ಭಟ್ಕಳ: ಪಟ್ಟಣದ ಸಂಶುದ್ದೀನ್ ವೃತ್ತದ ಬಳಿ ಶುಕ್ರವಾರ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಯುವಕನೊಬ್ಬನಿಗೆ ಚಾಕು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.

ಪಟ್ಟಣದ ಡಿ.ಪಿ ಕಾಲೊನಿ ನಿವಾಸಿ ನಗಿನಕುಮಾರ ಶೆಟ್ಟಿ ಹಲ್ಲೆ ಮಾಡಿದ ವ್ಯಕ್ತಿ. ತಾಲ್ಲೂಕಿನ ಪುರವರ್ಗ ನಿವಾಸಿ ಮಂಜುನಾಥ ಮಾಸ್ತಪ್ಪ ನಾಯ್ಕ (34) ಹಲ್ಲೆಗೊಳಗಾದ ಯುವಕ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಶೆಯ ಗುಂಗಿನಲ್ಲಿ ಮಂಜುನಾಥ ನಾಯ್ಕ ಅವರ ಎಡ ಕಂಕುಳ, ಕುತ್ತಿಗೆ, ಹೊಟ್ಟೆ, ಕಿವಿಯ ಹತ್ತಿರ ಹಾಗೂ ತಲೆಯ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ ನಗೀನಕುಮಾರ ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಶಹರ ಠಾಣಾ ಸಿಪಿಐ ದಿವಾಕರ ಪಿ.ಎಂ ಹಾಗೂ ಪಿಎಸ್ಐ ನವೀನಕುಮಾರ ನಾಯ್ಕ ಆರೋಪಿಯನ್ನು ಬಂಧಿಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.