ಕುಮಟಾ: ’ಸೈನಿಕರ ಜೀವನ ಶಿಸ್ತನ್ನು ಜನ ಸಾಮಾನ್ಯರೂ ಅಳವಡಿಸಿಕೊಂಡರೆ ಅಂಥವರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ' ಎಂದು ಕುಮಟಾ ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ ಹೇಳಿದರು.

ಪಟ್ಟಣದ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಂಕಣ ಎಜುಕೇಶನ್ ಟ್ರ್ರಸ್ಟ್, ಮಂಗಳೂರಿನ ವಿಧಾತ್ರಿ ಆಕಾಡೆಮಿ ಹಾಗೂ ಸ್ಥಳೀಯ ನಿವೃತ್ತ ಸನಿಕರ ತಂಡದ ಸಹಯೋಗದಲ್ಲಿ ಈಚೆಗೆ ಆರಂಭವಾದ 28 ದಿವಸಗಳ ಅಗ್ನಿವೀರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

’ಸೇನೆಗೆ ಸೇರಲು ಸಹಕಾರಿಯಾಗ ಬಲ್ಲ ತರಬೇತಿ, ಕೌಶಲಗಳನ್ನು ನೀಡಲು ಗ್ರಾಮೀಣ ವಿದ್ಯಾರ್ಥಿಗಳನ್ನೂ ಆಯ್ಕೆ ಮಾಡಿರುವುದು ಶ್ಲಾಘನೀಯ ಸಂಗತಿ. ಅವರಿಗೆ ಸಮವಸ್ತ್ರ, ಶೂ, ಆಹಾರ ಹಾಗೂ ವಸತಿಗೆ ಅತ್ಯಂತ ಕಡಿಮೆ ಶುಲ್ಕ ಆಕರಿಸುತ್ತಿರುವುದು ಹಾಗೂ ಅತ್ಯಂತ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಸೌಲಭ್ಯ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕೊಂಕಣ ಎಜುಕೇಶನ್ ಟ್ರ್ರಸ್ಟ್ ಕಾರ್ಯದರ್ಶಿ ಮುರಳಿಧರ ಪ್ರಭು, `ಶಿಬಿರದಲ್ಲಿ ದೈಹಿಕ ತರಬೇತಿ, ನಾಯಕತ್ವ ಗುಣ ಬೆಳೆಸಿಕೊಳ್ಳುವ ಮಾರ್ಗದರ್ಶನದ ಜೊತೆಯಲ್ಲಿ ಮುಂದೆ ಸೈನ್ಯಕ್ಕೆ ಸೇರುವವರಿಗೆ ಲಿಖಿತ ಪರೀಕ್ಷೆಯ ತಯಾರಿ ಬಗ್ಗೆಯೂ ಮಾಹಿತಿ ನೀಡುತ್ತಿರುವುದು ವಿಶೇಷ' ಎಂದರು.

ಕೊಂಕಣ ಎಜುಕೇಶನ್ ಟ್ರಸ್ಟ್ ಪದಧಿಕಾರಿ ರಮೇಶ ಪ್ರಭು, ವಿಧಾತ್ರಿ ಆಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಜಿ.ಎಸ್.ಹೆಗಡೆ ಕಣ್ಣಿ, ಸುರೇಶ ಹೆಗಡೆ, ನಿವೃತ್ತ ಸೈನಿಕ ಗಿರೀಶ ನಾಯ್ಕ, ಮುಖ್ಯ ಶಿಕ್ಷಕ ಗಣೇಶ ಜೋಶಿ, ಉಪನ್ಯಾಸಕ ಚಿದಾನಂದ ಭಂಡಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-20-1196844075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.