ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಅವಘಡದ ವೇಳೆ ಗಂಗಾವಳಿ ನದಿಯಲ್ಲಿ ಶೇಖರಣೆಯಾಗಿದ್ದ ಹೂಳಿನ ರಾಶಿ ತೆರವುಗೊಳಿಸಲು ಎರಡು ವರ್ಷದ ಬಳಿಕ ಪ್ರಕ್ರಿಯೆ ಆರಂಭಗೊಂಡಿದೆ.

ನದಿಯಲ್ಲಿ ಸಂಗ್ರಹಗೊಂಡಿರುವ ಅಂದಾಜು 1.68 ಲಕ್ಷ ಘನ ಮೀಟರ್ ಹೂಳು ತೆರವುಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ, ಮಂಗಳವಾರ ನದಿಯಲ್ಲಿ ದೋಣಿ ಮೂಲಕ ಸಾಗಿದ ಅಧಿಕಾರಿಗಳು ಬಾಥಿಮೆಟ್ರಿಕ್ ಸಮೀಕ್ಷೆ ನಡೆಸಿದರು.

ಕಳೆದ ವರ್ಷವೂ ಸಮೀಕ್ಷೆ ನಡೆಸಿದ್ದ ಬಂದರು ಇಲಾಖೆ 1.68 ಲಕ್ಷ ಘನ ಮೀಟರ್ ಹೂಳು ತೆರವಿಗೆ ₹4.34 ಕೋಟಿ ಅಂದಾಜು ಪಟ್ಟಿ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಆಗಿರಲಿಲ್ಲ. ₹2 ಕೋಟಿ ಬಿಡುಗಡೆಗೆ ಸರ್ಕಾರ ಸಮ್ಮತಿಸಿದ್ದರಿಂದ 68 ಸಾವಿರ ಘನ ಮೀಟರ್ ಹೂಳು ತೆರವಿಗೆ ನಿರ್ಧರಿಸಿ, ಟೆಂಡರ್ ಕರೆಯಲಾಗಿತ್ತು. ಆದರೆ, ರಾಜ್ಯ ಸರ್ಕಾರ ₹4.34 ಕೋಟಿ ವೆಚ್ಚದಲ್ಲಿ ಸಂಪೂರ್ಣ ಹೂಳು ತೆರವುಗೊಳಿಸಲು ಆದೇಶಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-26-950337180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.