ಕಾರವಾರ: ಶಾಲೆಗಳ ಪುನರಾರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಜೊತೆಗೆ ಮಳೆಗಾಲ ಶುರುವಾಗುವ ಲಕ್ಷಣ ಗೋಚರಿಸಿದೆ. ಆದರೆ, ಶಾಲೆಗಳ ಸುರಕ್ಷತೆ ಕುರಿತು ಪರಿಶೀಲನೆ ಮಾತ್ರ ಇನ್ನೂ ಸರಿಯಾಗಿ ನಡೆದಿಲ್ಲ ಎಂಬ ದೂರು ಹೆಚ್ಚಿದೆ.

ಮೇ 29ರಿಂದ ಶಾಲೆ ಆರಂಭಗೊಳ್ಳಲಿದೆ. ಜಿಲ್ಲೆಯ ಹಲವೆಡೆ ಶಾಲೆ ಆವರಣದಲ್ಲಿನ ಅಪಾಯಕಾರಿ ಮರ, ಬಿರುಕು ಬಿಟ್ಟಿರುವ ಗೋಡೆ, ದುರ್ಬಲ ಸ್ಥಿತಿಯಲ್ಲಿನ ಚಾವಣಿ ಸರಿಪಡಿಸುವ ಕೆಲಸ ನಡೆದಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ‘ಶಾಲೆ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಮೇ 26ರ ಒಳಗೆ ವರದಿ ಸಲ್ಲಿಸಲು ಸೂಚಿಸಿದ್ದೇವೆ’ ಎಂಬುದಾಗಿ ಹೇಳುತ್ತಿದ್ದಾರೆ.

‘ಮಳೆಗಾಲಕ್ಕೆ ಮುನ್ನ, ಶಾಲೆ ಆರಂಭಕ್ಕೂ ಮೊದಲು ಕಟ್ಟಡಗಳ ಸುರಕ್ಷತೆ ಪರಿಶೀಲಿಸಿಕೊಂಡು ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಬೇಕಿದೆ. ಆದರೆ, ಕೊನೆ ಕ್ಷಣದಲ್ಲಿ ಪಟ್ಟಿ ಸಿದ್ಧಪಡಿಸುತ್ತಾರೆ. ದುರಸ್ತಿಗೆ ಪ್ರಸ್ತಾವ ಸಲ್ಲಿಸಿ, ಅನುದಾನ ಸಿಗುವ ಹೊತ್ತಿಗೆ ಅರ್ಧ ವರ್ಷವೇ ಮುಗಿಯುತ್ತದೆ’ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿಯೊಂದರ ಸದಸ್ಯ ಸುದರ್ಶನ ನಾಯಕ.

ಜಿಲ್ಲಾ ಕೇಂದ್ರ ಕಾರವಾರದಲ್ಲೇ ಕೆಲ ಶಾಲೆಗಳ ಕೊಠಡಿಗಳು ಬಿರುಕು ಬಿಟ್ಟಿವೆ. ನಗರ ಮಧ್ಯದಲ್ಲಿರುವ ಬಾಯಿ ಕುವರಬಾಯಿ ಶಾಲೆ ಆವರಣ ತಗ್ಗಿನಿಂದ ಕೂಡಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವ ಅಪಾಯವಿದೆ. ದೇವಬಾಗದಲ್ಲಿನ ಶಾಲೆ ಕೊಠಡಿಗಳು ದುರ್ಬಲ ಸ್ಥಿತಿಯಲ್ಲಿರುವುದಾಗಿ ಸ್ಥಳಿಯರು ಹೇಳುತ್ತಾರೆ.

ಶಿರಸಿ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲ ಸ್ಥಿತಿಯಲ್ಲಿವೆ. ಕೇವಲ ಕೊಠಡಿಯಷ್ಟೇ ಅಲ್ಲದೇ 63 ಶಾಲೆಗಳಲ್ಲಿ ಅಡುಗೆ ಕೋಣೆಗಳು ದುರಸ್ತಿ ಆಗಬೇಕಿದೆ. 42 ಕಡೆ ಹೊಸ ಕೋಣೆಗಳ ಅಗತ್ಯವಿದೆ. 85 ಶಾಲೆಗಳಿಗೆ ಕಾಂಪೌಂಡ್ ಅಗತ್ಯವಿದೆ. ಶಾಲೆ ಗೋದಾಮುಗಳು ಹಲವೆಡೆ ಜೀರ್ಣಗೊಂಡಿವೆ.

ಹಳಿಯಾಳ ತಾಲ್ಲೂಕಿನಲ್ಲಿ ಶಿಥಿಲಾವಸ್ತೆಯಲ್ಲಿರುವ 16 ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಲಾಗಿದೆ. 53 ಕೊಠಡಿಗಳ ಚಿಕ್ಕಪುಟ್ಟ ದುರಸ್ತಿ ಕೈಗೊಳ್ಳಲಾಗುತ್ತಿದೆ. 11 ಶಾಲೆಗಳಿಗೆ ಹೊಂದಿಕೊಂಡ ಅಪಾಯಕಾರಿ ಮರಗಳು, ಮರದ ಟೊಂಗೆಗಳನ್ನು ತೆರುವುಗೊಳಿಸಿ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ತಿಳಿಸಿದರು.

ದಾಂಡೇಲಿ ತಾಲ್ಲೂಕಿನ 3 ಶಾಲೆಗಳ ಕಾಂಪೌಂಡ್ಗೆ ಹೊಂದಿಕೊಂಡಂತೆ ಅಪಾಯಕಾರಿ ಮರಗಳ ತೆರವು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಬಂಗೂರನಗರ ಶಾಲೆ ಸೇರಿದಂತೆ ಎರಡು ಶಾಲಾ ಕಾಂಪೌಂಡ್ ದುರಸ್ತಿ, ತಾಲ್ಲೂಕಿನ 7 ಶಾಲೆಗಳಲ್ಲಿ ಸಣ್ಣ ಪುಟ್ಟ ದುರಸ್ತಿ ಕೆಲಸ ಹಾಗೂ 5 ಶಾಲೆಗಳ ಶೌಚಾಲಯ ದುರಸ್ತಿ, 6 ಶಾಲೆಗಳ ಅಡುಗೆ ಕೊಠಡಿ ದುರಸ್ತಿ 7 ಶಾಲೆಗಳಲ್ಲಿ ಮರ ತೆರವು ಮಾಡಲು ವಿನಂತಿ ಬಂದಿದೆ ಎಂಬುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಬಂಗೂರನಗರ ಶಾಲೆಯ ಕಾಂಪೌಂಡ್ ದುರಸ್ತಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಜುಬೇದಾ ಶೇಕ್ ತಿಳಿಸಿದ್ದಾರೆ.

ಗೋಕರ್ಣ ತಾರಮಕ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಸಜ್ಜಿತ ಕಟ್ಟಡ ಇದ್ದರೂ ವಿದ್ಯಾರ್ಥಿಗಳ ಕೊರತೆ ಇದೆ. ಯಲ್ಲಾಪುರ ತಾಲ್ಲೂಕಿನಲ್ಲಿ ಒಟ್ಟು 21 ಶಾಲೆಗಳು ಮಣ್ಣಿನ ಕಟ್ಟಡ ಹೊಂದಿವೆ. ಹಳೆಯದಾದ 5 ಕಟ್ಟಡಗಳ ತೆರವಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬಿಇಒ ರೇಖಾ ನಾಯಕ ತಿಳಿಸಿದರು.

ಅಂಕೋಲಾ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಶಾಲೆಯ ಆವರಣ ಹಾಗೂ ಕಾಂಪೌಂಡ್ ಎದುರು ಕೆಲವು ಕಡೆ ಗಿಡಗಳು ಬೆಳೆದಿದ್ದು, ಶಾಲೆ ಸಮೀಪದ ಕಾಲುವೆಗಳಲ್ಲಿ ಮಣ್ಣು ತುಂಬಿಕೊಂಡಿವೆ.

ಹೊನ್ನಾವರ ತಾಲ್ಲೂಕಿನ ಬೆಳ್ಳಿಕುರ್ವ ಸೇರಿದಂತೆ ಕೆಲೆವೆಡೆಗಳಲ್ಲಿ ಮಣ್ಣಿನ ಗೋಡೆಗಳಿರುವ ಶಾಲೆಗಳಿವೆ. ಶಾಲೆ ಕಟ್ಟಡಗಳ ಸ್ಥಿತಿ ಗತಿ, ಸಮೀಪ ಧರೆ ಕುಸಿತ, ಮರಗಳು ಬೀಳುವ ಅಪಾಯದ ಸಾಧ್ಯತೆಗಳ ಕುರಿತು ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ವರದಿ ಕೇಳಲಾಗಿದೆ. ಶಾಲೆ ಆರಂಭಕ್ಕೆ ಮೊದಲು ವರದಿ ಪಡೆದು ಅಗತ್ಯ ಕಾಮಗಾರಿಗಳ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಯಶ್ರೀ ನಾಯ್ಕ ತಿಳಿಸಿದ್ದಾರೆ.

ಭಟ್ಕಳ ಪಟ್ಟಣದ ಕೋಟೇಶ್ವರ ಕಾಲೊನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಹೆದ್ದಾರಿ ವಿಸ್ತರಣೆಗೆ ತೆರವು ಮಾಡಲಾಗಿದೆ. ಕಟ್ಟಡ ಇರದ ಕಾರಣ ಸಮೀಪದಲ್ಲಿನ ಸಮುದಾಯ ಭವನದಲ್ಲಿ ಮಕ್ಕಳಿಗೆ ಪಾಠ ಮಾಡಲು ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿನ ತಲಗೋಡ 1 ಗ್ರಾಮದಲ್ಲಿ ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡಿದೆ. ಅನೇಕ ಕಡೆ ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ಉತ್ತಮ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ರವಿ ಸೂರಿ, ಎಂ.ಜಿ.ನಾಯ್ಕ, ಪ್ರವೀಣಕುಮಾರ ಸುಲಾಖೆ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-20-276216446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.