ಕಾರವಾರ: ಮುಂದಿನ ವರ್ಷ ನಡೆಯಲಿರುವ ಜನಗಣತಿಗೆ ಪೂರ್ವಭಾವಿಯಾಗಿ ನಡೆಸುವ ‘ಮನೆ ಗಣತಿ’ ಪ್ರಕ್ರಿಯೆ ಜಿಲ್ಲೆಯಾದ್ಯಂತ ಗುರುವಾರ ಆರಂಭಗೊಳ್ಳಲಿದೆ. ಮುಂದಿನ ಒಂದು ತಿಂಗಳ ಅವಧಿವರೆಗೆ ಈ ಪ್ರಕ್ರಿಯೆ ನಡೆಯಲಿದೆ.

ಸರ್ಕಾರದಿಂದ ನಿಯೋಜಿಸಲ್ಪಟ್ಟ ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ, ಮನೆಗೆ ಪ್ರತ್ಯೇಕ ಸಂಖ್ಯೆ ನೀಡಲಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಜನಗಣತಿಗೆ ಪೂರಕವಾಗಿ ನಿಗದಿಪಡಿಸಿರುವ 35 ಪ್ರಶ್ನೆಗಳಿಗೆ ಮಾಹಿತಿ ಸಂಗ್ರಹಿಸಲಿದ್ದಾರೆ.

ಹಿಂದಿನ ಜನಗಣತಿ ಅಂಕಿ–ಅಂಶ ಆಧರಿಸಿ ಜಿಲ್ಲೆಯಲ್ಲಿ 3,95,970 ಮನೆಗಳಿವೆ ಎಂದು ಅಂದಾಜಿಸಲಾಗಿದೆ. ಸರಾಸರಿ 150ರಿಂದ 200 ಮನೆಗೆ ಒಂದು ಬ್ಲಾಕ್ನಂತೆ 3,216 ಬ್ಲಾಕ್ಗಳನ್ನು ರಚಿಸಲಾಗಿದೆ. ಮನೆ ಗಣತಿ ಪ್ರಕ್ರಿಯೆ ನಡೆಸಲು ಪ್ರತಿ ಬ್ಲಾಕ್ಗೆ ಒಬ್ಬರಂತೆ ಗಣತಿದಾರರು ಮತ್ತು ಪ್ರತಿ 5ರಿಂದ 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

ಏ.16ರಿಂದ ಆರಂಭಗೊಳ್ಳುವ ಪ್ರಕ್ರಿಯೆಯು ಮೇ 15ರ ವರೆಗೆ ನಡೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರನ್ನು ಗಣತಿದಾರರಾಗಿ ನಿಯೋಜನೆ ಮಾಡಲಾಗಿದೆ.

‘ಮನೆ ಗಣತಿ ಪ್ರಕ್ರಿಯೆಗೆ 3,255 ಗಣತಿದಾರರು ಹಾಗೂ 856 ಮೇಲ್ವಿಚಾರಕರನ್ನು ನೇಮಕಗೊಳಿಸಲಾಗಿದೆ. ಅವರಿಗೆ ಮೂರು ಸುತ್ತುಗಳಲ್ಲಿ ತರಬೇತಿ ನೀಡಲಾಗಿದೆ. ಕೇಂದ್ರ ಸರ್ಕಾರ ರೂಪಿಸಿದ ‘ಎಚ್ಎಲ್ಒ ಆ್ಯಪ್’ ಬಳಸಿ ಮನೆ ಗಣತಿ ಕಾರ್ಯವನ್ನು ಗಣತಿದಾರರು ಮಾಡಲಿದ್ದಾರೆ. ಅದರಲ್ಲಿನ 35 ವಿಧದ ಪ್ರಶ್ನೆಗಳಿಗೆ ಉತ್ತರವನ್ನು ಆ್ಯಪ್ನಲ್ಲಿಯೇ ಭರ್ತಿ ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

‘ಮನೆ ಗಣತಿಗೆ ಪೂರ್ವದಲ್ಲಿ ಏ.1ರಿಂದ 15ರ ವರೆಗೆ ಸಾರ್ವಜನಿಕರು ಮೊಬೈಲ್ ಬಳಸಿ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ 27,228 ಮಂದಿ ಮಾತ್ರ ಸ್ವಯಂ ಗಣತಿ ಮಾಡಿಕೊಂಡಿದ್ದಾರೆ. ಸ್ವಯಂ ಗಣತಿ ಪ್ರಕ್ರಿಯೆಯಿಂದ ಗಣತಿದಾರರು ತ್ವರಿತಗತಿಯಲ್ಲಿ ಮಾಹಿತಿ ಭರ್ತಿಗೆ ಅನುಕೂಲವಾಗಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-20-1453459871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.