ಕಾರವಾರ: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಸಿಕ್ಕ ಬೆನ್ನಲ್ಲೇ ಸಂಯುಕ್ತ ಅರಬ್ ರಾಷ್ಟ್ರದಿಂದ (ಯುಎಇ) ಹೊರಟು ಹೊರ್ಮುಜ್ ಜಲಸಂಧಿ ದಾಟಿದ ಎಂಎಸ್ಜಿ ಹೆಸರಿನ ಹಡಗು, ಗುರುವಾರ ಇಲ್ಲಿನ ವಾಣಿಜ್ಯ ಬಂದರು ತಲುಪಿತು.

‘ಗ್ಯಾಬೊನ್ ದೇಶದ ಧ್ವಜವುಳ್ಳ ಈ ಹಡಗು ಯುಎಇಯ ಶಾರ್ಜಾ ಬಂದರಿನಿಂದ 6 ಸಾವಿರ ಟನ್ ಬಿಟುಮಿನ್ ತಂದಿದೆ. 10 ದಿನಗಳ ಹಿಂದೆ ಅಲ್ಲಿಂದ ಪ್ರಯಾಣ ಬೆಳೆಸಿತ್ತು’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 13ರಂದು ಯುಎಇಯಿಂದ ಚೆಂಗ್ ಎಕ್ಸ್ ಹೆಸರಿನ ಹಡಗು 3,100 ಟನ್ ಬಿಟುಮಿನ್ ತಂದಿತ್ತು. ಆ ಬಳಿಕ ಒಂದು ತಿಂಗಳಿನಿಂದ ಯಾವುದೇ ಹಡಗು ಬಂದಿರಲಿಲ್ಲ. ಪಶ್ಚಿಮ ಏಷ್ಯಾ ಸಂಘರ್ಷ ಆರಂಭಗೊಂಡ ಬಳಿಕ ಕಾರವಾರ ವಾಣಿಜ್ಯ ಬಂದರಿಗೆ ಬಂದಿರುವ ಮೂರನೇ ಹಡಗು ಇದು. ಯುದ್ಧ ನಡೆದಿರದಿದ್ದರೆ, ಈ ಅವಧಿಯಲ್ಲಿ ಸರಾಸರಿ 10ರಿಂದ 15 ಹಡಗುಗಳು ಬಿಟುಮಿನ್ ಹೊತ್ತು ಬಂದರಿಗೆ ಬರುತ್ತಿದ್ದವು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.