ಕಾರವಾರ: ಮಳೆಗಾಲದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಾಗುವವರು ಎಚ್ಚರಿಕೆಯ ಜೊತೆಗೆ ಆತಂಕದಲ್ಲಿ ಸಾಗುತ್ತಿದ್ದಾರೆ. ಶಿರೂರಿನಲ್ಲಿ ಭೂಕುಸಿತ ಅವಘಡ ಘಟಿಸಿ ಒಂದೂವರೆ ವರ್ಷ ಕಳೆದರೂ ಭೂಕುಸಿತ ನಿಯಂತ್ರಣಕ್ಕೆ ಮಾರ್ಗೋಪಾಯ ಕಂಡುಕೊಳ್ಳದಿರುವುದು ಆತಂಕ ಹೆಚ್ಚಿಸಿದೆ.

ಪ್ರತಿ ಬಾರಿ ಮಳೆಗಾಲದಲ್ಲಿಯೂ ಕಾರವಾರದಿಂದ ಭಟ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭೂಕುಸಿತ ಅವಘಡ ನಡೆಯುತ್ತಿದೆ. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಭೂಕುಸಿತ ತಡೆಗೆ ಸೂಕ್ತ ಮಾರ್ಗೋಪಾಯಗಳ ಬಗ್ಗೆ ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯ (ಜಿಎಸ್ಐ) ತಜ್ಞರು ಹಲವು ತಿಂಗಳ ಹಿಂದೆಯೇ ವರದಿ ನೀಡಿದ್ದಾರೆ.

ತಜ್ಞರ ವರದಿಯಂತೆ ಕಾರವಾರ ತಾಲ್ಲೂಕಿನ ಸಂಕ್ರುಬಾಗ, ಅಂಕೋಲಾದ ಶಿರೂರು, ಕುಮಟಾ ತಾಲ್ಲೂಕಿನ ದುಂಡಕುಳಿ, ದೀವಗಿಯಲ್ಲಿ ಹೆದ್ದಾರಿ ಪಕ್ಕದದ ಗುಡ್ಡಕ್ಕೆ ತಡೆಗೋಡೆ ನಿರ್ಮಿಸಲು ಸೂಚನೆ ನೀಡಲಾಗಿದೆ. ಮಳೆಗಾಲಕ್ಕೆ ಮುನ್ನ ಸುರಕ್ಷತೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಆದರೆ, ಇದುವರೆಗೂ ಭೂಕುಸಿತ ಉಂಟಾಗುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಕ್ಕೆ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಕಂಪನಿ ಮುಂದಾಗಿಲ್ಲ ಎಂಬುದು ಜನರ ಆರೋಪ.

‘ಅಂಕೋಲಾದ ಶಿರೂರಿನಲ್ಲಿ ಭೂಕುಸಿತ ಉಂಟಾದ ಸ್ಥಳದಲ್ಲಿ ಮತ್ತೆ ಮಣ್ಣಿನ ರಾಶಿ ಕುಸಿದು ರಸ್ತೆಗೆ ಬೀಳದಂತೆ ಗೇಬಿಯನ್ ವಾಲ್ ನಿರ್ಮಿಸಲು ಕಾಮಗಾರಿ ಆರಂಭಿಸಿದ್ದರು. ಕೆಲವೇ ಅಡಿ ಉದ್ದ, ಅಲ್ಪ ಎತ್ತರದ ಗೋಡೆ ನಿರ್ಮಿಸಿ ಕೆಲಸ ಸ್ಥಗಿತಗೊಳಿಸಲಾಗಿದೆ. ಮಳೆಗಾಲ ಸಮೀಪಿಸಿದ್ದು, ಈ ಪ್ರದೇಶದಲ್ಲಿ ಮತ್ತೆ ಭೂಕುಸಿತ ಉಂಟಾಗುವ ಆತಂಕವಿದೆ’ ಎನ್ನುತ್ತಾರೆ ಸ್ಥಳಿಯರಾದ ಜಗದೀಶ ನಾಯ್ಕ.

‘ಶಿರೂರಿನಲ್ಲಿ ಗೇಬಿಯನ್ ವಾಲ್ ನಿರ್ಮಾಣ ಕೆಲಸ ಕಾರಣಾಂತರದಿಂದ ಗುತ್ತಿಗೆ ಕಂಪನಿ ನಿಲ್ಲಿಸಿದೆ. ಮುಂದುವರೆಸಲು ಹಲವು ಬಾರಿ ಸೂಚನೆ ನೀಡಿದ್ದರೂ ಕೆಲಸ ನಡೆಸುತ್ತಿಲ್ಲ. ಕಂಪನಿಯ ಆಡಳಿತ ಮಂಡಳಿಯಲ್ಲಿ ಬದಲಾವಣೆಗಳಾಗಿದ್ದರಿಂದ ನಿರ್ಧಾರ ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇ ಕಾರಣ ಮುಂದಿಟ್ಟು ಉಳಿದ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲು ತಡ ಮಾಡಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ದೇವಿಮನೆ ಘಟ್ಟದ ತುಂಬ ತಡೆಗೋಡೆ!

ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ದೇವಿಮನೆ ಘಟ್ಟದ 20ಕ್ಕೂ ಹೆಚ್ಚು ಕಡೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದ ದೇವಿಮನೆ ಕಿತ್ರೆ ದೇವಸ್ಥಾನದ ಪಕ್ಕದಲ್ಲಿ 14 ಅಡಿಗೂ ಹೆಚ್ಚು ಎತ್ತರದ ತಡೆಗೋಡೆ ಕೆಲವೇ ತಿಂಗಳಲ್ಲಿ ಪೂರ್ಣಗೊಂಡಿದೆ. ರಸ್ತೆಯ ಕೆಳಭಾಗದಲ್ಲಿ ತಡೆಗೋಡೆ ಕೆಲಸ ಮುಗಿದಿದೆ. ಗುಡ್ಡದ ಅಂಚಿನಲ್ಲಿ ಮಣ್ಣು ಕುಸಿದು ಬೀಳುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಐದಾರು ಎತ್ತರದ ಕಾಂಕ್ರೀಟ್ ತಡೆಗೋಡೆ ನಿರ್ಮಿಸುತ್ತಿದ್ದೇವೆ ಎಂದು ಹೆದ್ದಾರಿ ನಿರ್ಮಿಸುತ್ತಿರುವ ಆರ್ಎನ್ಎಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಎಂಜಿನಿಯರ್ ಗೋವಿಂದ ಭಟ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.