ಕಾರವಾರ: ನಗರದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ಈಗ ಕರಿ ಇಶಾಡ ಮಾವಿನ ಹಣ್ಣು ಬೇಡಿಕೆ ಹೆಚ್ಚಿಸಿಕೊಂಡಿದ್ದು, ನೆರೆಯ ಅಂಕೋಲಾದಿಂದ ಹಣ್ಣುಗಳನ್ನು ತಂದು ಮಾರಾಟ ಮಾಡುವವರ ಸಂಖ್ಯೆ ವೃದ್ಧಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾವಿನ ಇಳುವರಿ ಅಷ್ಟಾಗಿ ಇಲ್ಲ. ಆದರೂ, 60ಕ್ಕೂ ಹೆಚ್ಚು ವ್ಯಾಪಾರಿಗಳು ಸ್ಥಳೀಯವಾಗಿ ಬೆಳೆಯುವ ಕರಿ ಇಶಾಡ, ಇಶಾಡ ಹಣ್ಣುಗಳ ರಾಶಿ ಮಾರಾಟಕ್ಕೆ ತರುತ್ತಿದ್ದಾರೆ. ಉಳಿದ ದಿನಗಳಗಿಂತ ವಾರಾಂತ್ಯದ ದಿನ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿದೆ.

ಪೈರಿ, ಮುಸರತ್, ಆಪೂಸ್ ಸೇರಿದಂತೆ ದುಬಾರಿ ದರದ ಹಣ್ಣುಗಳ ಜೊತೆಗೆ ಕರಿ ಇಶಾಡ ಹಣ್ಣು ದರ ಹೆಚ್ಚಿಸಿಕೊಂಡಿದೆ. ಸುಭಾಷ ವೃತ್ತದ ಸಮೀಪ, ಗ್ರೀನ್ ಸ್ಟ್ರೀಟ್, ಎಂ.ಜಿ.ರಸ್ತೆ ಸೇರಿದಂತೆ ಹಲವು ಕಡೆ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟು ಕುಳಿತಿದ್ದ ವ್ಯಾಪಾರಿಗಳ ಸಾಲು ಕಂಡುಬಂದಿತ್ತು. ಕರಿ ಈಶಾಡ ಹಣ್ಣು ಪ್ರತಿ ಡಜನ್ಗೆ ₹600–₹700, ಪೈರಿ ₹600, ಮುಸರತ್ ₹850 ದರದಲ್ಲಿ ಮಾರಾಟವಾಗುತ್ತಿದ್ದವು.

‘ಹಣ್ಣಿನ ಫಸಲು ಈ ಬಾರಿ ತಕ್ಕಮಟ್ಟಿಗೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರ ಅಷ್ಟೇನೂ ಹೆಚ್ಚಳ ಆಗಿಲ್ಲ. ಕರಿ ಇಶಾಡ ಹಣ್ಣು ಖರೀದಿಸಲೆಂದೇ ಗ್ರಾಹಕರು ಬರುತ್ತಿದ್ದಾರೆ. ದೂರದ ಊರುಗಳಿಗೂ ಒಯ್ಯುತ್ತಿದ್ದಾರೆ’ ಎಂದು ವ್ಯಾಪಾರಿ ಶಾಂತಲಾ ಗೌಡ ಹೇಳಿದರು.

‘ಗ್ರಾಮದ ನಾಲ್ಕಾರು ಮಹಿಳೆಯರು ಸೇರಿ ವಾರದ ಸಂತೆ ಇರುವ ಕಡೆಗಳಲ್ಲಿ ಮಾವಿನ ಹಣ್ಣು ಒಯ್ದು ಮಾರಾಟ ಮಾಡುತ್ತಿದ್ದೇವೆ. ಗೂಡ್ಸ್ ರಿಕ್ಷಾಗಳಲ್ಲಿ ಹಣ್ಣು ತಂದು ರಸ್ತೆ ಬದಿಗಳಲ್ಲಿ ಮಾರಾಟಕ್ಕೆ ಇಟ್ಟು ಕುಳಿತುಕೊಳ್ಳುತ್ತೇವೆ. ಬಿಸಿಲ ಝಳ ಹೆಚ್ಚಿರುವುದರಿಂದ ಹಣ್ಣು ಬಹುಬೇಗನೆ ಮಾಗುತ್ತಿದ್ದು, ಹೆಚ್ಚು ದಿನ ಇಟ್ಟುಕೊಳ್ಳಲು ಕಷ್ಟವಾಗಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-20-74029502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.