ಕುಮಟಾ: ತಾಲ್ಲೂಕಿನ ಹೆಗಡೆ ಹಾಗೂ ಮಿರ್ಜಾನ ನಡುವಿನ ಲೋಕೋಪಯೋಗಿ ಇಲಾಖೆಯ ಅಘನಾಶಿನಿ ನದಿ ಸೇತುವೆಯ ಹೆಚ್ಚುವರಿ ಕಾಮಗಾರಿ ಹಾಗೂ ಸಂಪರ್ಕ ರಸ್ತೆಗೆ ಇಲಾಖೆಯಿಂದ ಹೆಚ್ಚುವರಿಯಾಗಿ ₹3 ಕೋಟಿ ಮಂಜೂರಾಗಿದೆ ಎಂದು ಇಲಾಖೆಯ ಕುಮಟಾ ಎ.ಇ.ಇ ಎಂ.ಪಿ. ನಾಯ್ಕ ತಿಳಿಸಿದ್ದಾರೆ.

‘ಈಚೆಗೆ ಕುಮಟಾಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಬಂದಾಗ ಹೆಗಡೆ-ಮಿರ್ಜಾನ ನಡುವಿನ ಸೇತುವೆಗೆ ಸಂಬಂಧಿಸಿ ಅಗತ್ಯವಿದ್ದ ಹೆಚ್ಚುವರಿ ಕಾಮಗಾರಿಗೆ ಹಣ ಮಂಜೂರಿಗಾಗಿ ಮನವಿ ಮಾಡಲಾಗಿತ್ತು. ₹3 ಕೋಟಿ ಮೊತ್ತದಲ್ಲಿ ಸೇತುವೆಯ ಎರಡು ಕಡೆ ಸಿಮೆಂಟ್ ಕಾಂಕ್ರೀಟ್ನಿಂದ ಸಂಪರ್ಕ ರಸ್ತೆ, ಸರ್ವಿಸ್ ರಸ್ತೆ ಹಾಗೂ ಗಟಾರ ನಿರ್ಮಾಣ ಮಾಡಲಾಗುವುದು. ಸೇತುವೆಯಿಂದ ಹೆಗಡೆ ತಾರಿಬಾಗಿಲು ಶಾಲೆವರೆಗೆ ಸುಮಾರು 500 ಮೀಟರ್ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಕೊಳ್ಳಲಾಗುವುದು. ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಕೈಕೊಳ್ಳಲಾಗುವುದು' ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-20-48900974

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.