ಕಾರವಾರ: ‘ಸಮಾಜದಲ್ಲಿ ಲಿಂಗ ತಾರತಮ್ಯ ಸಂಪೂರ್ಣ ತೊಡೆದು ಹಾಕುವ ಅಗತ್ಯವಿದೆ. ಮಹಿಳೆಯರಿಗೆ ಸಿಗಬೇಕಾದ ಸಮಾನ ಅವಕಾಶ ಕಸಿಯುವುದರ ವಿರುದ್ಧ ಹೋರಾಟ ಬಲಗೊಳ್ಳಬೇಕಿದೆ’ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಡಿ.ಮನೋಜೆ ಹೇಳಿದರು.

ಇಲ್ಲಿನ ಸಿಐಟಿಯು ಕಚೇರಿಯಲ್ಲಿ ಶುಕ್ರವಾರ ಸಿಐಟಿಯು, ಕೆಪಿಆರ್ಎಸ್ ರೈತ ಸಂಘಟನೆ, ಜನವಾದಿ ಮಹಿಳಾ ಸಂಘಟನೆ ಹಾಗೂ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರನ್ನು ಮೀರಿದ ಸಾಧನೆ ಮಾಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜ ಎಂಬ ಕಲ್ಪನೆ ಸಂಪೂರ್ಣ ತೊಡೆದು ಹಾಕಲು ಸಮಾಜ ಒಗ್ಗಟ್ಟಾಗಬೇಕಿದೆ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಸೇವಾ ನಿವೃತ್ತರಾದ ಸಂಘಟನೆಯ ಪದಾಧಿಕಾರಿಗಳಾದ ಮೋಹಿನಿ ನಮ್ಸೇಕರ್, ತಾರಾ ನಾಯ್ಕ, ಗೀತಾ ರಾಯ್ಕರ್, ಲತಾ ಕಳಸ್, ಮಂಗಲಾ ದೇಸಾಯಿ, ಗಂಗಾ ಗೌಡ, ಶೈಲಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಎನ್.ಜಿ.ನಾಯ್ಕ, ಶ್ಯಾಮನಾಥ ನಾಯ್ಕ, ವೀರೇಶ ರಾಠೋಡ, ಮಂಜುಳಾ ಕಾಣಕೋಣಕರ್, ಶೇಕಪ್ಪ ಪಿ., ಶಶಿಧರ್, ಯಲ್ಲಪ್ಪ, ಪ್ರದ್ಯುಮ್ನ, ಕಲ್ಪನಾ ಕೋಳಿ, ಪೂರ್ಣಿಮಾ ನಾಯ್ಕ, ಹಮೀದಾ, ಸರೋಜಾ ಗುನಗ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-20-1096845621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.