ಕಾರವಾರ: ಕಡಲುಕೊರೆತದ ತೀವ್ರತೆ ನಿಯಂತ್ರಿಸುವ ಜೊತೆಗೆ ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುವ ಕಾಂಡ್ಲಾ ವನ ಜಿಲ್ಲೆಯ ಅಳಿವೆ ಪ್ರದೇಶದಲ್ಲಿ ವಿಸ್ತಾರಗೊಳ್ಳುತ್ತಿದೆ.

ಇಲ್ಲಿನ ಕಾಳಿನದಿ ಅಳಿವೆ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಾಂಡ್ಲಾ ವನ 140 ಹೆಕ್ಟೇರ್ನಷ್ಟು ವೃದ್ಧಿಗೊಂಡಿದೆ. ಜಿಲ್ಲೆಯ ಕರಾವಳಿ ವ್ಯಾಪ್ತಿಯಲ್ಲಿ 9 ಚದರ ಕಿ.ಮೀನಷ್ಟು ಪ್ರದೇಶದಲ್ಲಿ ಕಾಂಡ್ಲಾ ವ್ಯಾಪಿಸಿದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.

2023ರಲ್ಲಿ 8.96 ಚ.ಕಿ.ಮೀ ವ್ಯಾಪ್ತಿಯಲ್ಲಿ ಕಾಂಡ್ಲಾ ವನ ವೃದ್ಧಿಸಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಭಾರತೀಯ ಅರಣ್ಯ ವರದಿ (ಐಎಸ್ಎಫ್) ಉಲ್ಲೇಖಿಸಿತ್ತು. 2021ರಲ್ಲಿ ಜಿಲ್ಲೆಯಲ್ಲಿ ಈ ಪ್ರಮಾಣವು 8.75 ಚ.ಕಿ.ಮೀ ಪ್ರದೇಶದಷ್ಟಿತ್ತು ಎಂದೂ ತಿಳಿಸಿತ್ತು.

‘ಕಾಂಡ್ಲಾ ಸಸಿಗಳು ಸ್ವಾಭಾವಿಕವಾಗಿ ಹೆಚ್ಚುತ್ತ ಹೋಗುತ್ತವೆ. ಕೆಲವೊಂದು ಸಸಿಗಳು ಸ್ವಾಭಾವಿಕವಾಗಿ ಬೆಳೆದರೆ, ಕೆಲವೊಂದನ್ನು ಸಸಿಗಳ ನಾಟಿ ಮಾಡುವ ಮೂಲಕ ಬೆಳೆಸಲಾಗುತ್ತಿದೆ. ಅರಣ್ಯ ಇಲಾಖೆಯು ಕಾರವಾರದಲ್ಲಿ ಕೋಸ್ಟಲ್ ಮರೈನ್ ವಿಭಾಗ ಪ್ರತ್ಯೇಕವಾಗಿ ರಚಿಸಿದ ನಂತರ ಕಳೆದ 3 ವರ್ಷಗಳಲ್ಲಿ 140 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ಸಸಿಗಳನ್ನು ಬೆಳೆಸಲಾಗಿದೆ’ ಎಂದು ಎಸಿಎಫ್ ಕೆ.ಡಿ.ನಾಯ್ಕ ತಿಳಿಸಿದರು.

‘ದೇವಬಾಗ, ಕಾಳಿಮಾತಾ ದ್ವೀಪ, ಕಡವಾಡದ ರೈಲ್ವೆ ಸೇತುವೆ ಸಮೀಪ, ಕಿನ್ನರ ಸೇರಿದಂತೆ ಕಾಳಿ ಅಳಿವೆ ಪ್ರದೇಶದಲ್ಲಿ ಪ್ರಸಕ್ತ ವರ್ಷ 100 ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಂಡ್ಲಾ ಸಸಿಗಳನ್ನು ನೆಡಲಾಗಿದೆ. ಪ್ರತಿ ಹೆಕ್ಟೇರ್ಗೆ 1 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದೆ. ವಿಶ್ವಬ್ಯಾಂಕ್ ನೆರವಿನ ಕೆ–ಶೋರ್ ಯೋಜನೆಯ ಭಾಗವಾಗಿಯೂ ಕಾಂಡ್ಲಾ ವನಗಳ ಅಭಿವೃದ್ಧಿ ನಡೆದಿದೆ. ಒಟ್ಟು 8 ವಿಧದ ಕಾಂಡ್ಲಾ ಸಸಿಗಳನ್ನು ಬೆಳೆಸಲಾಗುತ್ತಿದೆ’ ಎಂದು ಕೋಸ್ಟಲ್ ಮರೈನ್ ವಿಭಾಗದ ಆರ್ಎಫ್ಒ ಕಿರಣ್ ಮನವಾಚಾರಿ ವಿವರಿಸಿದರು.

ದೇಶದ ಪಶ್ಚಿಮ ಕರಾವಳಿಯಲ್ಲಿ ಸುಮಾರು 16 ಬಗೆಯ ಕಾಂಡ್ಲಾ ಸಸಿಗಳಿದ್ದು, ಅವುಗಳ ಪೈಕಿ 14 ವಿಧದ ಕಾಂಡ್ಲಾ ಸಸಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. ಆಮ್ಲಜನಕ ಉತ್ಪತ್ತಿ, ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುವಿಕೆಯಲ್ಲಿ ಕಾಂಡ್ಲಾ ಪ್ರಮುಖ ಪಾತ್ರವಹಿಸುವ ಜೊತೆಗೆ ಭೂಸವಕಳಿ, ಅಬ್ಬರದ ಅಲೆಗಳನ್ನು ನಿಯಂತ್ರಿಸುತ್ತವೆ. ಜಲಚರಗಳ ಸಂರಕ್ಷಣೆಗೂ ಸಹಕಾರಿಯಾಗಿವೆ ಎನ್ನುತ್ತಾರೆ ಕಡಲಜೀವಶಾಸ್ತ್ರಜ್ಞರು.

ಮೂರು ವರ್ಷಗಳಿಂದ ಕಾಂಡ್ಲಾ ಸಸಿಗಳನ್ನು ಬೆಳೆಸುವ ಪ್ರಮಾಣ ಹೆಚ್ಚಿದೆ. ವಿಶ್ವಬ್ಯಾಂಕ್ ನೆರವಿನ ಕೆ–ಶೋರ್ ಯೋಜನೆಯು ಇನ್ನಷ್ಟು ಪೂರಕವಾಗಲಿದೆ
– ಕೆ.ಡಿ.ನಾಯ್ಕ, ಎಸಿಎಫ್

ಪ್ರವಾಹಕ್ಕೆ ದಾರಿ!

‘ಕಾಂಡ್ಲಾ ವನಗಳು ವೃದ್ಧಿಯಾದಷ್ಟು ಭೂಸವಕಳಿ ಕಡಿಮೆಯಾಗುತ್ತದೆ. ಅಳಿವೆ ಪ್ರದೇಶಗಳಲ್ಲಿ ಹೂಳು ಹೆಚ್ಚುತ್ತದೆ. ಇದರಿಂದ ನದಿಯ ನೀರು ಸರಾಗವಾಗಿ ಸಮುದ್ರ ಸೇರಲು ಅಡ್ಡಿಯಾಗಬಹುದು. ಇದರಿಂದ ಪ್ರವಾಹಕ್ಕೆ ಅವಕಾಶವಾಗುತ್ತದೆ’ ಎಂದು ಪರಿಸರವಾದಿಯೊಬ್ಬರು ದೂರುತ್ತಾರೆ.

‘ಕಾಳಿನದಿಯಲ್ಲಿರುವ ಕಾಳಿಮಾತಾ ನಡುಗಡ್ಡೆ ಸೇರಿದಂತೆ ನದಿಯಂಚಿನ ಕಾಂಡ್ಲಾವನಗಳ ಬುಡದಲ್ಲಿ ಹೇರಳ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ದಾಸ್ತಾನಾಗಿದೆ. ಸಮುದ್ರದ ಉಬ್ಬರದ ವೇಳೆ, ನದಿಯ ಹರಿವಿನೊಂದಿಗೆ ತೇಲಿ ಬಂದ ತ್ಯಾಜ್ಯಗಳು ಕಾಂಡ್ಲಾ ಗಿಡಗಳ ಬುಡದಲ್ಲಿ ಸಿಲುಕಿ ಅಲ್ಲಿಯೇ ರಾಶಿಯಾಗಿ ಬೀಳುತ್ತಿವೆ’ ಎನ್ನುತ್ತಾರೆ ಮೀನುಗಾರ ಪ್ರಸಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.