ಕಾರವಾರ: ಅಂಕೋಲಾ ತಾಲ್ಲೂಕಿನ ಹಾರವಾಡ ಸಮೀಪದ ತರಂಗಮೇಟ್ ಗ್ರಾಮದಲ್ಲಿ ಕಡಲುಕೊರೆತ ಕಾಮಗಾರಿ ಅಪೂರ್ಣಗೊಂಡಿದ್ದು, ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಗುರುವಾರ ಶಾಸಕ ಸತೀಶ ಸೈಲ್ ಮತ್ತು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ್ದ ಗ್ರಾಮಸ್ಥರು ಕಡಲುಕೊರೆತ ತಡೆಗೆ ಕೈಗೊಂಡ ಕಾಮಗಾರಿ ಅರೆಬರೆಯಾಗಿದೆ. ತಡೆಗೋಡೆ ಮತ್ತು ತೀರದ ನಡುವಿನ ಪ್ರದೇಶದಲ್ಲಿ ಮಣ್ಣು ತುಂಬಿಸುವ ಕೆಲಸವನ್ನೂ ಮಾಡಿಲ್ಲ. ಇದರಿಂದ ಮಳೆಗಾಲದಲ್ಲಿ ಮತ್ತಷ್ಟು ಪ್ರದೇಶ ಹಾನಿಗೆ ಒಳಗಾಗುವ ಆತಂಕವಿದೆ ಎಂದು ದೂರಿದರು.

‘2024ರಲ್ಲಿ ಮಳೆಗಾಲದ ಅವಧಿಯಲ್ಲಿ ಕಡಲುಕೊರೆತದಿಂದ ಸುಮಾರು 500 ಮೀ. ಉದ್ದದ ತೀರ ಪ್ರದೇಶಕ್ಕೆ ಹಾನಿ ಉಂಟಾಗಿತ್ತು. ಇದರಿಂದ ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗಿದ್ದವು. 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಯಿತು. ಇಂದಿಗೂ ಈ ಕುಟುಂಬಗಳು ಮನೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕೇವಲ 180 ಮೀ. ಉದ್ದದ ಪ್ರದೇಶಕ್ಕೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. ಮಾಡಿದ ಕೆಲಸವೂ ಸರಿಯಾಗಿಲ್ಲ’ ಎಂದು ಸಮಸ್ಯೆ ವಿವರಿಸಿದರು.

ಜನರ ದೂರು ಆಲಿಸಿದ ಶಾಸಕ ಸತೀಶ ಸೈಲ್ ಮಾತನಾಡಿ, ‘ಉಳಿದ ಪ್ರದೇಶಕ್ಕೆ ತಡೆಗೋಡೆ ನಿರ್ಮಿಸಲು, ತಡೆಗೋಡೆಯ ಪಕ್ಕದಲ್ಲಿ ಮಣ್ಣು ತುಂಬಿಸಲು ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆಸಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಪ್ರಮುಖರಾದ ಕೆ.ಶಂಭು ಶೆಟ್ಟಿ, ಸಮೀರ ನಾಯ್ಕ, ಗ್ರಾಮಸ್ಥರಾದ ಗಣಪತಿ ದುರ್ಗೇಕರ, ರವಿ ಹರಿಕಂತ್ರ, ಸಂತೋಷ ದುರ್ಗೇಕರ, ಸುಭಾಷ ಹರಿಕಂತ್ರ, ಮಹಾಬಲೇಶ್ವರ ತಾಂಡೇಲ, ರಾಜು ತಾಂಡೇಲ, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-20-1082153301

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.