ಕಾರವಾರ: ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಶಾಸಕ ಸತೀಶ ಸೈಲ್ ಪುತ್ರಿ ಸಾಧ್ವಿ ಸೈಲ್ ಶನಿವಾರ ಗೋವಾದಿಂದ ನಗರಕ್ಕೆ ಮರಳಿದ್ದು, ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಗೋವಾದಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿ ಇಲ್ಲಿನ ಮಾಲಾದೇವಿ ಮೈದಾನದ ಹೆಲಿಪ್ಯಾಡ್ಗೆ ಬಂದಿಳಿದ ಸಾಧ್ವಿ ಅವರನ್ನು ವಿವಿಧ ಕ್ಷೇತ್ರಗಳ ಪ್ರಮುಖರು, ವಿದ್ಯಾರ್ಥಿಗಳು ಸ್ವಾಗತಿಸಿಕೊಂಡರು. ಮೈದಾನದ ಪಕ್ಕದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಸಾಧ್ವಿ ಸೈಲ್, ‘ವ್ಯಕ್ತಿಯ ಸಾಧನೆಗೆ ಪರಿಶ್ರಮ ಮುಖ್ಯವೇ ಹೊರತು, ಯಾವುದೇ ಪ್ರಭಾವ ಪರಿಗಣಿಸಲ್ಪಡದು. ಸಮಾಜದಲ್ಲಿ ಎಲ್ಲರೂ ಒಂದು ಎಂಬ ಭಾವನೆ ಇರಬೇಕು. ನಾವೆಲ್ಲ ಭಾರತೀಯರು ಎಂಬುದಷ್ಟೆ ಧ್ಯೇಯವಾಗಿರಬೇಕು. ನನ್ನ ಸಾಧನೆಯ ಹಿಂದೆ ಕಾರವಾರದ ಜನರ ಹಾರೈಕೆ, ಪ್ರೋತ್ಸಾಹದ ಬಲ ಇತ್ತು’ ಎಂದರು.

ಬಳಿಕ ತೆರೆದ ವಾಹನದಲ್ಲಿ ಸಾಧ್ವಿ ಅವರನ್ನು ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ಸದಾಶಿವಗಡದ ನಿವಾಸಕ್ಕೆ ಸಾಗಿದರು.

ಶಾಸಕ ಸತೀಶ ಸೈಲ್, ಕಲ್ಪನಾ ಸೈಲ್, ಭವೇಶಾನಂದ ಸ್ವಾಮೀಜಿ, ಸ್ಟ್ಯಾನಿ ಪಿಂಟೊ, ಸುಜಾತಾ ಗಾಂವಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-20-599410838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.