ಕಾರವಾರ: ಅಧಿಕ ಹಣ ಗಳಿಕೆ ಆಸೆಯಿಂದ ತಾಲ್ಲೂಕಿನ ಮಲ್ಲಾಪುರದ ಕೈಗಾ ಟೌನ್ಶಿಪ್ನ ನಿವೃತ್ತ ನೌಕರರೊಬ್ಬರು ₹21.76 ಲಕ್ಷ ವಂಚನೆಗೆ ಗುರಿಯಾಗಿದ್ದಾರೆ. ಮೆಥ್ಯು ಡಿಯೋಗ ಫರ್ನಾಂಡಿಸ್ (60) ವಂಚನೆಗೆ ಒಳಗಾದವರು. ಮೊಬೈಲ್ಗೆ ಬಂದ ಸಂದೇಶವೊಂದರಲ್ಲಿದ್ದ ಲಿಂಕ್ ಕ್ಲಿಕ್ಕಿಸಿ ಅವರು ಹಣ ಕಳೆದುಕೊಂಡಿದ್ದಾಗಿ ಸಿಇಎನ್ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ‘ಸಂದೇಶದಲ್ಲಿನ ಲಿಂಕ್ ತೆರೆದ ಕೂಡಲೆ ಆನ್ಲೈನ್ ಟ್ರೇಡಿಂಗ್ಗೆ ಸಂಬಂಧಿಸಿದ ವಾಟ್ಸಾಪ್ ಗುಂಪಿಗೆ ಸೇರ್ಪಡೆಗೊಂಡಿದ್ದರು. ಗುಂಪಿನ ಎಡ್ಮಿನ್ ಆಗಿದ್ದ ಮೀನಾ ಜೋಶಿ ಹಾಗೂ ರಾಜೇಶ ಮೊಡಿ ಖಾಸಗಿ ಕಂಪನಿಗಳಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸುವ ಆಮಿಷ ತೋರಿಸಿದ್ದರು. ಇದನ್ನು ನಂಬಿ ಹಂತ ಹಂತವಾಗಿ ಹಣ ಹೂಡಿದ್ದ ಮೆಥ್ಯೂ ಅವರಿಗೆ ಹಣ ಮರಳಿಸದೆ ವಂಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-20-623000165

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.