ಕುಮಟಾ: ಪಟ್ಟಣದಲ್ಲಿರುವ ತಾಲ್ಲೂಕಿನ ಫಿಶರಿಸ್ ಕೋ-ಅಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ 12 ಸ್ಥಾನಗಳ ಪೈಕಿ 9 ಜನ ನಿರ್ದೇಶಕರು ಆಯ್ಕೆಯಾಗಿದ್ದು, ಹಿಂದುಳಿದ ಬ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲು ಮೂರು ಸ್ಥಾನಗಳಿಗೆ ಅಭ್ಯರ್ಥಿಗಳು ಸ್ಪರ್ಧಿಸದ ಕಾರಣ ಆ ಸ್ಥಾನಗಳಿಗೆ ನಿರ್ದೇಶಕರು ಅಯ್ಕೆಯಾಗಲಿಲ್ಲ.

ಆಯ್ಕೆಯಾದ ಒಂಬತ್ತು ಜನ ನಿರ್ದೇಶಕರ ವಿವರ ಹೀಗಿದೆ: ಸಾಮಾನ್ಯ ಮೀಸಲು ಕ್ಷೇತ್ರ ಧಾರೇಶ್ವರದಿಂದ ನಾಗಪ್ಪ ಹರಿಕಂತ್ರ, ಅಳ್ವೆದಂಡೆಯಿಂದ ಬಾಬು ಕುಬಾಲ, ನಂದಾ ಜಾದವ, ಶಂಕರ ಶೋಡನಕರ್, ಲುಕ್ಕೇರಿಯಿಂದ ಗೋಪಾಲಕೃಷ್ಣ ಅಂಬಿಗ, ದೀವಗಿಯಿಂದ ಲಕ್ಷ್ಮಣ ಅಂಬಿಗ, ಹಿಂದುಳಿದ `ಅ’ ವರ್ಗ ಮೀಸಲು ಅಳ್ವೆದಂಡೆ ಕ್ಷೇತ್ರದಿಂದ ಜೈವಿಠ್ಠಲ ಕುಬಾಲ, ಮಹಿಳಾ ಮೀಸಲು ದೀವಗಿ ಕ್ಷೇತ್ರದಿಂದ ಮಾಲಾ ಅಂಬಿಗ, ಮಹಿಳಾ ಮೀಸಲು ಧಾರೇಶ್ವರ ಕ್ಷೇತ್ರದಿಂದ ಶಾಂತಿ ಅಂಬಿಗ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧಿಕಾರಿ ಶಾರದಾ ಕವರಿ ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-20-1259709458

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.