ಕುಮಟಾ: ತಾಲ್ಲೂಕಿನ ಕುಮಟಾ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಮೀನುಗಾರರ ಮುಖಂಡರಾದ ಜೈವಿಠ್ಠಲ ಕುಬಾಲ ಹಾಗೂ ಉಪಾಧ್ಯಕ್ಷರಾಗಿ ನಾಗಪ್ಪ ಹರಿಕಂತ್ರ ಮಂಗಳವಾರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಕುಮಟಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಜೈವಿಠ್ಠಲ ಕುಬಾಲ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕುಮಟಾ ಮೀನುಗಾರರ ಸಹಕಾರ ಸಂಘ 1959 ರಲ್ಲಿ ಆರಂಭಗೊಂಡಿದ್ದು, ಅಂದಿನಿಂದ ಕಳೆದ ವರ್ಷದವರೆಗೆ ಸಂಘದ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಈ ವರ್ಷ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ’ ಎಂದರು.

‘2025ರ ಆ.17ರಂದು ನಮ್ಮ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ಗುಂಪಿನ 250 ಅನರ್ಹ ಮತದಾರರು ಹೈಕೋರ್ಟ್ಗೆ ಹೋಗಿ ಮತದಾನ ಹಕ್ಕು ಪಡೆದುಕೊಂಡು ಬಂದರು. ನಂತರ ಆ ಮತವನ್ನು ಎಣಿಕೆ ಮಾಡುವ ಬಗ್ಗೆ ಕಾನೂನು ಬಿಕ್ಕಟ್ಟು ಉಂಟಾದಾಗ ಮತ್ತೆ ಹೈಕೋರ್ಟ್ ಮೊರೆ ಹೋಗಿ 250 ಮತಗಳನ್ನು ಎಣಿಕೆ ಮಾಡುವ ಬಗ್ಗೆ ಎರಡನೇ ಹಂತದ ನ್ಯಾಯಾಲಯ ಆದೇಶ ಪಡೆಯಲಾಯಿತು. ಮತ ಎಣಿಕೆ ನಡೆದಾಗ ನಮ್ಮ ಗುಂಪಿನ ನಿರ್ದೇಶಕರು ಆಯ್ಕೆಯಾಗಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಹೊಸಬರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ, ಮೀನುಗಾರಿಕಾ ಸಮಯದಲ್ಲಿ ಬಳಸುವಲೈಫ್ ಜಾಕೆಟ್, ದೋಣಿ, ಬಲೆ ಮುಂತಾದವುಗಳಿಗೆ ಸಾಲ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ’ ಎಂದರು.

ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ನಾಗಪ್ಪ ಹರಿಕಂತ್ರ, ಬಾಬು ಕುಬಾಲ, ನಂದಾ ಜಾದವ, ಶಂಕರ ಶೋಡನಕರ್, ಗೋಪಾಲಕೃಷ್ಣ ಅಂಬಿಗ, ಲಕ್ಷ್ಮಣ ಅಂಬಿಗ, ಮಾಲಾ ಅಂಬಿಗ, ಶಾಂತಿ ಅಂಬಿಗ, ವಕೀಲೆ ನಫೀಜಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-20-381133274

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.