ಕಾರವಾರ: ಆಸ್ತಿ, ವಿವಾಹ ನೋಂದಣಿ ಸೇರಿದಂತೆ ವಿವಿಧ ಕೆಲಸಗಳಿಗೆ ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ವೃದ್ಧರು, ಅಂಗವಿಕಲರ ಪಡಿಪಾಟಲು ಹೇಳತೀರದು. ಕಿರಿದಾಗಿರುವ ಮೆಟ್ಟಿಲುಗಳನ್ನು ಏರಲಾಗದೆ ಕುಸಿದು ಬೀಳುವ ಆತಂಕಕ್ಕೆ ಪರಿಹಾರ ಸಿಗುತ್ತಿಲ್ಲ ಎಂಬ ಬೇಸರ ಅವರದು.

ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ಹಳೆಯ ಕಟ್ಟಡದ ಮೊದಲ ಮಹಡಿಯಲ್ಲಿ ಹಲವು ದಶಕಗಳಿಂದ ಸಬ್ ರಿಜಿಸ್ಟ್ರಾರ್ ಕಚೇರಿ ನಿರ್ವಹಣೆ ಮಾಡಲಾಗುತ್ತಿದೆ. ಇಕ್ಕಟ್ಟಾದ ಜಾಗದಲ್ಲಿ ಕಾರವಾರ ವಿಭಾಗದ ಕಚೇರಿಯ ಜೊತೆಗೆ ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯೂ ಇದೆ. ನಿತ್ಯವೂ ಇಲ್ಲಿಗೆ ವಿವಾಹ ನೋಂದಣಿ, ಆಸ್ತಿ ನೋಂದಣಿ, ಮಾರಾಟ ಪತ್ರ, ಉಡುಗೊರೆ ಪತ್ರ (ಗಿಫ್ಟ್ ಡೀಡ್), ಭಾರ ರಹಿತ ಪತ್ರ ಸೇರಿದಂತೆ ಹಲವು ಕೆಲಸಗಳಿಗೆ ಹತ್ತಾರು ಜನರು ಬರುತ್ತಾರೆ.

‘ಸಬ್ ರಿಜಿಸ್ಟ್ರಾರ್ ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಇಕ್ಕಟ್ಟಾದ ಜಾಗದಲ್ಲಿ ಜನರು ಕುಳಿತುಕೊಳ್ಳಲೂ ಆಗದು. ಕಿರಿದಾದ ಜಾಗದಲ್ಲಿರುವ ಮೆಟ್ಟಿಲುಗಳನ್ನು ಏರಿಕೊಂಡು ಸಾಗಲು ಹಿರಿಯ ನಾಗರಿಕರಿಗೆ ಕಷ್ಟವಾಗುತ್ತಿದೆ. ಕೆಲವರು ಮೇಲೆ ಬರಲಾಗದೆ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಆದರೆ, ಬೆರಳಚ್ಚು ನೀಡುವ ಸಲುವಾಗಿ ಹೋಗಲೇಬೇಕಾಗಿದ್ದರಿಂದ ಏದುಸಿರು ಬಿಡುತ್ತ ಕಚೇರಿಗೆ ತಲುಪುವುಷ್ಟರಲ್ಲಿ ತಾಸುಗಟ್ಟಲೆ ಸಮಯ ಬೇಕಾಗುತ್ತದೆ’ ಎಂದು ವೃದ್ಧರೊಬ್ಬರು ದೂರಿದರು.

‘ಕಂದಾಯ, ಉಪನೋಂದಣಿ, ಭೂಮಾಪನ, ಇತರ ಅತಿ ಅಗತ್ಯ ಸೇವೆಗಳ ಕಚೇರಿಯನ್ನು ನೆಲಮಹಡಿಯಲ್ಲೇ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ಹಿರಿಯ ನಾಗರಿಕರು ಇಡುತ್ತಿದ್ದೇವೆ. ಆದರೆ, ಇಂತಹ ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಬಹುತೇಕ ಆಡಳಿತ ಸೌಧಗಳಲ್ಲಿ ಮೊದಲ ಅಥವಾ ಎರಡನೇ ಮಹಡಿಯಲ್ಲಿವೆ. ಕಚೇರಿಗಳನ್ನು ನೆಲಮಹಡಿಗೆ ಸ್ಥಳಾಂತರಿಸುವ ಒತ್ತಾಯಕ್ಕೆ ಸ್ಪಂದನೆ ಸಿಗುತ್ತಿಲ್ಲ’ ಎಂದು ಹಿರಿಯ ನಾಗರಿಕರ ಪರ ಹೋರಾಟಗಾರ ಬಾಬು ಅಂಬಿಗ ಹೇಳಿದರು.

‘ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ವೃದ್ಧರು, ಅಂಗವಿಕಲರ ಅನುಕೂಲಕ್ಕೆ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಗದಿರುವುದು ಏಕೆಂಬುದು ಅರ್ಥವಾಗುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಆಡಳಿತ ಸೌಧದ ನೆಲಮಹಡಿಗೆ ಸ್ಥಳಾಂತರಿಸಿದರೆ ಅನುಕೂಲವಾಗಲಿದೆ’ ಎಂದೂ ಹೇಳಿದರು.

ನಿರ್ಮಾಣ ಹಂತದಲ್ಲಿರುವ ಮಿನಿ ವಿಧಾನಸೌಧದ ಕಟ್ಟಡದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಾಪನೆಗೆ ಸ್ಥಳಾವಕಾಶ ಮೀಸಲಿದೆ

– ನಿಶ್ಚಲ್ ನೊರ್ಹೋನಾ, ತಹಶೀಲ್ದಾರ್

ಮೇಲಿನ ಮಹಡಿಯಲ್ಲೇ ಕಚೇರಿ

ಜಿಲ್ಲಾಕೇಂದ್ರ ಮಾತ್ರವಲ್ಲದೆ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಆಡಳಿತ ಸೌಧದ ಮೊದಲ ಅಥವಾ ಎರಡನೇ ಮಹಡಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಿವೆ. ಜನರು ಈ ಕಚೇರಿಗಳಿಗೆ ಸಾಗಲು ಲಿಫ್ಟ್ ಇಲ್ಲವೇ ಹತ್ತಾರು ಮೆಟ್ಟಿಲುಗಳನ್ನು ಬಳಸಿ ಸಾಗಬೇಕಿದೆ.

‘ಲಿಫ್ಟ್ ಸೌಲಭ್ಯ ಇದ್ದರೂ ಬಹುತೇಕ ಸಮಯದಲ್ಲಿ ತಾಂತ್ರಿಕ ಅಡಚಣೆ, ವಿದ್ಯುತ್ ನಿಲುಗಡೆ ಕಾರಣ ನೀಡಿ ಸ್ಥಗಿತಗೊಳಿಸಿರುತ್ತಾರೆ. ವೃದ್ಧರು, ಅಂಗವಿಕಲರಿಗೆ ಗಾಲಿ ಕುರ್ಚಿ ಸೌಲಭ್ಯ ಒದಗಿಸುವ ಅವಕಾಶ ಇದ್ದರೂ ಇದ್ದೂ ಇಲ್ಲದಂತಾಗಿರುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ವಿಠ್ಠಲ ನಾಯ್ಕ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.