ಕಾರವಾರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ನಸುಕಿನ ಜಾವ ಬಿರುಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ ಹಲವೆಡೆ ಮರ, ಟೊಂಗೆಗಳು ಮುರಿದು ಹಾನಿ ಸಂಭವಿಸಿದೆ.

ವೇಗದ ಗಾಳಿಯೊಂದಿಗೆ ಸುರಿದ ಮಳೆಯಿಂದ ನಗರದ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ಭಾರಿ ಗಾತ್ರದ ಮರದ ಟೊಂಗೆಗಳು ವಿದ್ಯುತ್ ತಂತಿಗಳ ಮೇಲೆ ವಾಲಿದ್ದವು. ಕೆಲವೆಡೆ ರಸ್ತೆಗೆ ಅಡ್ಡಲಾಗಿಯೂ ಬಿದ್ದಿದ್ದವು. ಇದರಿಂದ ನಗರದಾದ್ಯಂತ ಇಡೀ ದಿನ ವಿದ್ಯುತ್ ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯ ಉಂಟಾಯಿತು.

ಮಳೆಯಿಂದ ಗ್ರಾಮೀಣ ಪ್ರದೇಶದ ಬಹುತೇಕ ಕಡೆಗಳಲ್ಲಿಯೂ ವಿದ್ಯುತ್ ನಿಲುಗಡೆ ಸಮಸ್ಯೆ ತಲೆದೋರಿತು. ತಾಲ್ಲೂಕಿನ ಗೋಟೆಗಾಳಿ ಗ್ರಾಮದ ಕೋಟೆ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ತಂತಿ ಹರಿದು ಬಿದ್ದು ಎರಡು ದಿನ ಕಳೆದರೂ ತಂತಿಯನ್ನೂ ಹೆಸ್ಕಾಂ ತೆರವು ಮಾಡಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.

ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ 9 ಸೆಂ.ಮೀ, ಕಾಗಾಲದಲ್ಲಿ 8 ಸೆಂ.ಮೀ, ಬರ್ಗಿಯಲ್ಲಿ 7.2 ಸೆಂ.ಮೀ ಮಳೆ ದಾಖಲಾಗಿದೆ. ಜೊಯಿಡಾದಲ್ಲಿ 5.3 ಸೆಂ.ಮೀ, ಮುಂಡಗೋಡದಲ್ಲಿ 2.6 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕುಮಟಾ: ತಾಲ್ಲೂಕಿನ ವಿವಿಧೆಡೆ ಬುಧವಾರ ರಾತ್ರಿ ಸುರಿದ ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆಗೆ ನಾಲ್ಕು ಮನೆ ಹಾಗೂ ಒಂದು ಶೌಚಾಲಯಕ್ಕೆ ಹಾನಿ ಸಂಭವಿಸಿದೆ.

ಬೆಟ್ಕುಳಿಯ ಗೌರಿ ಪಟಗಾರ ಅವರ ಮನೆಗೆ ಹಾನಿಯಾಗಿದೆ. ಕಲಭಾಗದ ಸದಾನಂದ ಅಗ್ರವಾಡೇಕರ್ ಎಂಬುವವರ ಮನೆ ಮಹಡಿಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ತಾಲ್ಲೂಕಿನ ಮೊರಬದ ದಾನು ಹಳ್ಳೇರ ಅವರ ಮನೆಯ ಹತ್ತಿರದ ವಿದ್ಯುತ್ ಕಂಬ ಮನೆಯ ಮೇಲೆ ಬಿದ್ದು ಹಾನಿಯಾಗಿದೆ. ಗೋಕರ್ಣದ ಚಿನ್ನದ ಕೇರಿಯ ರಮೇಶ ಆಚಾರಿ ಎಂಬುವವರ ಪ್ರತ್ಯೇಕ ಶೌಚಾಲಯದ ಮೇಲೆ ಮರದ ಟೊಂಗೆ ಬಿದ್ದು ಹಾನಿ ಸಂಭವಿಸಿದೆ.

‘ತಾಲ್ಲೂಕಿನ ಹೆಗಡೆಯ ಮಚಗೋಣದ ತಿಮ್ಪಪ್ಪ ಪಟಗಾರ ಎಂಬುವವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ವೈರಿಂಗ್ ಟಿ.ವಿ., ರೆಫ್ರಿಜಿರೇಟರ್, ಮನೆಯ ಛಾವಣಿ ತಗಡಿಗೂ ಧಕ್ಕೆಯಾಗಿ ₹50 ಸಾವಿರ ಹಾನಿ ಆಗಿದೆ. ಹಾನಿ ಕುರಿತು ನಿಖರವಾಗಿ ಮಾಹಿತಿ ಬಂದ ನಂತರ ಸಂಬಂಧಪಟ್ಟವರಿಗೆ ಪರಿಹಾರ ನೀಡಲಾಗುವುದು’ ಎಂದು ತಹಶೀಲ್ದಾರ್ ಕೃಷ್ಣ ಕಾಮಕರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-20-127661454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.