ಕಾರವಾರ: ಇಲ್ಲಿನ ಹಬ್ಬುವಾಡ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಮಾವಿನ ಹಣ್ಣಿನ ಉತ್ಸವ ನಡೆಯಿತು. ಅದರ ಅಂಗವಾಗಿ 1 ಕ್ವಿಂಟಲ್ಗೂ ಹೆಚ್ಚು ತೂಕದ ಮಾವಿನ ಹಣ್ಣು ಬಳಸಿ ದೇವರಿಗೆ ಅಲಂಕಾರ, ಅಭಿಷೇಕ ನಡೆಯಿತು.

ದೇವಸ್ಥಾನದ ಭಕ್ತರು ಮಾವಿನ ಹಣ್ಣನ್ನು ದೇವರಿಗೆ ಅರ್ಪಿಸಿದ್ದರು. ಮಾವಿನ ಹಣ್ಣಿನ ರಸದ ಅಭಿಷೇಕ ಮಾಡಲಾಯಿತು. ಪ್ರಸಾದ ರೂಪದಲ್ಲಿ ಭಕ್ತರಿಗೆ ಮಾವಿನ ಹಣ್ಣು, ಮಾವಿನ ಹಣ್ಣಿನ ರಸಾಯನ ಹಾಗೂ ಮಾವಿನ ಕಾಯಿ ಚಿತ್ರಾನ್ನ ವಿತರಿಸಲಾಯಿತು.

ದೇವರಿಗೆ ಹೂವಿನ ಬದಲಾಗಿ ಮಾವಿನ ಎಲೆ ಹಾಗೂ ಹಣ್ಣಿನಿಂದಲೇ ಅಲಂಕಾರ ಮಾಡಲಾಯಿತು. ನೋಡಲು ಇದು ಆಕರ್ಷಕವಾಗಿ ಕಾಣಿಸುತ್ತಿತ್ತು. ಮಹಾಪೂಜೆ ಬಳಿಕ ರಾತ್ರಿ ಮಾವಿನ ಹಣ್ಣುಗಳನ್ನು ಹರಾಜು ಹಾಕಲಾಯಿತು.

ಬಾಡ ಗ್ರಾಮದ ಮಹಾದೇವ ವಿನಾಯಕ ಟ್ರಸ್ಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಅರ್ಚಕರು, ನೂರಾರು ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-20-946220870

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.