ಕಾರವಾರ: ಎರಡು ದಶಕದ ಹಿಂದೆ ನಗರದ 8 ವಾರ್ಡ್ಗಳ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಒಳಚರಂಡಿ ಯೋಜನೆ ಉಪಯೋಗಕ್ಕೆ ಬರದಂತಾಗಿದೆ ಎಂಬ ದೂರುಗಳು ವ್ಯಾಪಕವಾಗಿದೆ. ಅದರ ನಡುವೆಯೇ ಮತ್ತೆ ಒಳಚರಂಡಿ ವಿಸ್ತರಿಸಲು ನಗರಸಭೆ ಮುಂದಾಗಿದೆ. ಇದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.

ಕರಾವಳಿ ಜಿಲ್ಲೆಗಳ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ನಿರ್ಮಿಸಲು ಕುಡ್ಸೆಂಪ್ 2007ರ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಿಸುವ ಕೆಲಸ ಕೈಗೆತ್ತಿಕೊಂಡಿತ್ತು. ಹಲವು ವರ್ಷದ ಬಳಿಕ ಕೆಲಸ ಪೂರ್ಣಗೊಳಿಸಿದರೂ ಯೋಜನೆ ನಿಷ್ಪ್ರಯೋಜಕ ಎನಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಡ್ಸೆಂಪ್ನ ₹70 ಲಕ್ಷ ಅನುದಾನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.

ಈಗಲೂ ನಗರದ ಎಂ.ಜಿ.ರಸ್ತೆ, ಕೋಡಿಬಾಗ ರಸ್ತೆಯಲ್ಲಿನ ಮ್ಯಾನ್ಹೋಲ್ಗಳಲ್ಲಿ ತ್ಯಾಜ್ಯನೀರು ಉಕ್ಕೇರುತ್ತಿದೆ. ಅಲ್ಲದೇ, ಕೊಳಚೆ ನೀರು ಸಮುದ್ರ ಸೇರುವುದು ನಿಂತಿಲ್ಲ. ಹೀಗಾಗಿ ಅಂದು ಕೈಗೊಂಡಿದ್ದ ಯೋಜನೆ ನಿರರ್ಥಕ ಎಂಬುದು ಜನರ ಆರೋಪ.

ಈಗ ನಗರಸಭೆ ವತಿಯಿಂದಲೇ ನಗರೋತ್ಥಾನ–4ರ ಅಡಿಯಲ್ಲಿ ಒಳಚರಂಡಿ ಯೋಜನೆ ವಿಸ್ತರಿಸುವ ಕೆಲಸ ಕೈಗೊಳ್ಳಲಾಗಿದೆ. ಕಾಜುಬಾಗದ ಪೊಲೀಸ್ ಕಲ್ಯಾಣ ಮಂಟಪದ ಸಮೀಪದಿಂದ ಆಯುಷ್ ಆಸ್ಪತ್ರೆವರೆಗೆ ಸುಮಾರು 1.4 ಕಿ.ಮೀ ಉದ್ದದವರೆಗೆ ಒಳಚರಂಡಿ ಸಂಪರ್ಕ ಒದಗಿಸಲು ಕಾಮಗಾರಿ ಆರಂಭಗೊಂಡಿದೆ. ಇದಕ್ಕಾಗಿ ಸುಸ್ಥಿತಿಯಲ್ಲಿದ್ದ ಮುಖ್ಯ ರಸ್ತೆಯನ್ನು ಅಗೆದು, ಪೈಪ್ ಅಳವಡಿಸಲಾಗುತ್ತಿದೆ.

‘ಸಮುದ್ರ ಮಟ್ಟಕ್ಕೆ ಸಮನಾಗಿರುವ ಕಾರವಾರ ನಗರದಲ್ಲಿ ಒಳಚರಂಡಿ ಯೋಜನೆ ಕೈಗೊಳ್ಳಲು ಕಷ್ಟ ಎಂಬ ವೈಜ್ಞಾನಿಕ ಸಂಗತಿ ಅರಿವಿದ್ದರೂ ಹಿಂದೆ ಕುಡ್ಸೆಂಪ್ ಕೋಟ್ಯಂತರ ರೂಪಾಯಿ ಅನುದಾನ ಪೋಲು ಮಾಡಿತ್ತು. ಅದು ಕೈಗೊಂಡಿದ್ದ ಒಳಚರಂಡಿ ಯೋಜನೆ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಮ್ಯಾನ್ಹೋಲ್ಗಳಲ್ಲಿ ತ್ಯಾಜ್ಯಗಳು ಉಕ್ಕೇರುತ್ತಿದ್ದು ಆಗಾಗ ಅವುಗಳನ್ನು ಶುಚಿಪಡಿಸುವ ಕೆಲಸ ನಡೆದಿದೆ. ಈಗ ನಡೆಸುತ್ತಿರುವ ಕಾಮಗಾರಿ ಕೂಡ ಸಂಪೂರ್ಣ ಅವೈಜ್ಞಾನಿಕವಾಗುವ ಶಂಕೆ ಇದೆ’ ಎಂದು ಬಿಜೆಪಿ ಮುಖಂಡ ದೇವಿದಾಸ ನಾಯ್ಕ ಆರೋಪಿಸಿದ್ದಾರೆ.

‘ಒಳಚರಂಡಿ ಯೋಜನೆ ಕೈಗೊಳ್ಳುವ ಮುಂಚೆ ಸೂಕ್ತ ಅಧ್ಯಯನ ನಡೆಸಿಕೊಳ್ಳಬೇಕು. ಮಲೀನ ನೀರು ಒಂದು ಕಡೆ ವ್ಯವಸ್ಥಿತವಾಗಿ ಹರಿದು ಹೋಗಿ ಸೇರಲು, ಅಲ್ಲಿ ಶುದ್ಧೀಕರಣಗೊಳ್ಳಲು ಸಂಸ್ಕರಣಾ ಘಟಕಗಳಿರಬೇಕು. ಪೈಪ್ಲೈನ್ ಅಳವಡಿಕೆ ವೇಳೆಯಲ್ಲೇ ರಿಸಿವಿಂಗ್ ಚೇಂಬರ್ಗಳು ನಿರ್ಮಾಣಗೊಳ್ಳಬೇಕು. ಆದರೆ, ಸದ್ಯ ನಡೆಸುತ್ತಿರುವ ಕಾಮಗಾರಿಯಲ್ಲಿ ರಸ್ತೆ ಅಗೆದು, ಪೈಪ್ ಹಾಕುವ ಕೆಲಸ ನಡೆದಿದೆ. ರಸ್ತೆಯ ಮೇಲ್ಮೈನಲ್ಲೇ ಪೈಪ್ ಅಳವಡಿಸುತ್ತಿರುವ ಶಂಕೆ ಇದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-20-1571258682

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.