ಕುಮಟಾ: ‘ಸಾರ್ವಜನಿಕರಿಗೆ ಅಗತ್ಯವುಳ್ಳ ವ್ಯವಸ್ಥಿತ ರುದ್ರಭೂಮಿಯನ್ನು ದಾನಿಗಳ ನೆರವಿನೊಂದಿಗೆ ಊರ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ನಿರ್ಮಿಸಿಕೊಡುತ್ತಿರುವುದು ಮಾದರಿ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ಚಿತ್ರಿಗಿ ಶಾಲೆಯ ಸ್ಟೂಡೆಂಟ್ ವೆಲ್ಪೇರ್ ಟ್ರಸ್ಟ್ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಹಾಗೂ ದಾನಿಗಳ ನೆರವಿನೊಂದಿಗೆ ಸಾರ್ವಜನಿಕರಿಗೆ ನಿರ್ಮಿಸಿಕೊಟ್ಟ ವ್ಯವಸ್ಥಿತ ರುದ್ರಭೂಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಹೆಚ್ಚಿನ ಶಾಲೆಗಳ ಹಳೆಯ ವಿದ್ಯಾರ್ಥಿ ಸಂಘ ಕ್ರಿಯಾಶೀಲವಾಗಿ ಕೆಲಸ ಮಾಡಿ ಸಮುದಾಯಕ್ಕೆ ಕೊಡುಗೆ ನೀಡುವುದು ಅಪರೂಪ. ಎಲ್ಲ ಸೌಲಭ್ಯಗಳನ್ನು ಸರ್ಕಾರವೇ ನೀಡಬೇಕು ಎನ್ನುವುದು ಅಸಾಧ್ಯ. ಚಿತ್ರಿಗತಿ ಶಾಲೆ ಹಳೆಯ ವಿದ್ಯಾರ್ಥಿ ಸಂಘ ತಮ್ಮ ಶಾಲಾ ದಿನಗಳ ಸವಿ ನೆನಪಿಗೆ ಸಮುದಾಯದ ಸಹಕಾರಿಂದ ಸಾರ್ವಜನಿಕರಿಗೆ ಅತ್ಯಗತ್ಯವುಳ್ಳ ವ್ಯವಸ್ಥಿತ ರುದ್ರಭೂಮಿ ಕೊಡುಗೆಯಾಗಿ ನೀಡಿದೆ’ ಎಂದರು.

ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ, ಪುರಸಭೆ ಮುಖ್ಯಾಧಿಕಾರಿ ವಿದ್ಯಾದರ ಕಲಾದಗಿ, ದಾಂಡೇಲಿ ಪೇಪರ್ ಮಿಲ್ಸ್ ಅಧಿಕಾರಿಗಳಾದ ರಾಜೇಂದ್ರ ಜೈನ್, ರಾಘವೇಂದ್ರ ಜೆ.ಆರ್., ರಾಜೇಶ ತಿವಾರಿ, ಖಲೀಲ್ ಕುಲಕರ್ಣಿ, ರಾಜೇಶ ರೋಸಯ್ಯ, ಚಿತ್ರಿಗಿ ಸ್ಟೂಡೆಂಟ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಉದಯ ಹುಲಸ್ವಾರ, ಸಂತೋಷ ನಾಯ್ಕ, ದಾಕ್ಷಯಿಣಿ ಅರಿಗ, ಬ್ಯಾಂಕ್ ನಿವೃತ್ತ ಅಧಿಕಾರಿ ಸುರೇಶ ಭಟ್ಟ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-20-954659790

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.