ಕಾರವಾರ: ಮಳೆಗಾಲ ಸಮೀಪಿಸಿದ್ದರಿಂದ ಜಂಗಲ್ ಕಟಿಂಗ್ ಹೆಸರಿನಲ್ಲಿ ವಿದ್ಯುತ್ ತಂತಿ ಸಮೀಪದ ಮರದ ಟೊಂಗೆಗಳನ್ನು ಕತ್ತರಿಸುವ ಹೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಕಂಬಗಳ ಮೇಲೆ ಹಬ್ಬಿನಿಂತ ಬಳ್ಳಿ, ಪರಿವರ್ತಕಗಳನ್ನು (ಟ್ರಾನ್ಸ್ಫಾರ್ಮರ್) ಆವರಿಸಿಕೊಂಡಿರುವ ಗಿಡಗಂಟಿಗಳು ಕಾಣಿಸುತ್ತಿಲ್ಲವೇ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಡುತ್ತಿದ್ದಾರೆ.

ಜನರಿಂದ ಹೀಗೆ ಪ್ರಶ್ನೆ ಎದುರಾಗಲು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಾಡಿನ ಬಳ್ಳಿಗಳು ಹಬ್ಬಿಕೊಂಡಿರುವ ವಿದ್ಯುತ್ ಕಂಬಗಳು ಕಾರಣವಾಗಿದೆ. ನಗರ ಪ್ರದೇಶಗಳಲ್ಲಿನ ವಿದ್ಯುತ್ ಪರಿವರ್ತಕಗಳ ಬುಡದಲ್ಲಿ ಬೆಳೆದ ಗಿಡಗಂಟಿಗಳನ್ನೇ ತೆರವುಗೊಳಿಸಲು ನಿರ್ಲಕ್ಷಿಸುತ್ತಿರುವ ಹೆಸ್ಕಾಂ, ಹಳ್ಳಿಗಳಲ್ಲಿ ಇನ್ನೆಷ್ಟು ಅಲಕ್ಷಿಸುತ್ತಿರಬಹುದು ಎಂಬುದು ಜನರ ದೂರು.

ಕಾರವಾರ ನಗರದ ಕೋರ್ಟ್ ರಸ್ತೆಯಲ್ಲೇ ಜನನಿಬಿಡ ಸ್ಥಳದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಪರಿವರ್ತಕವಿದೆ. ಕಳೆದ ವರ್ಷ ಮರ ಉರುಳಿ ಪರಿವರ್ತಕಕ್ಕೆ ಹಾನಿಯಾಗಿತ್ತು. ವಿದ್ಯುತ್ ಶಾಕ್ ತಗುಲಿ ಆಕಳೊಂದು ಮೃತಪಟ್ಟಿತ್ತು. ಆದರೂ, ಈವರೆಗೆ ಪರಿವರ್ತಕ ಸ್ಥಳಾಂತರಿಸಿಲ್ಲ. ಕನಿಷ್ಠ ಪಕ್ಷ ಸುರಕ್ಷತಾ ಕವಚ ಅಳವಡಿಸುವ ಕೆಲಸವನ್ನೂ ಮಾಡಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಶಿರಸಿ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿದ್ಯುತ್ ಮಾರ್ಗ ಸ್ವಚ್ಛಗೊಳಿಸದ ಕಾರಣ ಬೀಳುತ್ತಿರುವ ಮಳೆಗೆ ವಿದ್ಯುತ್ ಕೈಕೊಡುತ್ತಿದೆ. ಗ್ರಿಡ್ ಮೂಲಕ ಹೊರಟ ಪ್ರಮುಖ ಮಾರ್ಗದಲ್ಲಿ ಅಲ್ಲಲ್ಲಿ ಗ್ಯಾಂಗ್ಮನ್ ಬಳಸಿ ತಂತಿಗೆ ತಾಗುವ ಮರಗಳ ಟೊಂಗೆ ತೆರವು ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಗಿರುವ ತಂತಿ ಮಾರ್ಗ ಅವ್ಯವಸ್ಥೆಯಿಂದ ಕೂಡಿದೆ ಎಂಬುದು ಜನರ ದೂರು.

‘ಗಣೇಶನಗರ ಭಾಗದ ಕೆಲವೆಡೆ ವಿದ್ಯುತ್ ಕಂಬಗಳು ಬಳ್ಳಿ ಹಬ್ಬಿಸಲು ಬಳಸಿದಂತೆ ಕಾಣುತ್ತದೆ. ಮಳೆಗಾಲ ಪೂರ್ವ ಕಾಮಗಾರಿ ಕೈಗೊಂಡರೆ ಇಂಥ ಕೆಟ್ಟ ಸ್ಥಿತಿ ಬರುತ್ತಿರಲಿಲ್ಲ’ ಎನ್ನುತ್ತಾರೆ ಗಣೇಶನಗರದ ವಿನಾಯಕ ನಾಯ್ಕ.

ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿಯೇ ಕೆಲವೆಡೆ, ವಿದ್ಯುತ್ ತಂತಿಗಳು ಹಾದು ಹೋದ ಸ್ಥಳಗಳಲ್ಲಿ, ತಂತಿಗೆ ತಾಗುವಂತೆ ಮರಗಳ ಟೊಂಗೆಗಳು ತಾಗಿಕೊಂಡಿವೆ.

‘ಪಟ್ಟಣದ ಮುಖ್ಯ ರಸ್ತೆಗಳ ಪಕ್ಕದಲ್ಲಿಯೇ ಕೆಲವೆಡೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿದ್ದಾರೆ. ಸುತ್ತಲೂ ತಂತಿ ಬೇಲಿ ಬಾಕ್ಸ್ ಮಾಡಿ, ಜನಜಾನುವಾರುಗಳು ಅದರ ಸನಿಹ ಹೋಗದಂತೆ ಎಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಆದರೆ, ವಿದ್ಯುತ್ ಪರಿವರ್ತಕದ ಕಂಬಗಳಿಗೆ ಎಲೆಬಳ್ಳಿ, ಗಿಡಗಳು ಬೆಳೆದಿರುವ ದೃಶ್ಯ ಸಾಮಾನ್ಯವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ ಉಪ್ಪಾರ ದೂರಿದರು.

ಅಂಕೋಲಾ ತಾಲ್ಲೂಕಿನ ಬಹುತೇಕ ಕಡೆ ವಿದ್ಯುತ್ ಪರಿವರ್ತಕಗಳ ಸುತ್ತ ಗಿಡಬಳ್ಳಿಗಳು ಬೆಳೆದಿವೆ. ಗೋಕರ್ಣದ ಜನವಸತಿ ಪ್ರದೇಶದಲ್ಲಿರುವ ಬಹುತೇಕ ಪರಿವರ್ತಕಗಳಿಗೆ ಸುತ್ತ ಕಲ್ಲಿನ ಕಟ್ಟೆ ಕಟ್ಟಿ ಸುರಕ್ಷಿತ ರಕ್ಷಾಕವಚ ಅಳವಡಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಪರಿವರ್ತಕಗಳು ಅಳವಡಿಸಿದ ಸ್ಥಳ ಅಪಾಯದ ಸ್ಥಿತಿಯಲ್ಲಿತ್ತು.

‘ಹೊನ್ನಾವರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಅಂಚೆ ಕಚೇರಿ ಸಮೀಪದ ಪರಿವರ್ತಕ ಬಳ್ಳಿ, ಗಿಡಗಂಟಿಗಳಿಂದ ಆವೃತವಾಗಿದೆ. ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ’ ಎಂದು ಪಟ್ಟಣದ ನಿವಾಸಿ ಉಮೇಶ ಪೈ ವ್ಯಂಗ್ಯವಾಡಿದರು.

‘ಗಿಡ ಗಂಟಿಗಳು ಆವರಿಸಿರುವುದರಿಂದ ಹಾಳಾದ ನಿರ್ದಿಷ್ಟ ಜಾಗ ಹುಡುಕುವುದು ಹರಸಾಹಸವಾಗಿ ಪರಿಣಮಿಸಿದೆ’ ಎಂದು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಹೆಸ್ಕಾಂ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಯಲ್ಲಾಪುರ ಪಟ್ಟಣದ ಜಡ್ಡಿ ರಸ್ತೆಯಲ್ಲಿ ಹಾಗೂ ಹಳೆ ತಹಶೀಲ್ದಾರ್ ಕಾಂಪೌಂಡ್ನಲ್ಲಿರುವ ವಿದ್ಯುತ್ ಕಂಬಕ್ಕೆ ಬಳ್ಳಿ ಹಬ್ಬಿಕೊಂಡಿದೆ. ವಿದ್ಯುತ್ ಕಂಬದ ಸುತ್ತ ಕೇಬಲ್ ಅಳವಡಿಕೆ ಹೆಚ್ಚಿರುವುದರಿಂದ ಕಂಬ ಏರುವುದು ಕಷ್ಟವಾಗುತ್ತಿದೆ ಎಂಬುದಾಗಿ ಹೆಸ್ಕಾಂ ಸಿಬ್ಬಂದಿಯೊಬ್ಬರು ಹೇಳುತ್ತಾರೆ. ಕೆಲವೆಡೆ ಹೊಸ ಕಂಬ ಅಳವಡಿಸಲಾಗಿದ್ದರೂ ಹಳೆಯ ಕಂಬ ಹಾಗೆ ಇದೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಸಂತೋಷಕುಮಾರ ಹಬ್ಬು, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-20-1364624995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.