಬೇಕು’ ಎನ್ನುತ್ತಾರೆ ಗೌವಟಾನ ನಿವಾಸಿ ಬಸವರಾಜ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಅರ್ಧಕ್ಕೆ ನಿಂತ ಕಾಮಗಾರಿ

ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆ ಹಡೀನ, ಬೆಳ್ಕೆ, ಹೆಬ್ಳೆ, ಜಾಲಿ, ಮಾವಿನಕರ್ವೆ, ಶಿರಾಲಿ, ಬೈಲೂರು, ಮುಟ್ಟಳ್ಳಿ ಮಾವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಕಾಡುತ್ತದೆ. ಜನರು ಶುದ್ದ ಕುಡಿಯುವ ನೀರಿಗಾಗಿ ಕಿಲೋಮೀಟರ್ ಅಲೆಯಬೇಕಾದ ಸ್ಥಿತಿ ಇದೆ. ಕೇಂದ್ರ ಜಲಮೀಷನ್ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನೀರಿನ ಸಂಗ್ರಹ ಟ್ಯಾಂಕ್ ನಿರ್ಮಿಸಿ ಮನೆಮನೆಗಳಿಗೆ ಪೈಪಲೈನ್ ಸಂಪರ್ಕ ಮಾಡಲಾಗಿದೆ. ಆದರೆ ಬೇಸಿಗೆಯಲ್ಲಿ ಕೊಳವೆಬಾವಿಯಲ್ಲಿ ನೀರು ಬಾರದ ಕಾರಣ ನೀರಿನ ಸಮಸ್ಯೆ ಕಾಡುತ್ತಿದೆ. ಶರಾವತಿ ನದಿಯ ನೀರನ್ನು ಪೈಪಲೈನ್ ಮೂಲಕ ಭಟ್ಕಳಕ್ಕೆ ತರುವ ಯೋಜನೆ ತಾಂತ್ರಿಕ ಕಾರಣದಿಂದ ಅರ್ಧಕ್ಕೆ ನಿಂತಿದೆ.

ವಿದ್ಯುತ್ ಪೂರೈಕೆ ವ್ಯತ್ಯಯ ಅಡ್ಡಿ

ಗೋಕರ್ಣ ಭಾಗದ ಒಟ್ಟೂ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯದ ಮಟ್ಟಿಗೆ ನೀರಿನ ಕೊರತೆ ಇಲ್ಲದಿದ್ದರೂ ನಿಯಮಿತ ಸರಬರಾಜಿನಲ್ಲಿ ತೊಡಕುಂಟಾಗಿದೆ. ವಿದ್ಯುತ್ ಪೂರೈಕೆಯ ವ್ಯತ್ಯಯ ಇದಕ್ಕೆ ಕಾರಣ ಎಂಬುದಾಗಿ ನೀರು ಸರಬರಾಜು ಶುದ್ಧೀಕರಣ ಘಟಕದ ಸಿಬ್ಬಂದಿ ಹೇಳುತ್ತಾರೆ.

‘ಮಾದನಗೇರಿಯಲ್ಲಿನ ಜ್ಯಾಕ್ವೆಲ್ ಮತ್ತು ಸಂಗ್ರಹಣಾ ಘಟಕದಿಂದ ನಿರಂತರ ನಡೆಯುವ ನೀರು ಸರಬರಾಜಿಗೆ ವಿದ್ಯುತ್ ವ್ಯವಸ್ಥೆಯೇ ಪ್ರಮುಖ ಆಧಾರವಾಗಿದೆ. ಒಂದೇ ಒಂದು ಗಂಟೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ತೋರಿದರೂ ಪೂರೈಕೆಯಲ್ಲಿ ನಾಲ್ಕರಿಂದ ಐದು ತಾಸು ವಿಳಂಬ ತಲೆದೋರುತ್ತದೆ’ ಎಂದು ಅವರು ಹೇಳುತ್ತಾರೆ.

‘ವಿದ್ಯುತ್ ಅಭಾವ ನಿರಂತರವಾದ ನೀರು ಸರಬರಾಜಿಗೆ ಅಡೆತಡೆಯಾಗಿದೆ. ಹೆಸ್ಕಾಂ ಇಇ ಅವರಿಗೆ ಪತ್ರ ಬರೆಯಲಾಗಿದೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮೀನಾಕ್ಷಿ.

ಜಿಲ್ಲೆಯ ಎರಡು ಕಡೆಗಳಲ್ಲಿ ಹೊಸದಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ
ಆರ್.ಸತ್ಯಪ್ಪ ಗ್ರಾಮೀಣ ಕುಡಿಯುವ ನೀರು ವಿಭಾಗದ ಇಇ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಮೂರರಿಂದ ನಾಲ್ಕು ದಿನಕ್ಕೊಮ್ಮೆ ಸಣ್ಣದಾಗಿ ಬರುವ ನೀರೇ, ಜನರಿಗೆ ಆಸರೆಯಾಗಿದೆ
ಮಂಜುನಾಥ ವಾಲ್ಮೀಕಿ, ಮಳಗಿ ಸಾಮಾಜಿಕ ಕಾರ್ಯಕರ್ತ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆಮೆಗತಿಯಲ್ಲಿ ನಡೆದಿದ್ದರಿಂದ ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿನ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ
ಹಮ್ಮಣ್ಣ ನಾಯಕ, ಶೆಟಗೇರಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.